ಬಳ್ಳಾರಿ: ನಗರದ ಅಂದಕ್ಕೆ ಕಲಶವಿಟ್ಟಂತೆ ಇರುವ ಇತಿಹಾಸ ಪ್ರಸಿದ್ಧ ಏಕಶಿಲಾ ಗುಡ್ಡ ಹಾಗೂ ಸುಪ್ರಸಿದ್ಧ ಕೋಟೆಯನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಗಮನ ಹರಿಸಿ, ಸೂಕ್ತ ಅಭಿವೃದ್ಧಿ ಕಾರ್ಯ ಕೈಗೊಳ್ಳದ್ದರಿಂದ ಕೋಟೆಯ ಸ್ಥಿತಿ ಚಿಂತಾಜನಕವಾಗಿ ಪರಿಣಮಿಸಿದೆ.

ನಗರದ ಮಧ್ಯ ಭಾಗದಲ್ಲಿ ಕಂಗೊಳಿಸುತ್ತ, `ಬಳ್ಳಾರಿ' ಎಂದರೆ `ಗುಡ್ಡ' ಎಂಬಂತೆ ಪ್ರಸಿದ್ಧಿ ಪಡೆದಿರುವ ಈ ಏಕಶಿಲಾ ಗುಡ್ಡದ ಮೇಲಿನ ಇತಿಹಾಸ ಪ್ರಸಿದ್ಧ ಕೋಟೆಯ ಬಗ್ಗೆ ಸಂಬಂಧಿಸಿದ ಇಲಾಖೆ ದಿಬ್ಯ ನಿರ್ಲಕ್ಷ್ಯ ತಾಳಿರುವುದರಿಂದ ಅದರ ವೀಕ್ಷಣೆಗೆ ಆಗಮಿಸುವವರ ಸಂಖ್ಯೆಯೂ ಗಣನೀಯವಾಗಿ ಕಡಿಮೆಯಾಗಿದೆ.

ಕೋಟೆಯನ್ನು ವೀಕ್ಷಿಸಲೆಂದೇ ಗುಡ್ಡ ಹತ್ತುವ ಜಾಗದಲ್ಲಿ ಕೆಲವು ವರ್ಷಗಳ ಹಿಂದೆಯೇ ಉದ್ಯಾನ ನಿರ್ಮಿಸಲು ರೂಪುರೇಷೆ ಸಿದ್ಧಪಡಿಸಿರುವ ಭಾರತೀಯ ಸರ್ವೇಕ್ಷಣಾ ಇಲಾಖೆ (ಎಎಸ್ಐ), ನಂತರದ ದಿನಗಳಲ್ಲಿ ಉದ್ಯಾನ ನಿರ್ಮಿಸುವ ಗೋಜಿಗೆ ಹೋಗದಿರುವುದು ಪ್ರವಾಸಿಗರನ್ನು ಆಕರ್ಷಣೆ ಕಡಿಮೆಯಾಗಲು ಕಾರಣವಾಗಿದೆ.

ಇತಿಹಾಸ: 1565ರಲ್ಲಿ ವಿಜಯನಗರ ಪತನದ ನಂತರ ಸ್ಥಳೀಯ ಪಾಳೆಗಾರ ಹನುಮಪ್ಪ ನಾಯಕನ ಆಡಳಿತಕ್ಕೆ ಒಳಪಟ್ಟಿದ್ದ ಈ ಕೋಟೆಯು, ಆತನ ಆಡಳಿತದ ಅವಧಿಯಲ್ಲಿ ಮತ್ತಷ್ಟು ಅಭಿವೃದ್ಧಿ ಹೊಂದಿದ್ದು, ನಂತರ ಹೈದರ್ ಅಲಿ, ಟಿಪ್ಪು ಸುಲ್ತಾನ್ ಹಾಗೂ ಹೈದರಾಬಾದ್ನ ನಿಜಾಮರ ಆಡಳಿತಕ್ಕೆ ಒಳಪಟ್ಟಿತ್ತು. ಬ್ರಿಟಿಷರ ಆಗಮನದ ನಂತರ ಅಂದರೆ, 1800ರಿಂದ ಈಸ್ಟ್ ಇಂಡಿಯಾ ಕಂಪೆನಿಯ ಸುಪರ್ದಿಗೆ ಸೇರಿದ್ದ ಈ ಕೋಟೆ, ದೇಶದಲ್ಲೇ ಅತ್ಯಂತ ವಿಶಿಷ್ಟ ವಿನ್ಯಾಸ ಹಾಗೂ ಆಕರ್ಷಕ ವಾಸ್ತು ವೈಭವದೊಂದಿಗೆ ಪ್ರಸಿದ್ಧಿ ಪಡೆದಿದೆ.

