ಬುಧವಾರ, ಮೇ 18, 2022
21 °C

ಎನ್‌ಎಸ್‌ಡಿ ಡೀಮ್ಡ ವಿ.ವಿ ಮಾನ್ಯತೆ ರದ್ದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ರಾಷ್ಟ್ರೀಯ ನಾಟಕ ಶಾಲೆಗೆ ನೀಡಲಾಗಿದ್ದ ಡೀಮ್ಡ ವಿಶ್ವವಿದ್ಯಾಲಯದ ಮಾನ್ಯತೆಯನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ರದ್ದುಗೊಳಿಸಲು ಕೇಂದ್ರ ಸಂಸ್ಕೃತಿ ಸಚಿವಾಲಯ ತೀರ್ಮಾನಿಸಿದೆ.ಡೀಮ್ಡ ವಿಶ್ವವಿದ್ಯಾಲಯಕ್ಕೆ ಬದಲಾಗಿ ಇದನ್ನು ರಾಷ್ಟ್ರೀಯ ಮಾನ್ಯತೆಯುಳ್ಳ ಸಂಸ್ಥೆ ಅಥವಾ ಸಂಸತ್ ಕಾಯ್ದೆ ಅನುಸಾರ ವಿಶೇಷ ವಿಶ್ವವಿದ್ಯಾಲಯ ಎಂದು ಗುರುತಿಸುವಂತೆ ಎನ್‌ಎಸ್‌ಡಿ ಸೊಸೈಟಿ ಶಿಫಾರಸು ಮಾಡಿದ್ದು, ಇದರ ಅನುಸಾರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಅಧಿಕಾರಿಗಳು ವಿವರಿಸಿದ್ದಾರೆ.ಡೀಮ್ಡ ವಿವಿ ಮಾನ್ಯತೆಯಿಂದ ಶಿಕ್ಷಕರ ನೇಮಕಾತಿ ಹಾಗೂ ವೃತ್ತಿಪರ ತರಬೇತಿಯಂತಹ ವಿಷಯಗಳಲ್ಲಿ ಆಡಳಿತಾತ್ಮಕ ಸ್ವಾಯತ್ತತೆ ಹಲವು ತೊಂದರೆಗಳನ್ನು ಉಂಟು ಮಾಡುತ್ತಿದೆ ಆದ್ದರಿಂದ ಡೀಮ್ಡ ಮಾನ್ಯತೆಯ ಬದಲಾಗಿ ಇದಕ್ಕೆ ವಿಶೇಷ ವಿಶ್ವವಿದ್ಯಾಲಯದ ಅಥವಾ ರಾಷ್ಟ್ರೀಯ ಮಾನ್ಯತೆಯುಳ್ಳ ಸಂಸ್ಥೆ ಎಂದು ಗುರುತಿಸುವುದು ಸೂಕ್ತ ಎಂಬುದು ಎನ್‌ಎಸ್‌ಡಿ ಸೊಸೈಟಿಯ ಅಭಿಪ್ರಾಯವಾಗಿದೆ.2005ರಿಂದ ರಾಷ್ಟ್ರೀಯ ನಾಟಕ ಶಾಲೆಗೆ ಡೀಮ್ಡ ವಿಶ್ವವಿದ್ಯಾಲಯದ ಮಾನ್ಯತೆ ನೀಡಲಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.