ಶನಿವಾರ, ಮೇ 28, 2022
30 °C

ಐಟಿಪಿಬಿಯಲ್ಲಿ ಹಸಿರು ಮಾಸಾಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗರದ ಇಂಟರ್‌ನ್ಯಾಷನಲ್ ಟೆಕ್ ಪಾರ್ಕ್ ಬೆಂಗಳೂರು (ಐಟಿಪಿಬಿ) ಆವರಣದಲ್ಲಿರುವ ಸಿಂಗಪುರ ಮೂಲದ ಕಂಪೆನಿ ಅಸೆಂಡಸ್ ಜೂನ್ ತಿಂಗಳಿನುದ್ದಕ್ಕೂ ಹಮ್ಮಿಕೊಂಡಿದ್ದ `ಅಸೆಂಡಸ್ ಹಸಿರು ಮಾಸ' ಜುಲೈ ಎರಡರಂದು ಮುಕ್ತಾಯಗೊಂಡಿತು.`ಬೀಟ್ ಗುರೂಸ್' ಬ್ಯಾಂಡ್ ತಂಡ ಪಶ್ಚಿಮ ಆಫ್ರಿಕಾದ ಸಾಂಪ್ರದಾಯಿಕ ವಾದ್ಯ ಜಂಬೆ ಕಛೇರಿಯೊಂದಿಗೆ ಮಾಸಾಚರಣೆಗೆ ಮಂಗಳ ಹಾಡಲಾಯಿತು.ಜೂನ್ ತಿಂಗಳಿಡೀ ನಡೆದ ಹಸಿರು ಮಾಸಾಚರಣೆಯಲ್ಲಿ ಐಟಿಪಿಬಿಯ ಉದ್ಯೋಗಿಗಳು `ಕಸದಿಂದ ಕಲೆ' ಸ್ಪರ್ಧೆಯಲ್ಲಿ ಕಚೇರಿ ಮತ್ತು ಗೃಹ ತ್ಯಾಜ್ಯದಿಂದ ವಿವಿಧ ಬಳಕೆಗೆ ಯೋಗ್ಯವಾದ ವಸ್ತುಗಳನ್ನು ತಯಾರಿಸಿದರು. ಕಲಾತ್ಮಕವಾಗಿ ಮೂಡಿಬಂದ ಮಾದರಿಗಳು ಸ್ಪರ್ಧೆಯಲ್ಲಿ ಬಹುಮಾನ ಗಳಿಸಿದವು. ವಿಜೇತರಿಗೆ ಸ್ಪೋರ್ಟ್ಸ್ ಸೈಕಲ್‌ಗಳನ್ನು ನೀಡಲಾಯಿತು.ಐಟಿಪಿಬಿಯ ವ್ಯಾಪ್ತಿಯಲ್ಲೇ ನಡೆದ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಉತ್ಸಾಹದಿಂದ ಭಾಗವಹಿಸಿದರು. ಮನರಂಜನೆ, ಮೋಜಿನಿಂದ ಕೂಡಿದ್ದ ವೈವಿಧ್ಯಮಯ ಸ್ಪರ್ಧೆಗಳು, ಪ್ರಕೃತಿಯ ಸಂರಕ್ಷಣೆಯ ಕುರಿತ ಕಾರ್ಯಾಗಾರಗಳು, ಚರ್ಚೆಗಳೂ ನಡೆದವು. ಐಟಿಪಿಬಿಯಲ್ಲಿ ಕೆಲಸ ಮಾಡುವ 30ಸಾವಿರ ಉದ್ಯೋಗಿಗಳೂ ಈ ಮಾಸಾಚರಣೆಯಲ್ಲಿ ಪಾಲ್ಗೊಂಡಿದ್ದು ಕಾರ್ಯಕ್ರಮದ ಯಶಸ್ಸಿಗೆ ಕಾರಣವಾಯಿತು.ವಚನ ತರಗತಿ

ನಗರದ ಬಸವ ಸಮಿತಿಯು ವಚನ ಸಾಹಿತ್ಯವನ್ನು ಪ್ರಚುರಪಡಿಸುವ ಉದ್ದೇಶದಿಂದ ವಚನ ಸಂಗೀತ ತರಗತಿಗಳನ್ನು ನಡೆಸುತ್ತಿದೆ.

ಎಲ್ಲಾ ವಯೋಮಾನದವರೂ ತರಗತಿ ಸೇರಬಹುದು.

ಮತ್ತು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ಶಿವ ಶರಣರ ವಚನ ಸಂಗೀತ ಹೇಳಿಕೊಡಲಾಗುತ್ತದೆ ಎಂದು ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.ಸ್ಥಳ: ಬಸವ ಸಮಿತಿ, ಶ್ರೀ ಬಸವೇಶ್ವರ ರಸ್ತೆ. ಮಾಹಿತಿಗೆ: 94480 40861, 82776 79685.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.