ಬೆಳಗಾವಿ: ತಾಲ್ಲೂಕಿನ ದೇಸೂರು ಬಳಿ ನಿರ್ಮಿಸಲು ಉದ್ದೇಶಿಸಲಾಗಿರುವ ಐಟಿ ಪಾರ್ಕ್ ಅನ್ನು ಐಟಿ ಹಾಗೂ ಬಿಟಿ ಉದ್ಯಮಿಗಳಿಗೆ ಮೀಸಲಿಡಬೇಕು ಎಂದು ಗುರುವಾರ ಜಿಲ್ಲಾಧಿಕಾರಿಗಳನ್ನು ಮಾಹಿತಿ ತಂತ್ರಜ್ಞಾನ ಸಂಘದ ಸದಸ್ಯರು ಆಗ್ರಗಹಿಸಿದರು.

ಐಟಿ ಪಾರ್ಕ್ನಲ್ಲಿ ಬೇರೆ ಕೆಲವು ಉದ್ಯಮಿಗಳಿಗೆ ಜಾಗ ನೀಡಲು ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ಮುಂದಾಗಿರುವುದು ಬೆಳಕಿಗೆ ಬಂದಿದೆ. ಇಲ್ಲಿ ಬೇರೆ ಯಾವ ಉದ್ಯಮಕ್ಕೂ ಅವಕಾಶ ನೀಡಬಾರದು ಎಂದು ಒತ್ತಾಯಿಸಿದ್ದಾರೆ.

`ಈಗ ಮೀಸಲಿಟ್ಟಿರುವ ಜಾಗದಲ್ಲಿ ಅರ್ಧದಷ್ಟನ್ನು ಐಟಿ ಕಂಪೆನಿಗಳಿಗೆ ಹಾಗೂ ಉಳಿದರ್ಧವನ್ನು ಬೇರೆ ಕಂಪೆನಿಗಳಿಗೆ ನೀಡಲು ಉದ್ದೇಶಿಸಿರುವುದು ಗೊತ್ತಾಗಿದೆ. ಹೀಗೆ ಮಾಡುವುದರಿಂದ ಐಟಿ ಉದ್ಯಮಿಗಳು ಇತ್ತ ಬರದಿರಬಹುದು ಎಂಬ ಆತಂಕವನ್ನು~ ಸದಸ್ಯರು ವ್ಯಕ್ತಪಡಿಸಿದ್ದಾರೆ.

ಕೂಡಲೇ ಪಾರ್ಕ್ ಅಭಿವೃದ್ಧಿಗೆ ಸೂಕ್ತ ಕ್ರಮಕೈಗೊಳ್ಳಬೇಕು ಹಾಗೂ ಈ ಭಾಗದ ಯುವಕರಿಗೆ ಉದ್ಯೋಗ ಅವಕಾಶ ಒದಗಿಸಿಕೊಡಬೇಕು ಎಂದು ಆರ್.ಕೆ. ಪಾಟೀಲ, ಸಂದೀಪ ಹೆಗಡೆ, ವಿಶಾಲ್ ಕುಲಕರ್ಣಿ, ತುಷಾರ ಪಾಟೀಲ ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.