ಮಂಗಳವಾರ, ಜನವರಿ 21, 2020
19 °C

ಎಐಟಿಎ ವಿರುದ್ಧ ಭೂಪತಿ ಕಿಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೆಲ್ಬರ್ನ್ (ಐಎಎನ್‌ಎಸ್): ಮಹತ್ವದ ಅಂತರರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಆಡುವ ಡಬಲ್ಸ್ ಜೋಡಿಯನ್ನು ಸೂಕ್ತವಾದ ರೀತಿಯಲ್ಲಿ ರೂಪಿಸದ ಅಖಿಲ ಭಾರತ ಟೆನಿಸ್ ಸಂಸ್ಥೆ (ಎಐಟಿಎ) ವಿರುದ್ಧ ಮಹೇಶ್ ಭೂಪತಿ ಕಿಡಿಕಾರಿದ್ದಾರೆ.ದೇಶವನ್ನು ಪ್ರತಿನಿಧಿಸುವ ತಂಡವನ್ನು ಆಯ್ಕೆ ಮಾಡುವಾಗ ಯಾವುದೇ ವಿವೇಚನೆ ಇಲ್ಲದೇ ಮನಬಂದಂತೆ ಜೋಡಿಗಳನ್ನು ಮಾಡುತ್ತಾರೆಂದು ದೂರಿರುವ ಅವರು `2010ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಸಾನಿಯಾ ಮಿರ್ಜಾ ಅವರನ್ನು ಮಿಶ್ರ ಡಬಲ್ಸ್‌ನಲ್ಲಿ ಲಿಯಾಂಡರ್ ಪೇಸ್ ಜೊತೆಗೆ ಆಡಿಸಲಾಗಿತ್ತು. ಆ ಕೂಟಕ್ಕೆ ಮುನ್ನ ನಾನು ಹಾಗೂ ಸಾನಿಯಾ ಆಸ್ಟ್ರೇಲಿಯಾ ಓಪನ್‌ನಲ್ಲಿ ಚಾಂಪಿಯನ್ ಆಗಿದ್ದೆವು. ಆದರೂ ಆ ಅಂಶವನ್ನು ಪರಿಗಣಿಸಲಿಲ್ಲ~ ಎಂದು ಗುರುವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.ಆಸ್ಟ್ರೇಲಿಯಾ ಓಪನ್‌ನಲ್ಲಿ ಆಡುತ್ತಿರುವ ಅವರು ಲಂಡನ್ ಒಲಿಂಪಿಕ್‌ನಲ್ಲಿ ತಮ್ಮ ಜೊತೆಗೆ ಮಿಶ್ರಡಬ      ಲ್ಸ್‌ನಲ್ಲಿ ಯಾರು ಆಡುತ್ತಾರೆ ಎನ್ನುವುದು `ಗೊತ್ತಿಲ್ಲ~ವೆಂದು ಸ್ಪಷ್ಟವಾಗಿ ಹೇಳಿದರು.

`ಗ್ರ್ಯಾಂಡ್ ಸ್ಲಾಮ್ ಟೂರ್ನಿಗಳ ನಾನು ಮತ್ತು ಸಾನಿಯಾ ಮತ್ತೆ ಚಾಂಪಿಯನ್ ಪಟ್ಟ ಪಡೆಯಲು ಪ್ರಯತ್ನಿಸುತ್ತೇವೆ ಎಂದು ಮಾತ್ರ ಹೇಳಬಲ್ಲ. ಆದರೆ ಮುಂಬರುವ ಒಲಿಂಪಿಕ್‌ನಲ್ಲಿ ನನ್ನೊಂದಿಗೆ ಯಾರಿರುತ್ತಾರೆಂದು ತಿಳಿದಿಲ್ಲ~ ಎಂದರು.`ಎಐಟಿಎ ಒಳಗಿನ ರಾಜಕೀಯ ಯಾವ ಮಟ್ಟದಲ್ಲಿ ಇದೆಯೆಂದರೆ ನಮಗೆ ಸೂಕ್ತ ಎನಿಸುವ ಜೊತೆಗಾರರನ್ನು ಹೊಂದುವುದೂ ಸಾಧ್ಯವಿಲ್ಲ~ ಎಂದ ಅವರು `ಕಾಮನ್‌ವೆಲ್ತ್ ಕೂಟದ ಸಂದರ್ಭದಲ್ಲಿನ ಘಟನೆಯ ನಂತರ ಎಐಟಿಎ ಹೇಗೆ ಯೋಚನೆ ಮಾಡುತ್ತದೆಂದು ಸ್ಪಷ್ಟವಾಗಿ ಅರಿತಿದ್ದೇನೆ. ಆದ್ದರಿಂದ ಲಂಡನ್ ಒಲಿಂಪಿಕ್‌ನಲ್ಲಿ ಯಾರೊಂದಿಗೆ ಆಡುತ್ತೇನೆಂದು ಯೋಚನೆ ಮಾಡುವುದನ್ನೇ ಕೈಬಿಟ್ಟಿದ್ದೇನೆ~ ಎಂದು ಬೇಸರದಿಂದ ನುಡಿದರು.

ಪ್ರತಿಕ್ರಿಯಿಸಿ (+)