ಭಾನುವಾರ, ಜೂಲೈ 12, 2020
29 °C

ಐದು ಲಕ್ಷ ಅನುದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಐದು ಲಕ್ಷ ಅನುದಾನ

ಸವಣೂರ: ತಾಲ್ಲೂಕಿನ ಕಳಸೂರ ಗ್ರಾಮದ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಐದು ಲಕ್ಷ ರೂಪಾಯಿ ಅನುದಾನ ನೀಡುವುದಾಗಿ ಶಾಸಕ ನೆಹರೂ ಓಲೇಕಾರ ತಿಳಿಸಿದರು.ಈಚೆಗೆ ತಾಲ್ಲೂಕಿನ ಕಳಸೂರ ಗ್ರಾಮದ ಶ್ರೀ ಮಹಾಲಕ್ಷ್ಮಿ ದೇವರ ಸನ್ನಿಧಿಗೆ ಭೇಟಿ ನೀಡಿದ್ದ ಅವರು, ಗ್ರಾಮಸ್ಥರ ವತಿಯಿಂದ ನಡೆದ ಸನ್ಮಾನ ಸ್ವೀಕರಿಸಿ ಮಾತನಾಡಿದರು.ಗ್ರಾಮದ ಜೈನ ಬಸದಿಯ ಅಭಿವೃದ್ಧಿಗೆ ಎರಡು ಲಕ್ಷ ಹಾಗೂ ಕರೆಯಮ್ಮ ದೇವಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೂ ಒಂದು ಲಕ್ಷ ರೂಪಾಯಿ ನೆರವು ನೀಡುವದಾಗಿ ಶಾಸಕರು ಭರವಸೆ ನೀಡಿದರು.ಜಿ.ಪಂ ಸದಸ್ಯೆ ಸಾವಿತ್ರಿ ತಳವಾರ, ಗ್ರಾ.ಪಂ. ಅಧ್ಯಕ್ಷೆ ಬಸವಣ್ಣೆವ್ವ ಸವಣೂರ ಪಾಲ್ಗೊಂಡಿದ್ದರು.ವಾರ್ಷಿಕೋತ್ಸವ: ತಾಲ್ಲೂಕಿನ ಕಳಸೂರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವ ಹಾಗೂ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಈಚೆಗೆ ಜರುಗಿತು.ಅಧ್ಯಕ್ಷತೆ ವಹಿಸಿದ್ದ ಶಾಸಕ ನೆಹರೂ ಓಲೇಕಾರ, ಶೈಕ್ಷಣಿಕ ಹಂತದಲ್ಲಿ ಸತತ ಪರಿಶ್ರಮ ಹಾಗೂ ದೃಢ ನಿಶ್ಚಯದೊಂದಿಗೆ ಅಭ್ಯಾಸವನ್ನು ಕೈಗೊಳ್ಳುವಂತೆ ಮಕ್ಕಳಿಗೆ ಸಲಹೆ ನೀಡಿದರು.ಜಿ.ಪಂ. ಸದಸ್ಯೆ ಸಾವಿತ್ರಿ ತಳವಾರ, ಗ್ರಾ.ಪಂ ಅಧ್ಯಕ್ಷೆ ಬಸವಣ್ಣೆವ್ವ ಸವಣೂರ, ಉಪಾಧ್ಯಕ್ಷೆ ಅಡಿವೆಕ್ಕ ಕರಬಣ್ಣನವರ್, ಸದಸ್ಯರಾದ ಶಿವಾಜಪ್ಪ ಪುಟ್ಟಣ್ಣನವರ್, ರಮೇಶ ಶಿಂಗಣ್ಣನವರ್, ಶಾಲಾ ಸಮೀತಿ ಉಪಾಧ್ಯಕ್ಷ ಅಶೋಕಗೌಡ ಪಾಟೀಲ ಸೇರಿದಂತೆ ಹಲವಾರು ಪ್ರಮುಖರು, ಸಾರ್ವಜನಿಕರು ಪಾಲ್ಗೊಂಡಿದ್ದರು.ಶಿಕ್ಷಕರಾದ ಸಿ.ಟಿ ಪೂಜಾರ ಸ್ವಾಗತಿಸಿದರು. ಕುಮಾರ ಕಾಳೆ ಕಾರ್ಯಕ್ರಮ ನಿರ್ವಹಿಸಿದರು. ಎಂ.ಎನ್. ತೋಪಕಟ್ಟಿ ವಂದಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.