ಸಮುದ್ರ ಮಟ್ಟದಿಂದ 1976 ಅಡಿ ಎತ್ತರದಲ್ಲಿರುವ ಈ ಕೋಟೆ, 3.5 ಮೈಲುಗಳವರೆಗಿನ ಸುತ್ತಳತೆ ಹೊಂದಿದ್ದು, ತ್ರಿಭುಜಾಕೃತಿಯನ್ನು ಹೊಂದಿರುವುದು ವಿಶೇಷ. ಗುಡ್ಡದ ಮೇಲಿನ ಕೋಟೆಯ ಒಳಭಾಗದಲ್ಲಿ ಅತ್ಯಾಕರ್ಷಕವಾದ ಕೊಳಗಳಿದ್ದರೆ, ಪಕ್ಕದಲ್ಲಿ ನಾಗಲ ಕೆರೆ ಇದೆ.

ಬ್ರಿಟಿಷ್ ಚಿತ್ರ ಕಲಾವಿದರು ಮತ್ತು ಇತಿಹಾಸಕಾರರ ಪ್ರಕಾರ ದೇಶದಲ್ಲೇ ಈ ಕೋಟೆಗೆ ಮಹತ್ವದ ಸ್ಥಾನ ದೊರೆತಿದ್ದು, ಕಣ್ಮನ ಸೆಳೆಯುವ ಚಿತ್ರದುರ್ಗದ ಕೋಟೆಯಷ್ಟೇ ಮಹತ್ವವನ್ನು ಈ ಕೋಟೆಯೂ ಪಡೆದಿದೆ. 200 ವರ್ಷಗಳ ಹಿಂದೆಯೇ ಈ ಕೋಟೆ ಮತ್ತು ನಗರದ ಚಿತ್ರಣವನ್ನು ಅತ್ಯಂತ ಸುಂದರವಾಗಿ ಹಿಡಿದಿಟ್ಟಿರುವ ಅನೇಕ ಚಿತ್ರ ಕಲಾವಿದರು ಬಳ್ಳಾರಿಗೆ ಈ ಕೋಟೆಯೇ ಮುಕುಟ ಎಂದು ಬಣ್ಣಿಸಿದ್ದಾರೆ.

ಒತ್ತುವರಿ ಅಪಾಯ: ಆದರೆ, ಎಎಸ್ಐ ವ್ಯಾಪ್ತಿಗೆ ಸೇರಿರುವ ಈ ಕೋಟೆಯ ಸಂರಕ್ಷಣೆ, ವ್ಯಾಪಕ ಪ್ರಚಾರ ಹಾಗೂ ಅಭಿವೃದ್ಧಿಗೆ ಗಮನ ಹರಿಸದೆ ಇರುವುದರಿಂದ ಹಾಗೂ ಕೋಟೆಯನ್ನು ಕಾಯುವ ಸಿಬ್ಬಂದಿಯ ಕೊರತೆಯೂ ಇರುವುದರಿಂದ ಕೋಟೆಯ ಸುತ್ತಮುತ್ತಲಿನ ಪ್ರದೇಶ ಅನ್ಯರಿಂದ ಒತ್ತುವರಿಗೆ ಒಳಗಾಗಿದ್ದಲ್ಲದೆ, ಅನೈತಿಕ ಚಟುವಟಿಕೆಗಳ ತಾಣವಾಗಿ ಬದಲಾಗುತ್ತಿದೆ.

ಎಎಸ್ಐ ಅಡಿ ಕೇವಲ ಒಬ್ಬ ಕಾಯಂ ನೌಕರ ಸ್ಮಾರಕ ರಕ್ಷಕ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದು, ಮೂವರು ಸ್ವಚ್ಚತಾ ಸಿಬ್ಬಂದಿ ಕೋಟೆಯ ಒಳ, ಹೊರಗಣ ಸ್ವಚ್ಚತೆ ಕೆಲಸ ನಿರ್ವಹಿಸುತ್ತಿದ್ದಾರೆ.

ಸಂಜೆ 5ರ ನಂತರ ಗುಡ್ಡ ಮತ್ತು ಕೋಟೆ ಕಾಯಲು ಸಿಬ್ಬಂದಿ ಇಲ್ಲದ್ದರಿಂದ ಹಾಗೂ ಸುತ್ತಲೂ ಸೂಕ್ತ ಬೇಲಿಯ ವ್ಯವಸ್ಥೆ ಇಲ್ಲದ್ದರಿಂದ ಯಾರಾದರೂ ಸುಲಭದಲ್ಲಿ ಗುಡ್ಡವನ್ನು ಪ್ರವೇಶಿಸಬಹುದಾಗಿದೆ.

ಇತ್ತೀಚೆಗಷ್ಟೇ ಇನ್ನೊಬ್ಬ ಸಿಬ್ಬಂದಿಯನ್ನು ಇಲಾಖೆ ನೇಮಿಸಿದ್ದರೂ ಭದ್ರತೆಗೆ ಸಮರ್ಪಕ ಕ್ರಮ ಕೈಗೊಳ್ಳಲು ಅಗತ್ಯ ಸಂಖ್ಯೆಯ ಸಿಬ್ಬಂದಿಯ ಕೊರತೆ ಇದೆ.

ರಜಾ ದಿನಗಳಲ್ಲಿ ಮೊದಲು ನೂರಾರು ಸಂಖ್ಯೆಯಲ್ಲಿ ಶಾಲಾ ವಿದ್ಯಾರ್ಥಿಗಳು, ಪಾಲಕರು, ಯುವಕರು ಕೋಟೆಯನ್ನು ವೀಕ್ಷಿಸಲು ಆಗಮಿಸುತ್ತಿದ್ದರು.

ಇದೀಗ ಯಾವುದೇ ಮೂಲ ಸೌಲಭ್ಯಗಳು, ಮಕ್ಕಳ ಮನರಂಜನೆಗೆ ಪರಿಕರಗಳು ಇಲ್ಲದ್ದರಿಂದ ಕೋಟೆ ವೀಕ್ಷಣೆಗೆ ಆಗಮಿಸುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಸ್ಥಳೀಯ ಆಡಳಿತ ಅಥವಾ ಎಎಸ್ಐ ವತಿಯಿಂದ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿದರೆ ಸ್ಮಾರಕದ ರಕ್ಷಣೆ ಸಾಧ್ಯ ಎಂದು ಸ್ಮಾರಕ ರಕ್ಷಗ ಗೌಸ್ ಮೊಹಿದಿನ್ ಆಗ್ರಹಿಸುತ್ತಾರೆ.

ಕೋಟೆಗೆ ಮತ್ತಷ್ಟು ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಸುಂದರ ಉದ್ಯಾನವನ್ನು ನಿರ್ಮಿಸಿ, ಸ್ವಚ್ಚತೆ ಮತ್ತು ಭದ್ರತೆಗೆ ಆದ್ಯತೆ ನೀಡಿದರೆ ಈ ಪ್ರದೇಶವು ಗತಕಾಲದ ವೈಭವವನ್ನು ಮರಳಿ ಪಡೆಯಲಿದೆ ಎಂಬುದು ಅವರ ಕೋರಿಕೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.