ಹುಬ್ಬಳ್ಳಿ: ನಗರದ ದಿ.ಸಹಸ್ರಾರ್ಜುನ ಸೇವಾ ಕಲ್ಯಾಣ ಸಹಕಾರಿ ಬ್ಯಾಂಕಿನ ನವೀಕೃತ ಕಟ್ಟಡದ ಉದ್ಘಾಟನೆ ಈಚೆಗೆ ನಗರದ ಸೀತಾಬಾಯಿ ಕುಬೇರಸಾ ಕಲ್ಯಾಣ ಮಂಟಪದಲ್ಲಿ ನಡೆಯಿತು.ಅಖಿಲ ಭಾರತ ಸೋಮವಂಶ ಕ್ಷತ್ರಿಯ ಸಮಾಜದ ಚೇರಮನ್ ಶ್ರೀಹರಿ ಖೋಡೆ ಕಟ್ಟಡ ಹಾಗೂ ಸೇವೆಗಳನ್ನು ಉದ್ಘಾಟಿಸಿದರು.

`ಸಮಾಜದ ಜನರು ಈಗ ಎಲ್ಲ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸುತ್ತಿದ್ದಾರೆ. ಆರ್ಥಿಕವಾಗಿಯೂ ಮುಂದುವರಿಯಲು ಗಮನ ನೀಡಬೇಕು, ಇದಕ್ಕೆ ಆರ್ಥಿಕ ನೆರವು ನೀಡುವ ಹಣಕಾಸು ಸಂಸ್ಥೆಗಳ ಸ್ಥಾಪನೆ ಮತ್ತು ನಿರ್ವಹಣೆ ಅಗತ್ಯ ಎಂದು ಅವರು ಹೇಳಿದರು.

ಆರ್ಥಿಕ ಸಂಕಷ್ಟದಲ್ಲಿದ್ದ ಎಸ್ಎಸ್ಕೆ ಬ್ಯಾಂಕ್ ಈಗ ಸಮಾಜದ ಮುಖಂಡರ ಕಾಳಜಿ ಮತ್ತು ಸಹಕಾರದಿಂದ ಪುನಃಶ್ಚೇತನಗೊಂಡಿದೆ. ಇನ್ನಷ್ಟು ವಹಿವಾಟು ನಡೆಸಿದರೆ ಬ್ಯಾಂಕ್ ಆರ್ಥಿಕವಾಗಿ ಸದೃಢವಾಗಬಲ್ಲುದು. ಶೆಡ್ಯೂ ಲ್ಡ್ ಬ್ಯಾಂಕ್ ಆಗಿ ಪರಿವರ್ತನೆಯಾಗುವ ಸಾಧ್ಯತೆ ಯೂ ಇದೆ. ಇದಕ್ಕಾಗಿ ಪ್ರತಿಯೊಬ್ಬರೂ ಪ್ರಯತ್ನ ಮಾಡಬೇಕು ಎಂದು ಅವರು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಆಡಳಿತಾಧಿಕಾರಿ ಎಂ.ಡಿ. ಮಲ್ಲೂರು, ಬ್ಯಾಂಕ್ ಸುಮಾರು 6 ಕೋಟಿ ರೂಪಾಯಿ ಸಾಲ ವಸೂಲಾತಿ ಮಾಡಿದ್ದು ಕೆಸಿಸಿ ಬ್ಯಾಂಕಿನಲ್ಲಿದ್ದ ಠೇವಣಿಯನ್ನು ವಾಪಸ್ ಪಡೆದಿದೆ. ಈಗ 4 ಕೋಟಿ ರೂಪಾಯಿ ನಿವ್ವಳ ಲಾಭ ಗಳಿಸಿದೆ ಎಂದು ತಿಳಿಸಿದರು.

ಶಿರಹಟ್ಟಿ ಸಂಸ್ಥಾನದ ಫಕೀರ ಸಿದ್ಧರಾಮ ಸ್ವಾಮೀಜಿ, ರಾಮಕಷ್ಣ ವಿವೇಕಾನಂದ ಆಶ್ರಮದ ವಿಜಯಾನಂದ ಸರಸ್ವತಿ ಸ್ವಾಮೀಜಿ ಮತ್ತು ಎ.ಪಿ.ಪಾಟೀಲ ಗುರೂಜಿ ಸಮಾರಂಭದ ಸಾನ್ನಿಧ್ಯ ವಹಿಸಿದ್ದರು. ಅಖಿಲ ಭಾರತೀಯ ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಸಮಾಜದ ಅಧ್ಯಕ್ಷ ಡಮಾಮ ಸತ್ಯನಾರಾಯಣ, ಮಾಜಿ ಶಾಸಕ ಅಶೋಕ ಕಾಟವೆ, ಸಹಕಾರ ಸಂಘಗಳ ಉಪನಿರ್ದೇಶಕ ಎಸ್. ಶಿವಕುಮಾರ, ಸಮಾಜದ ಗಣ್ಯರಾದ ಪ್ರಕಾಶ ಚೌಹಾಣ, ಎನ್.ಟಿ.ಬದ್ದಿ, ಜೀವನ ಧೋಂಗಡಿ, ಟಿ.ಎಮ್.ಮೆಹರವಾಡೆ ಮುಂತಾದವರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಶತಿ ಮತ್ತು ಕವಿತಾ ಪ್ರಾರ್ಥಿಸಿದರು. ಪ್ರಧಾನ ವ್ಯವಸ್ಥಾಪಕ ವಿ.ವಿ.ಮಹಾಲೆ ನಿರೂಪಿಸಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.