ಐಎಎಫ್ ಹೆಲಿಕಾಪ್ಟರ್ ನಲ್ಲಿ ಪ್ರಧಾನಿ ಕೊಕ್ರಜಾರ್ ಗೆ

7

ಐಎಎಫ್ ಹೆಲಿಕಾಪ್ಟರ್ ನಲ್ಲಿ ಪ್ರಧಾನಿ ಕೊಕ್ರಜಾರ್ ಗೆ

Published:
Updated:
ಐಎಎಫ್ ಹೆಲಿಕಾಪ್ಟರ್ ನಲ್ಲಿ ಪ್ರಧಾನಿ ಕೊಕ್ರಜಾರ್ ಗೆ

ಗುವಾಹಟಿ (ಪಿಟಿಐ): ತಾಂತ್ರಿಕ ಸಮಸ್ಯೆಯ ಹಿನ್ನೆಲೆಯಲ್ಲಿ ಶನಿವಾರ ತಮ್ಮನ್ನು ಕರೆದೊಯ್ಯುತ್ತಿದ್ದ ಹೆಲಿಕಾಪ್ಟರ್ ವಾಪಸಾದ ಬಳಿಕ ಪ್ರಧಾನಿ ಮನಮೋಹನ್ ಸಿಂಗ್ ಅವರು ಭಾರತೀಯ ವಾಯುಪಡೆ (ಐಎಎಫ್) ಹೆಲಿಕಾಪ್ಟರ್ ಮೂಲಕ ಅಸ್ಸಾಮಿನ ಗಲಭೆಗ್ರಸ್ತ ಕೊಕ್ರಜಾರ್ ಜಿಲ್ಲೆಗೆ ತೆರಳಿದರು.ಅಸ್ಸಾಂ ರಾಜ್ಯಪಾಲ ಜೆ.ಬಿ. ಪಟ್ನಾಯಕ್, ಮುಖ್ಯಮಂತ್ರಿ ತರುಣ್ ಗೊಗೋಯ್, ಏಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ ಸಿಂಗ್, ಅಸ್ಸಾಂ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಭುಬನೇಶ್ವರ ಕಲಿಟಾ ಮತ್ತು ಇತರ ಹಿರಿಯ ರಾಜ್ಯ ಸರ್ಕಾರಿ ಅಧಿಕಾರಿಗಳೊಂದಿಗೆ ಲೋಕಪ್ರಿಯ ಗೋಪಿನಾಥ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಧ್ಯಾಹ್ನ 12.35ಕ್ಕೆ ಕೊಕ್ರಜಾರ್ ಗೆ ಹೊರಟರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry