ಗುರುವಾರ , ಮೇ 13, 2021
19 °C

ಎಲ್ಜಿನ್ಗೆ 91

ಎನ್. ಪ್ರಸನ್ನಕುಮಾರ್ Updated:

ಅಕ್ಷರ ಗಾತ್ರ : | |

ಎಲ್ಜಿನ್ಗೆ 91

ಚಲನಚಿತ್ರಗಳು ಕಾಲಿಡದ ದಿನಗಳಲ್ಲಿ ನಾಟಕ ಪ್ರದರ್ಶಿಸಲು ಕಟ್ಟಿದ ಎಲ್ಜಿನ್ ಡ್ರಾಮಾ ಹಾಲ್ ಆನಂತರ ಚಿತ್ರಮಂದಿರವಾಯಿತು.ಈಗ ಅದು ಒಂಬತ್ತು ದಶಕ ಪೂರೈಸಿದೆ.ನಗರದ ಹಳೆಯ ಚಿತ್ರಮಂದಿರಗಳು ಇಂದು ಇತಿಹಾಸಕ್ಕೆ ಸರಿದು, ಆ ಜಾಗದಲ್ಲಿ ಇಂದು ಬೃಹತ್ ಮಾಲ್ ಹಾಗೂ ಕಟ್ಟಡಗಳು ನಿರ್ಮಾಣಗೊಂಡಿವೆ.ಆದರೆ, ನಾಟಕ ಪ್ರದರ್ಶನಕ್ಕಾಗಿಯೇ ದಶಕಗಳ ಹಿಂದಿಯೇ ನಿರ್ಮಾಣವಾದ ಡ್ರಾಮಾ ಸಭಾಂಗಣವೊಂದು ಚಿತ್ರಮಂದಿರವಾಗಿ ಪರಿವರ್ತನೆಗೊಂಡಿದ್ದು ಮಾತ್ರವಲ್ಲದೆ ಇಂದಿಗೂ ಬಹು ಭಾಷಾ ಚಿತ್ರಗಳನ್ನು ಬಿಟ್ಟೂ ಬಿಡದೆ ಪ್ರದರ್ಶಿಸುತ್ತಿದೆ ಎಂದರೆ ಆಶ್ಚರ್ಯ ಎನಿಸಬಹುದು.ಅದುವೇ  ಶಿವಾಜಿನಗರದ `ಎಲ್ಜಿನ್ ಚಿತ್ರ ಮಂದಿರ~. ಬಹುತೇಕ ಚಿತ್ರರಸಿಕರಿಗೆ ಇದರ ಪರಿಚಯ ತುಂಬ ಕಡಿಮೆ! ಇನ್ನೂ ವಿಶೇಷ ಎಂದರೆ ಆದರೆ ಈ ಚಿತ್ರಮಂದಿರಕ್ಕೀಗ 91ರ ಹರೆಯ.ಸ್ವಾತಂತ್ರ್ಯ ಪೂರ್ವದಲ್ಲಿ ನಿರ್ಮಾಣವಾದ ಈ ಚಿತ್ರಮಂದಿರ ನಗರದಲ್ಲಿ ಉಳಿದಿರುವ ಹಳೆಯ ಚಿತ್ರಮಂದಿರಗಳ ಗುಂಪಿನಲ್ಲಿ ಇದು ಒಂದು. ಕನ್ನಡ ಸೇರಿದಂತೆ ಹಿಂದಿ, ತೆಲುಗು, ತಮಿಳು... ಹೀಗೆ ವಿವಿಧ ಭಾಷೆಯ ಚಲನಚಿತ್ರಗಳು ಇಂದಿಗೂ ಚಿತ್ರಮಂದಿರದಲ್ಲಿ ಪ್ರದರ್ಶನ ಕಾಣುತ್ತಿವೆ.ಚಲನಚಿತ್ರಗಳು ಇನ್ನೂ ಭಾರತಕ್ಕೆ ಕಾಲಿಡದೆ ನಾಟಕಗಳೇ ಪ್ರಧಾನವಾದ ಆ  ದಿನಗಳಲ್ಲಿ ನಾಟಕಗಳನ್ನು ಪ್ರದರ್ಶಿಸಲು 1896ರಲ್ಲಿ ವೀರಭದ್ರ ಮೊದಲಿಯಾರ್ ಅವರು ` ಎಲ್ಜಿನ್ ಡ್ರಾಮಾ ಹಾಲ್~ ಹೆಸರಿನಲ್ಲಿ ಇದನ್ನು ನಿರ್ಮಿಸಿದರು.ಕರ್ನಾಟಕದ ಗುಬ್ಬಿವೀರಣ್ಣ ನಾಟಕ ಕಂಪನಿ ಸೇರಿದಂತೆ ಮುಂಬೈನ ಹಲವಾರು ನಾಟಕ ಕಂಪೆನಿಗಳ ನಾಟಕಗಳು ಇಲ್ಲಿ ಪ್ರದರ್ಶನಗೊಂಡಿವೆ.