ನವದೆಹಲಿ: ಏಕದಿನ ವಿಶ್ವಕಪ್ ವಿಜೇತ ಭಾರತ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿಯರಾದ ಪ್ರತಿಕಾ ರಾವಲ್, ಸ್ನೇಹ ರಾಣಾ ಮತ್ತು ರೇಣುಕಾ ಸಿಂಗ್ ಠಾಕೂರ್ ಅವರು ತಮ್ಮ ಅತ್ಯುತ್ತಮ ಆಟದ ಪ್ರದರ್ಶನಕ್ಕಾಗಿ ಭಾರತೀಯ ರೈಲ್ವೆಯಲ್ಲಿ ಬಡ್ತಿ ಪಡೆದಿದ್ದಾರೆ.

ಈ ಮೂವರು ಆಟಗಾರ್ತಿಯರು ‘ಔಟ್ ಆಫ್ ಟರ್ನ್’ ಬಡ್ತಿ ಮೂಲಕ ಗ್ರೂಪ್ ಬಿ ಅಧಿಕಾರಿ ಹುದ್ದೆಯನ್ನು ಪಡೆದಿದ್ದಾರೆ. 7ನೇ ಸಿಪಿಸಿ ಪ್ರಕಾರ ಪೇ ಮ್ಯಾಟ್ರಿಕ್ಸ್ನ ಲೆವೆಲ್–8 ಅಡಿಯಲ್ಲಿ ಗ್ರೂಪ್ ಬಿ ಗೆಜೆಟೆಡ್ ಅಧಿಕಾರಿಯ ವೇತನ ಮತ್ತು ಸವಲತ್ತು ಪಡೆಯಲು ಅರ್ಹರಾಗಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

ರೈಲ್ವೆ ಕ್ರೀಡಾ ಪ್ರಚಾರ ಮಂಡಳಿಯ ಈ ಉಪಕ್ರಮವು ಮೂವರು ಮಹಿಳಾ ಕ್ರಿಕೆಟಿಗರಿಗೆ ಆರ್ಥಿಕ ಭದ್ರತೆ ಒದಗಿಸುವುದಲ್ಲದೆ, ಅವರಿಗೆ ಆಡಳಿತಾತ್ಮಕ ಜವಾಬ್ದಾರಿಗಳನ್ನು ವಹಿಸುತ್ತದೆ ಎಂದು ಹೇಳಿದೆ.

ಇದಕ್ಕೂ ಮೊದಲು ರಾವಲ್ ಅವರು ರೈಲ್ವೆನಲ್ಲಿ ಹಿರಿಯ ಗುಮಾಸ್ತರಾಗಿ, ರೇಣುಕಾ ಮತ್ತು ರಾಣಾ ಅವರು ಕ್ರಮವಾಗಿ ಉತ್ತರ ರೈಲ್ವೆಯಲ್ಲಿ ಜೂನಿಯರ್ ಗುಮಾಸ್ತ ಮತ್ತು ಟಿಕೆಟ್ ಗುಮಾಸ್ತರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.