ನವದೆಹಲಿ (ಪಿಟಿಐ): ಮಾರ್ಚ್ 19ಕ್ಕೆ ಕೊನೆಗೊಂಡ ವಾರಾಂತ್ಯದಲ್ಲಿ ಆಹಾರ ಹಣದುಬ್ಬರ ದರ ಶೇ 9.5ಕ್ಕೆ ಕುಸಿದಿದ್ದು, ಮತ್ತೆ ಒಂದಂಕಿಗೆ ಮರಳಿದೆ.ಬೇಳೆಕಾಳುಗಳು ಮತ್ತು ಧಾನ್ಯಗಳ ಬೆಲೆ ಸ್ವಲ್ಪ ಕುಸಿತ ಕಂಡಿದ್ದರೂ, ತರಕಾರಿ ಮತ್ತು ಹಣ್ಣುಗಳು ಈ ಅವಧಿಯಲ್ಲಿ ತುಟ್ಟಿಯಾಗಿಯೇ ಮುಂದುವರೆದಿವೆ. ಕಳೆದ ಎರಡು ವಾರಗಳ ಕಾಲ ಒಂದಕ್ಕಿಯಲ್ಲಿದ್ದ ಪ್ರಾಥಮಿಕ ಸಗಟು ದರ ಕೂಡ ಮಾರ್ಚ್ ತಿಂಗಳ ಅರ್ಧಕ್ಕೆ ಶೇ 10.05ರಷ್ಟಾಗಿದೆ. ಖಾದ್ಯ ತೈಲಗಳ ಬೆಲೆ ಇಳಿಯದಿರುವುದು ಸಗಟು ದರ ಏರುವಲ್ಲಿ ಮುಖ್ಯ ಪಾತ್ರ ವಹಿಸಿವೆ.

ಪ್ರಸಕ್ತ ಅವಧಿಯಲ್ಲಿ ಬೇಳೆಕಾಳುಗಳ ಬೆಲೆ ಶೇ 4.40ರಷ್ಟು ಕುಸಿತ ಕಂಡಿದೆ. ತರಕಾರಿ ಶೇ 5.52ರಷ್ಟು ದುಬಾರಿಯಾಗಿದೆ. ಟೊಮೆಟೊ ಬೆಲೆ ಶೇ 8.39ರಷ್ಟು, ಈರುಳ್ಳಿ ಶೇ 6.23ರಷ್ಟು ಹೆಚ್ಚಾಗಿವೆ.ಕಳೆದ ಅವಧಿಗೆ ಹೋಲಿಸಿದರೆ ಹಣ್ಣುಗಳ ಬೆಲೆ ಶೇ 24.67ರಷ್ಟು ಏರಿಕೆಯಾಗಿದೆ. ಆದರೆ, ಮೊಟ್ಟೆ, ಮಾಂಸ, ಮೀನು ಅಲ್ಪ ಅಗ್ಗವಾಗಿರುವುದು ಗ್ರಾಹಕರಿಗೆ ತುಸು ಸಮಾಧಾನ ತಂದಿದೆ.

ಆಹಾರ ಹಣದುಬ್ಬರ ದರ ಮಾರ್ಚ್ ಅಂತ್ಯದ ವೇಳೆಗೆ ಶೇ 8.5ಕ್ಕೆ ಇಳಿಯಬಹುದು ಎಂದು ‘ಐಸಿಆರ್ಎ’ನ ಅರ್ಥಶಾಸ್ತ್ರಜ್ಞ ಆದಿತಿ ನಾಯರ್ ಅಭಿಪ್ರಾಯಪಟ್ಟಿದ್ದಾರೆ. ಹಣದುಬ್ಬರ ನಿಯಂತ್ರಿಸಲು ಕಳೆದ ಮಾರ್ಚ್ 2010ರಿಂದ ಭಾರತೀಯ ರಿಸರ್ವ್ ಬ್ಯಾಂಕ್ ಎಂಟು ಬಾರಿ ವಿತ್ತೀಯ ಪರಾಮರ್ಶೆ ಪ್ರಕಟಿಸಿದೆ. ಸದ್ಯದ ಅಂಕಿ ಅಂಶಗಳನ್ನು ಗಮನಿಸಿದಾಗ ಅಗತ್ಯ ವಸ್ತುಗಳ ಪೂರೈಕೆ ಹೆಚ್ಚಿಸುವ ಮೂಲಕ ಬೆಲೆ ಏರಿಕೆ ತಡೆಯಲು ಸರ್ಕಾರ ಮತ್ತು ‘ಆರ್ಬಿಐ’ ಮತ್ತಷ್ಟು ಬಿಗಿ ನಿಲುವುಗಳನ್ನು ಕೈಗೊಳ್ಳಬೇಕು ಎಂದು ‘ಕೆಎಎಸ್ಎಸ್ಎ’ನ ನಿರ್ದೇಶಕ ಸಿದ್ಧಾರ್ಥ್ ಶಂಕರ್ ಅಭಿಪ್ರಾಯಪಟ್ಟಿದ್ದಾರೆ.