ದೇಶದಲ್ಲಿ ಸಿನಿಮಾಗಳ ಶಕೆ ಪ್ರಾರಂಭವಾದಂತಹ ದಿನಗಳಲ್ಲಿ ನಾಟಕ ಪ್ರದರ್ಶನಕ್ಕೆ ಬದಲಾಗಿ 1920 ರ ಅವಧಿಯಲ್ಲಿ ಎಲ್ಜಿನ್ ಡ್ರಾಮಾ ಹಾಲ್ ಚಿತ್ರಮಂದಿರವಾಗಿ ಬದಲಾಯಿತು. ಮೂಕಿ ಚಿತ್ರಗಳನ್ನು ಪ್ರದರ್ಶಿಸಲು ಪ್ರಾರಂಭಿಸಿತು.ನಂತರದ ದಿನಗಳಲ್ಲಿ ಚಿತ್ರರಂಗವು ಬೆಳೆದಂತೆಲ್ಲ ಟಾಕಿ (ಮಾತನಾಡುವ) ಕಪ್ಪು ಬಿಳುಪಿನ ಚಿತ್ರಗಳ ಯುಗ ಬಂತು. ಮೊಟ್ಟಮೊದಲಿಗೆ  `ಆಲ್ಮಾರ~ ಹಿಂದಿ ಭಾಷೆಯ ಕಪ್ಪು ಬಿಳುಪಿನ ಚಿತ್ರವನ್ನು ಪ್ರದರ್ಶನ ಮಾಡುವುದರೊಂದಿಗೆ ಎಲ್ಜಿನ್ ಡ್ರಾಮಾಹಾಲ್ `ಎಲ್ಜಿನ್ ಚಿತ್ರಮಂದಿರ~ವಾಗಿ ರೂಪಾಂತರಗೊಂಡಿತ್ತು.ಪ್ರಸ್ತುತ ನಗರದ ಹಳೆಯ ಚಿತ್ರಮಂದಿರಗಳಲ್ಲಿ ಒಂದಾಗಿರುವ ಈ ಚಿತ್ರಮಂದಿರ ಹೊಸದಾಗಿ ಬಿಡುಗಡೆಯಾದ ಚಲನಚಿತ್ರಗಳ ಪ್ರದರ್ಶನಕ್ಕೆ ಬದಲಾಗಿ ಮರು ಬಿಡುಗಡೆಯ (ಸೆಕೆಂಡ್ ರೀಲ್ ಫಿಲಂ) ಕನ್ನಡ, ತಮಿಳು ಮತ್ತು ಹಿಂದಿ ಭಾಷೆಯ ಹಳೆಯ ಚಲನಚಿತ್ರಗಳ ಪ್ರದರ್ಶನ ನೀಡುತ್ತಿದೆ. ಎಲ್ಲಾ ಭಾಷೆಯ ಚಿತ್ರರಸಿಕರನ್ನು ತನ್ನೆಡೆ ಸೆಳೆಯುತ್ತಿದೆ.`ನಮ್ಮ ಚಿತ್ರಮಂದಿರಕ್ಕೆ 91ವರ್ಷಗಳು ಸಂದಿವೆ ಎಂದು ನನಗೇ ಆಶ್ಚರ್ಯವಾಗುತ್ತಿದೆ. ಇಂದಿಗೂ ಬಹುಭಾಷೆಯ ಚಿತ್ರಗಳನ್ನು ಇಲ್ಲಿ ಪ್ರದರ್ಶಿಸುತ್ತಾ ಬಂದಿರುವುದು ನನಗಂತೂ ಹೆಮ್ಮೆ. ಆದರೆ  ಇತ್ತಿಚೀನ ದಿನಗಳಲ್ಲಿ ಚಿತ್ರಗಳನ್ನು ನೋಡುವವರ ಸಂಖ್ಯೆ ಕಡಿಮೆಯಾಗಿದೆ. ಇದರಿಂದಾಗಿ ಚಿತ್ರಮಂದಿರ ನಷ್ಟದಲ್ಲಿ ಮುಳುಗಿದೆ~ ಎಂದು ಬೇಸರದಿಂದ ನುಡಿಯುತ್ತಾರೆ  ಚಿತ್ರಮಂದಿರ ಈಗಿನ ಮಾಲೀಕರಾದ ಎ.ಎಸ್.ಕೃಷ್ಣಮೂರ್ತಿ.ಪಿವಿಆರ್, ಬಿಗ್ ಸಿನಿಮಾಸ್, ಐನಾಕ್ಸ್ ಮುಂತಾದ ಐಷಾರಾಮಿ ಚಿತ್ರಮಂದಿರಗಳ ಭರಾಟೆ ಹೆಚ್ಚಾಗಿರುವ ಇಂದಿನ ದಿನಗಳಲ್ಲಿ ಸಂಗಮ್, ಪ್ಲಾಜಾ, ಪುಟ್ಟಣ್ಣ ಚಿತ್ರಮಂದಿರಗಳ ರೀತಿ ಇತಿಹಾಸದಲ್ಲಿ ಮಾಯವಾಗದೆ ಇಂದಿಗೂ ಸಹ ನಾನಾ ಭಾಷೆಯ ಚಲನಚಿತ್ರಗಳನ್ನು ಪ್ರದರ್ಶಿಸುವುದರೊಂದಿಗೆ  `ಎಲ್ಜಿನ್~ ಶತಮಾನದತ್ತ ಮುನ್ನಡೆಯುತ್ತಿದೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.