ಎರಡು ಬಾರಿ ನಾಣ್ಯ ಚಿಮ್ಮಿದ ದೋನಿ

7

ಎರಡು ಬಾರಿ ನಾಣ್ಯ ಚಿಮ್ಮಿದ ದೋನಿ

Published:
Updated:
ಎರಡು ಬಾರಿ ನಾಣ್ಯ ಚಿಮ್ಮಿದ ದೋನಿ

ಮುಂಬೈ: ಕ್ರಿಕೆಟ್ ಪಂದ್ಯದಲ್ಲಿ ಆಟ ಆರಂಭಿಸುವ ಮೊದಲು ನಾಣ್ಯ ಚಿಮ್ಮಲಾಗುತ್ತದೆ. ಯಾವ ನಾಯಕ ಸರಿಯಾಗಿ ಹೇಳುತ್ತಾನೋ ಆತನಿಗೆ ಮೊದಲು ಬ್ಯಾಟ್ ಅಥವಾ ಬೌಲ್ ಮಾಡುವ ಅವಕಾಶ ಸಿಗುತ್ತದೆ. ಆದರೆ ವಿಶ್ವ ಕಪ್ ಕ್ರಿಕೆಟ್ ಫೈನಲ್‌ನಲ್ಲಿ ಶನಿವಾರ ಎರಡು ಬಾರಿ ಟಾಸ್ ಮಾಡಲಾಯಿತು. ಮಹೇಂದ್ರಸಿಂಗ್ ದೋನಿ ಮತ್ತು ಕುಮಾರ ಸಂಗಕ್ಕಾರ ನಡುವೆ ಗೊಂದಲವಾಗಿದ್ದೇ ಇದಕ್ಕೆ ಕಾರಣ.ದೋನಿ ನಾಣ್ಯ ಚಿಮ್ಮಿದರು. ಸಂಗಕ್ಕಾರ ರಾಜ ಎಂದು ಕರೆದರು. ಆದರೆ ದೋನಿಗೆ ಅವರು ಹೇಳಿದ್ದು ಕೇಳಿರಲಿಲ್ಲ. ರಾಜನೇ ಆಗಿತ್ತು. ಆಗ ದೋನಿ ಮತ್ತು ಸಂಗಕ್ಕಾರ ನಡುವೆ ಚಿಕ್ಕ ವಾದ ನಡೆಯಿತು. ಪಂದ್ಯದ ರೆಫರಿ ನ್ಯೂಜಿಲೆಂಡ್‌ನ ಜೆಫ್ ಕ್ರೋವ್ ಮಧ್ಯೆ ಪ್ರವೇಶಿಸಿ ದೋನಿಗೆ ಇನ್ನೊಮ್ಮೆ ನಾಣ್ಯ ಚಿಮ್ಮುವಂತೆ ಕೋರಿದರು. ಆಗಲೂ ರಾಜನೇ ಮೇಲೆ ಮುಖಮಾಡಿದ್ದ. ಕುಮಾರ ಸಂಗಕ್ಕಾರ ಅನುಮಾನವಿಲ್ಲದೇ ಬ್ಯಾಟಿಂಗ್ ಆಯ್ದುಕೊಂಡರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry