ಚಿಕ್ಕಬಳ್ಳಾಪುರ: ನಗರದ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಎಬಿವಿಪಿ ಸಂಘಟನೆಯು ಈಚೆಗೆ ಆಯೋಜಿಸಿದ್ದ ಭ್ರಷ್ಟಾಚಾರ ವಿರೋಧಿ ಕಾರ್ಯ ಕ್ರಮದಲ್ಲಿ ವಿದ್ಯಾರ್ಥಿಗಳನ್ನು ಬಲವಂತ ವಾಗಿ ಕೂರಿಸಿಕೊಂಡಿದ್ದಲ್ಲದೇ, ಮನೆಗೆ ಹೋಗದಂತೆ ತಡೆದಿರುವುದು ಖಂಡ ನೀಯ ಎಂದು ಭಾರತ ವಿದ್ಯಾರ್ಥಿ ಒಕ್ಕೂಟ (ಎಸ್ಎಫ್ಐ) ಖಂಡಿಸಿದೆ.ಶಾಲೆಗೆ ಬೇಗನೇ ಬರುವ ವಿದ್ಯಾರ್ಥಿ ಗಳು ಕೆಲವೊಮ್ಮೆ ತಿಂಡಿ ಸಹ ತಿಂದಿರುವು ದಿಲ್ಲ. ತಡವಾಗಿ ಹೋದರೆ ಮನೆಯಲ್ಲಿ ಬಯ್ಯುತ್ತಾರೆ ಎಂದು ವಿದ್ಯಾರ್ಥಿಗಳು ಬೇಗನೇ ಮನೆಗೆ ಹೋಗಲು ಬಯಸು ತ್ತಾರೆ. ಆದರೆ ಮಕ್ಕಳ ಸಂಕಷ್ಟವನ್ನೇ ಅರ್ಥ ಮಾಡಿಕೊಳ್ಳದ ಎಬಿವಿಪಿ ಸಂಘಟನೆಯವರು ಕಾಲೇಜಿನ ಮೂರು ಗೇಟುಗಳನ್ನು ಮುಚ್ಚಿ ಬಲವಂತವಾಗಿ ಕಾರ್ಯಕ್ರಮಕ್ಕೆ ಕೂರಿಸಿದ್ದಾರೆ ಎಂದು ಎಸ್ಎಫ್ಐ ಜಿಲ್ಲಾ ಘಟಕದ ಉಪಾ ಧ್ಯಕ್ಷ ಕುಂದಲಗುರ್ಕಿ ಮುನೀಂದ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಭ್ರಷ್ಟಾಚಾರ ವಿರುದ್ಧ ಹೋರಾಟ ಮಾಡುತ್ತಿರುವುದಾಗಿ ಹೇಳಿಕೊಳ್ಳುತ್ತಿ ರುವ ಎಬಿವಿಪಿ ಸಂಘಟನೆಯವರಿಗೆ ಕೇಂದ್ರ ಸರ್ಕಾರದಲ್ಲಿನ ಭ್ರಷ್ಟಾಚಾರ ಮಾತ್ರವೇ ಕಾಣುತ್ತಿದೆ ಹೊರತು ರಾಜ್ಯ ಸರ್ಕಾರದ ಭ್ರಷ್ಟಾಚಾರ ಮತ್ತು ಹಗರಣಗಳು ಕಾಣುತ್ತಿಲ್ಲ. ಗಣಿ ಹಗರಣ, ಭೂ ಹಗರಣ, ಡಿ-ನೋಟಿಫಿಕೇಷನ್ ಹಗರಣ, ಮಾಜಿ ಸಚಿವರಾದ ಜನಾರ್ದನ ರೆಡ್ಡಿ, ಕಟ್ಟಾ ಸುಬ್ರಹ್ಮಣ್ಯ ರೆಡ್ಡಿ ಜೈಲು ಸೇರಿರುವುದು, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಜೈಲು ಸೇರುವ ಆತಂಕ ಎದುರಿಸುತ್ತಿರುವುದರ ಬಗ್ಗೆ ಎಬಿವಿಪಿ ಮಾತನಾಡುವುದಿಲ್ಲ. ಕೇಂದ್ರ ಸರ್ಕಾರದ ಭ್ರಷ್ಟಾಚಾರ ಬಗ್ಗೆ ಮಾತ್ರ ಮಾತನಾಡುವ ಎಬಿವಿಪಿ ಸಂಘಟನೆ ಯುವಜನರ ಮತ್ತು ವಿದ್ಯಾರ್ಥಿಗಳ ದಿಕ್ಕು ತಪ್ಪಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಬರ ಘೋಷಣೆಗೆ ಆಗ್ರಹ
ಬಾಗೇಪಲ್ಲಿ: ಯಾವುದೇ ನದಿ ನಾಲೆಗಳಲ್ಲಿದ ಹಾಗೂ ಮಳೆಯಾ ಧಾರಿತ ತಾಲ್ಲೂಕನ್ನು ಸರ್ಕಾರ ಬರ ಪೀಡಿತ ಪ್ರದೇಶವೆಂದು ಘೋಷಿಸುವಂತೆ ಶಾಸಕ ಎನ್.ಸಂಪಂಗಿ ಒತ್ತಾಯಿ ಸಿದ್ದಾರೆ.