ದೇಶದಲ್ಲಿ ಸರಿಯಾದ ಸಂರಕ್ಷಣೆ ವ್ಯವಸ್ಥೆ ಇಲ್ಲದಿರುವುದರಿಂದ ಪ್ರತಿ ವರ್ಷ ಸುಮಾರು ಒಂದು ಲಕ್ಷ ಕೋಟಿ ಮೊತ್ತದಷ್ಟು ಹಣ್ಣು ಮತ್ತು ತರಕಾರಿಗಳು ಬಳಕೆಯಾಗದೆ ನಷ್ಟವಾಗುತ್ತಿದೆ ಎಂದು ಸರ್ಕಾರ ಅಂದಾಜು ಅಂಕಿ ಅಂಶಗಳು ತಿಳಿಸಿವೆ. ಆಹಾರ ಹಣದುಬ್ಬರ ದರ ಕುಸಿತ ಕಂಡಿರುವುದು ಸಗಟು ಸೂಚ್ಯಂಕ ದರಕ್ಕೆ ಶೇ 14ರಷ್ಟು ಕೊಡುಗೆ ನೀಡಲಿದೆ ಎಂದು ಆರ್ಥಿಕ ತಜ್ಞರು ಹೇಳಿದ್ದಾರೆ. ಮಾರ್ಚ್ ಅಂತ್ಯದ ವೇಳೆಗೆ ಇದು ಶೇ 8ಕ್ಕೆ ಇಳಿಯಲಿದೆ ಎಂದು ‘ಆರ್ಬಿಐ’ ಅಂದಾಜಿಸಿದೆ.

ಆದರೆ, ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಮುಂದುವರೆದಿರುವ ಬಿಕ್ಕಟ್ಟಿನಿಂದ ಕಚ್ಚಾ ತೈಲದ ಬೆಲೆ ಹೆಚ್ಚಿರ್ದುವುದು ‘ಆರ್ಬಿಐ’ ಅಂದಾಜನ್ನು ಮೀರುವ ಸಾಧ್ಯತೆಗಳಿವೆ ಎಂದು ನಾಯರ್ ಹೇಳಿದ್ದಾರೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಒಟ್ಟಾರೆ ಹಣದಬ್ಬರ ದರ ಫೆಬ್ರುವರಿಯಲ್ಲಿ ಶೇ 8.31ರಷ್ಟಾಗಿದೆ.ಹಾಲು ಶೇ 5.79ರಷ್ಟು ತುಟ್ಟಿಯಾಗಿದೆ. ಆದರೆ, ಅಕ್ಕಿ ದರ ಶೇ 2.94ರಷ್ಟು ಕುಸಿದಿದ್ದು, ಗೋಧಿ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಅವಧಿಯಲ್ಲಿ ಆಹಾರೇತರ ವಸ್ತುಗಳ ಹಣದುಬ್ಬರ ದರವೂ ಶೇ 26.18ರಷ್ಟು ಹೆಚ್ಚಳವಾಗಿದೆ.ಖನಿಜ ದರ ಶೇ 12.35ರಷ್ಟು, ಪೆಟ್ರೋಲ್ ದರ ಶೇ 23.14ರಷ್ಟು ತುಟ್ಟಿಯಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.