ಸೋಮವಾರ, ಜೂನ್ 21, 2021
29 °C

ಎರಡನೆ ಪರಮಾಣು ಇಂಧನ ಪುನರ್‌ ಸಂಸ್ಕರಣ ಸಂಕೀರ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ದೇಶದಲ್ಲಿ ಪರ­ಮಾಣು ಸ್ಥಾವರಗಳ ಸಂಖ್ಯೆ ಹೆಚ್ಚುತ್ತಿ­ರುವ ಹಿನ್ನೆಲೆಯಲ್ಲಿ ಪರಮಾಣು ಇಂಧನ ಪುನರ್‌ಸಂಸ್ಕರಣೆಗೆ ಎರಡನೇ ಪರಮಾಣು ಇಂಧನ ಸಂಕೀರ್ಣವನ್ನು ರಾಜಸ್ತಾನದಲ್ಲಿ ಸ್ಥಾಪಿಸಲಾಗುತ್ತಿದೆ.ರಾಜಸ್ಥಾನದ ಕೋಟಾದಲ್ಲಿ ರಾವಭಾಟಾ ಪರಮಾಣು ಸ್ಥಾವರದ ಬಳಿ 2400 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಪರಮಾಣು ಇಂಧನ ಸಂಕೀರ್ಣವನ್ನು ಸ್ಥಾಪಿಸಲಾಗುತ್ತಿದೆ.ಭಧ್ರತೆಗೆ ಸಂಬಂಧಿಸಿದ ಸಚಿವ ಸಂಪುಟ ಸಮಿತಿಯು ಈಗಾಗಲೇ ಈ ಸಂಕೀರ್ಣ ಸ್ಥಾಪನೆಗೆ ಹಸಿರು ನಿಶಾನೆ ತೋರಿಸಿದೆ. ಪರಮಾಣು ಇಂಧನ ಬೇಡಿಕೆ­ ಗಮನದಲ್ಲಿ ಇಟ್ಟು­ಕೊಂಡು ಎರಡನೇ ಸಂಕೀರ್ಣವನ್ನು ಆರಂಭಿ­ಸಲು ಕ್ರಮ ತೆಗೆದುಕೊಳ್ಳಲಾಗಿದೆ ಎಂದು  ಮೂಲಗಳು ತಿಳಿಸಿವೆ.12ನೇ ಪಂಚವಾರ್ಷಿಕ ಯೋಜನೆ­ಯಲ್ಲಿ ದೇಶದಲ್ಲಿ 17,300 ಮೆ. ವಾ. ಪರಮಾಣು ವಿದ್ಯುತ್‌ ಉತ್ಪಾದಿಸುವ ಗುರಿ ಹಾಕಿಕೊಳ್ಳ­ಲಾಗಿದೆ. ದೇಶದಲ್ಲಿ ಪ್ರಸಕ್ತ 5500 ಮೆ. ವಾ. ಪರಮಣು ವಿದ್ಯುತ್‌ ಉತ್ಪಾದಿಸಲಾಗುತ್ತಿದೆ.ಹರಿಯಾಣದ ಗೋರಕ್‌ಪುರ, ಮಹಾರಾಷ್ಟ್ರದ ಜೈತಾಪುರ ಮತ್ತು ಗುಜರಾತ್‌ದ ಮಿತಿವೃದ್ಧಿಯಲ್ಲಿ ಸ್ಥಾಪಿ­ಸಲಾ­ಗುತ್ತಿರುವ ಪರಮಾಣು ಸ್ಥಾವರ­ಗಳ ಪರಮಾಣು ಇಂಧನ ಅಗತ್ಯವನ್ನು ಕೋಟಾದ ಪರಮಾಣು ಇಂಧನ ಪುನರ್‌ಸಂಸ್ಕರಣ ಸಂಕೀರ್ಣವು ಪೂರೈಸಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.