ಸೋಮವಾರ, ಮೇ 17, 2021
25 °C

`ಏಳು ಕೋಟಿ ಕುಟುಂಬಗಳ ಬಡತನ ನಿರ್ಮೂಲನೆ ಗುರಿ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಗ್ರಾಮೀಣ ಜನರ ಜೀವನಾಧಾರ ಯೋಜನೆಯಾದ `ಆಜೀವಿಕಾ ಪ್ರತಿಷ್ಠಾನ'ದ ಚಟುವಟಿಕೆಯನ್ನು ದೇಶಾದ್ಯಂತ ಅದರಲ್ಲೂ ಕೇಂದ್ರ ಹಾಗೂ ಪೂರ್ವ ಭಾಗಗಳಲ್ಲಿ ತ್ವರಿತವಾಗಿ ವಿಸ್ತರಿಸುವ ಅಗತ್ಯವಿದೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಒತ್ತಿಹೇಳಿದರು.ಇಲ್ಲಿಯ ರಾಷ್ಟ್ರೀಯ ಗ್ರಾಮೀಣ ಜೀವನಾಧಾರ ಪ್ರತಿಷ್ಠಾನದ (ಎನ್‌ಆರ್‌ಎಲ್‌ಎಂ) ದ್ವಿತೀಯ ವಾರ್ಷಿಕೋತ್ಸವದಲ್ಲಿ ಮಾತನಾಡಿ ಸೋನಿಯಾ ಅವರು ಈ ವಿಷಯ ತಿಳಿಸಿದರು.`ಶೀಘ್ರ ನಡೆಯಲಿರುವ ಲೋಕಸಭಾ ಚುನಾವಣೆ ಹಾಗೂ ಐದು ರಾಜ್ಯಗಳ ವಿಧಾನಸಭಾ ಚುನಾವಣೆಗಳ ಮೇಲೆ ಕಣ್ಣಿಟ್ಟು ಈ ಯೋಜನೆ ಅನುಷ್ಠಾನಕ್ಕೆ ಒತ್ತಡ ಹೇರಲಾಗುತ್ತಿದೆ' ಎಂಬ ಟೀಕೆಯನ್ನು ಇದೇ ಸಂದರ್ಭಗಳಲ್ಲಿ ಅಲ್ಲಗಳೆದರು.ದುರ್ಬಲ ವರ್ಗದವರು ಅದರಲ್ಲೂ ಮಹಿಳೆಯರ ಸಬಲೀಕರಣವೇ ಯುಪಿಎ ಸರ್ಕಾರದ ಮುಖ್ಯ ಗುರಿ ಎಂದು ಸೋನಿಯಾ ಈ ಸಂದರ್ಭದಲ್ಲಿ ಪ್ರತಿಪಾದಿಸಿದರು.ಈಶಾನ್ಯ ರಾಜ್ಯಗಳ ಹಾಗೂ ಉತ್ತರಾಖಂಡ, ಹಿಮಾಚಲ ಪ್ರದೇಶದಂತಹ ಗುಡ್ಡಗಾಡು ರಾಜ್ಯಗಳ ಸಮಗ್ರ ಅಭಿವೃದ್ಧಿಗಾಗಿ ವಿಶೇಷ ಪ್ಯಾಕೇಜ್ ನೀಡುವ ಯೋಜನೆಯನ್ನೂ ಸೋನಿಯಾ ಈ ಸಂದರ್ಭದಲ್ಲಿ ಘೋಷಿಸಿದರುಮುಂದಿನ ಹತ್ತು ವರ್ಷಗಳ ಅವಧಿಯಲ್ಲಿ 7 ಕೋಟಿ ಬಡತನ ರೇಖೆ ಕೆಳಗಿನ (ಬಿಪಿಎಲ್)  ಕುಟುಂಬಗಳನ್ನು ಬಡತನದಿಂದ ಮುಕ್ತಗೊಳಿಸುವ ಗುರಿ ಹೊಂದಲಾಗಿದ್ದು ಇದು ನಿಜಕ್ಕೂ ಪ್ರಯಾಸದ ಕೆಲಸ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.