ಗುರುವಾರ , ಮೇ 13, 2021
16 °C

ಏಷ್ಯನ್ ಒಲಂಪಿಕ್ಸ್ ಅರ್ಹತಾ ಸುತ್ತಿನ ಬಾಕ್ಸಿಂಗ್: ಶಿವ ಥಾಪಾಗೆ ಇನ್ನೊಂದೇ ಹೆಜ್ಜೆ ಬಾಕಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಸ್ತಾನ (ಕಜಕಸ್ತಾನ) (ಐಎಎನ್‌ಎಸ್): ಭಾರತದ ಶಿವ ಥಾಪಾ ಅವರು ಲಂಡನ್ ಒಲಿಂಪಿಕ್ಸ್‌ಗೆ ರಹದಾರಿ ಗಿಟ್ಟಿಸಲು ಇನ್ನೊಂದೇ ಹೆಜ್ಜೆ ಬಾಕಿ.ಇಲ್ಲಿ ನಡೆಯುತ್ತಿರುವ ಏಷ್ಯಾ ಒಲಿಂಪಿಕ್ ಅರ್ಹತಾ ಮಟ್ಟದ ಹಣಾಹಣಿಯ 56 ಕೆ.ಜಿ. ವಿಭಾಗದಲ್ಲಿ ಅವರು ಥಾಯ್ಲೆಂಡ್‌ನ ವೊರಾಪೊಜ್ ಪೆಟ್ಚ್‌ಕೂನ್ ಅವರನ್ನು ಸೋಲಿಸಿ ಸೆಮಿಫೈನಲ್ ತಲುಪಿದರು.ಅಥೆನ್ಸ್ ಒಲಿಂಪಿಕ್ಸ್‌ನಲ್ಲಿ ರಜತ ಪದಕ ಗೆದ್ದಿದ್ದ ವೊರಾಪೊಜ್ ಅವರನ್ನು ಸೋಲಿಸುವ ಮೂಲಕ  18ರ ಹರೆಯದ ಶಿವಥಾಪಾ ಅನಿರೀಕ್ಷಿತ ಫಲಿತಾಂಶ ನೀಡಿದ್ದಾರೆ. 2010ರ ಯುವ ಒಲಿಂಪಿಕ್ಸ್‌ನಲ್ಲಿ   ರಜತ     ಪದಕ ಗಳಿಸಿದ್ದ ಇವರು ಈ ಕೂಟದಲ್ಲಿ ಕಂಚಿನ ಪದಕವನ್ನು ಖಚಿತ ಪಡಿಸಿಕೊಂಡಿದ್ದಾರೆ.56 ಕೆಜಿ ವಿಭಾಗದಲ್ಲಿ ಮೂವರು ಇಲ್ಲಿಂದ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುತ್ತಾರೆ. ಫೈನಲ್ ತಲುಪಿದ ಇಬ್ಬರು ಮತ್ತು ಚಿನ್ನದ ಪದಕ ಗೆಲ್ಲುವಾತನ ಎದುರು ಸೆಮಿಫೈನಲ್‌ನಲ್ಲಿ ಸೋತವರು ಅರ್ಹತೆ ಗಿಟ್ಟಿಸುತ್ತಾರೆ.ಶಿವಥಾಪಾ ಬುಧವಾರ ನಾಲ್ಕರ ಘಟ್ಟದಲ್ಲಿ ಜಪಾನ್‌ನ ಸತೋಷಿ ಶಿಮಿಜು ಅವರನ್ನು ಮಣಿಸಿದರೆ, ಲಂಡನ್ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿದಂತಾಗುತ್ತದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.