ಎವಾನ್ ವಾಯ್ಸಸ್ಗೆ ಐಷಾ ಕಂಠ

ಜಾಗತಿಕ ಸೌಂದರ್ಯವರ್ಧಕಗಳ ಕಂಪೆನಿಗಳ ಎವಾನ್ ಆರಂಭವಾಗಿ 125 ವರ್ಷಗಳಾಗುತ್ತಿರುವ ಹಿನ್ನೆಲೆಯಲ್ಲಿ ವೈವಿಧ್ಯಮಯ ಕಾರ್ಯಕ್ರಮ ಹಮ್ಮಿಕೊಂಡಿದೆ. ಅದರ ಅಂಗವಾಗಿ `ಎವಾನ್ ವಾಯ್ಸಸ್~ ಜಾಗತಿಕ ಯುವ ಸಂಗೀತ ಪ್ರತಿಭೆಗಾಗಿ ಶೋಧ ನಡೆಸಿದೆ. ಎವಾನ್ ವಾಯ್ಸಸ್ ವೆಬ್ಸೈಟ್ನಲ್ಲಿ ಈ ಪ್ರತಿಭಾ ಶೋಧದ ಕುರಿತು ತಿಳಿದುಕೊಂಡ ಐಷಾ ಅಲಿ, ವೆಬ್ಸೈಟ್ನಲ್ಲಿ ಪಟ್ಟಿ ಮಾಡಲಾದ ಇಂಗ್ಲಿಷ್ ಗೀತೆ ಆಯ್ದುಕೊಂಡು, ಆ ಗೀತೆಯನ್ನು ಹಾಡಿ, ವಿಡಿಯೋ ಮಾಡಿ ಕಳುಹಿಸಿದ್ದರು. ಇದರ ಆಧಾರದ ಮೇಲೆ ವಿವಿಧ ದೇಶಗಳ 178 ಜನರನ್ನು ಮೊದಲ ಸುತ್ತಿಗೆ ಆಯ್ಕೆ ಮಾಡಲಾಯಿತು. ಮಲೇಷ್ಯಾದಲ್ಲಿ ನಡೆದ ಆಡಿಷನ್ನಲ್ಲಿ ಈ ಪೈಕಿ 100 ಜನರನ್ನು ಎರಡನೇ ಸುತ್ತಿಗೆ ಆಯ್ಕೆ ಮಾಡಲಾಯಿತು. ಇದರಲ್ಲಿ ಐಷಾ ಸೇರಿ ಇಬ್ಬರು ಭಾರತೀಯರು ಆಯ್ಕೆಯಾಗಿದ್ದಾರೆ. ಮೂರನೇ ಸುತ್ತಿನಲ್ಲಿ ಮೊದಲ ಎರಡು ಸುತ್ತಿಗಿಂತ ಕಠಿಣವಾದ ಗೀತೆಯನ್ನು ಕೊಡಲಾಗಿದೆ. ಅಭ್ಯರ್ಥಿಗಳು ಅದನ್ನು ಹಾಡಿ ವಿಡಿಯೋ ಮಾಡಿ `ಎವಾನ್ ವಾಯ್ಸಸ್~ನಲ್ಲಿ ಅಪ್ಲೋಡ್ ಮಾಡಬೇಕು. ವಿಡಿಯೋ ವೀಕ್ಷಿಸಿ ಯಾರೇ ಬೇಕಾದರೂ ತಮ್ಮ ನೆಚ್ಚಿನ ಸಂಗೀತಗಾರರ ಪರ ಮತ ಹಾಕಬಹುದು. ಈ 100 ಜನರಲ್ಲಿ ಅತಿಹೆಚ್ಚು ಮತ ಪಡೆದ 25 ಜನರನ್ನು ಹಾಲಿವುಡ್ನಲ್ಲಿ ನಡೆಯಲಿರುವ ಸೆಮಿಫೈನಲ್ಗೆ ಆಯ್ಕೆ ಮಾಡಲಾಗುವುದು. ಅಲ್ಲಿ ಆಯ್ಕೆಯಾದ 10 ಜನರಿಗೆ ನ್ಯೂಯಾರ್ಕ್ನಲ್ಲಿ ನಡೆಯಲಿರುವ ಫೈನಲ್ನಲ್ಲಿ ಭಾಗವಹಿಸುವ, ಅಂತರ್ರಾಷ್ಟ್ರೀಯ ಖ್ಯಾತಿಯ ಪಾಪ್ ತಾರೆಗಳ ಜೊತೆ ಸಂಗೀತ ರೆಕಾರ್ಡ್ ಮಾಡಿಕೊಳ್ಳುವ ಅವಕಾಶ. ಬೆಂಗಳೂರಿನ ಐಷಾ ಅಲಿಗೆ ಮತ ಹಾಕಲು www.AvonVoices.com ಭೇಟಿ ನೀಡಿ. ಕೊನೆಯ ದಿನ ಜೂನ್ 20. |
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.