ಈ ಸಂಬಂಧ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರಿಗೆ ಮನವಿ ಮಾಡಿದ್ದಾರೆ. ರಾಜ್ಯದ 70 ತಾಲ್ಲೂಕು ಗಳನ್ನು ಬರಪೀಡಿತ ಪ್ರದೇಶಗಳು ಎಂದು ಸರ್ಕಾರ ಘೋಷಿಸಿದ್ದು, ಬಾಗೇಪಲ್ಲಿ, ಗುಡಿಬಂಡೆ ತಾಲ್ಲೂಕನ್ನು ಕೈ ಬಿಡಲಾಗಿದೆ. ನಂಜುಂಡಪ್ಪ ವರದಿ ಯಲ್ಲಿ ಈ ಎರಡು ತಾಲ್ಲೂಕುಗಳು ಅತಿ ಹಿಂದುಳಿದ ತಾಲ್ಲೂಕುಗಳೆಂದು ಗುರುತಿಸಲಾಗಿದೆ. ತಾಲ್ಲೂಕಿನಲ್ಲಿ ಮಳೆ ಪ್ರಮಾಣ ಹಾಗೂ ಬಿತ್ತನೆ ಕಾರ್ಯದ ಬಗ್ಗೆ ಸರ್ಕಾರ ಸಮಗ್ರ ವರದಿ ಪಡೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ತಾಲ್ಲೂಕಿನ ಬಹುತೇಕ ಭಾಗಗಳಲ್ಲಿ ಜನರು ಕೃಷಿಯನ್ನೇ ನಂಬಿ ಬದುಕು ಸಾಗಿಸುತ್ತಿದ್ದಾರೆ. ಒಂದೆಡೆ ಬೆಳೆಗಳಿಗೆ ಸೂಕ್ತ ಬೆಲೆಗಳಿಲ್ಲ, ಮತ್ತೂಂದು ಕಡೆ ವಿದ್ಯುತ್ ಸಮಸ್ಯೆ ಕಾಡುತ್ತಿದೆ. ತಾಲ್ಲೂಕಿನಲ್ಲಿ ಸಂಭವಿಸಿದ ಬೆಳೆ ನಷ್ಟವನ್ನು ಗಣನೆಗೆ ತೆಗೆದುಕೊಂಡು ಬಾಗೇಪಲ್ಲಿ, ಗುಡಿಬಂಡೆ ತಾಲ್ಲೂಕನ್ನು ಬರಪೀಡಿತ ಪ್ರದೇಶಗಳು ಎಂದು ಘೋಷಿಸಿ ಬರ ಪರಿಹಾರ ವಿತರಿಸಬೇಕು ಎಂದು ಒತ್ತಾಯಿಸಿದ್ದಾರೆ.

ಈ ಅಂಶವನ್ನು ಮುಖ್ಯಮಂತ್ರಿ ಬಳಿ ಚರ್ಚಿಸಿದ್ದೇನೆ. ಈ ಸಂಬಂಧ ಸಮಗ್ರ ಅಧ್ಯಯನ ನಡೆಸಿ ಬರಪೀಡಿತ ಪ್ರದೇಶ ಎಂದು ಅಧಿಕೃತವಾಗಿ ಘೋಷಿಸುವ ಭರವಸೆಯನ್ನು ಮುಖ್ಯಮಂತ್ರಿ ನೀಡಿದ್ದಾರೆ ಎಂದು ಪ್ರತಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.