ಹುಬ್ಬಳ್ಳಿ: ನಗರದ ವಿಮಾನ ನಿಲ್ದಾಣ ಮತ್ತೆ ಸುದ್ದಿಯಲ್ಲಿದೆ. ಉಗ್ರರ ದಾಳಿಯ ವದಂತಿ ಹಿನ್ನೆಲೆಯಲ್ಲಿ ಸದ್ಯ ನಿಲ್ದಾಣದ ತುಂಬ ಖಾಕಿಧಾರಿಗಳೇ ಓಡಾಡುತ್ತಿದ್ದಾರೆ. ಸಾಮಾನ್ಯರಿಗೆ ಒಳಹೋಗಲು ಅವಕಾಶವಿಲ್ಲ. ಪ್ರಯಾಣಿಕರಿಗೂ ತಾಸಿನ ಮುಂಚೆಯಷ್ಟೇ ಪ್ರವೇಶಕ್ಕೆ ಅವಕಾಶ.

ಸಣ್ಣ ವಿಮಾನ ನಿಲ್ದಾಣಗಳ ಪೈಕಿ ದೇಶದ ಅತ್ಯುತ್ತಮ ವಿಮಾನ ನಿಲ್ದಾಣವೆಂದು 2010ನೇ ಸಾಲಿನಲ್ಲಿ ಪ್ರಶಸ್ತಿ ಪಡೆದ, ಭೂಸ್ವಾಧೀನ ಪೂರ್ಣಗೊಂಡು ವಿಸ್ತರಣೆಯ ಕನಸು ಕಾಣುತ್ತಿರುವ ವಿಮಾನ ನಿಲ್ದಾಣಕ್ಕೆ ಉಗ್ರರ ದಾಳಿಯ ಭೀತಿ ಎದುರಾಗಿರುವುದು ಇಲ್ಲಿನ ರಕ್ಷಣಾ ವ್ಯವಸ್ಥೆಯನ್ನು ಪರಿಶೀಲಿಸುವಂತೆ ಮಾಡಿದೆ.

ಕಳೆದೊಂದು ವಾರದಿಂದ ಇಲ್ಲಿನ ಚಿತ್ರಣ ಬದಲಾಗಿದ್ದು, ಪಹರೆ ಹೆಚ್ಚಿಸಲಾಗಿದೆ. ಮಾತ್ರವಲ್ಲ, ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲೂ ಪೊಲೀಸರು ಹದ್ದಿನ ಕಣ್ಣು ಇರಿಸಿದ್ದಾರೆ!

ಉಗ್ರರ ದಾಳಿಯ ಸಂಚು ನಿಜವಾಗಿರಬಹುದು ಅಥವಾ ವದಂತಿಯೂ ಆಗಿರಬಹುದು. ಆದರೆ ಪೊಲೀಸರ ಈ ಮುನ್ನೆಚ್ಚರಿಕೆಯ ಕ್ರಮಗಳಿಗೂ ಅನೇಕ ಕಾರಣಗಳಿವೆ. ಅವುಗಳಲ್ಲಿ ಒಂದು, ಅವಳಿ ನಗರಿಯೊಂದಿಗೆ ತಳುಕು ಹಾಕಿಕೊಂಡಿರುವ ಉಗ್ರರ ನಂಟು.

ಉಗ್ರರೊಂದಿಗೆ ನಂಟು ಹೊಂದಿದ ಆರೋಪದ ಮೇಲೆ ಅವಳಿನಗರದ ಇಬ್ಬರನ್ನು ಪೊಲೀಸರು ಬಂಧಿಸಿದ ಘಟನೆ ಇಲ್ಲಿನ ಜನರನ್ನು ಬೆಚ್ಚಿ ಬೀಳಿಸಿತ್ತು. ಹುಬ್ಬಳ್ಳಿಯ ಪ್ರತಿಷ್ಠಿತ ಕಾಲೇಜೊಂದರ ಎಂಬಿಬಿಎಸ್ ವಿದ್ಯಾರ್ಥಿ ಮೊಹಮ್ಮದ್ ಆಸಿಫ್ ಹಾಗೂ ಧಾರವಾಡದ ಎಲೆಕ್ಟ್ರಿಷಿಯನ್ ಶಕೀಲ್ ಎಂಬುವವರನ್ನು ಬಂಧಿಸಲಾಗಿತ್ತು. ಈ ಇಬ್ಬರೂ ಸೇರಿದಂತೆ ಒಟ್ಟು 12 ಮಂದಿ ಮೇಲೆ ಭಯೋತ್ಪಾದಕರ ಜೊತೆ ನಂಟು ಹೊಂದಿದ ಆರೋಪದ ಅಡಿ ಪೊಲೀಸರು ಚಾರ್ಜ್ಶೀಟ್ ದಾಖಲಿಸಿದ್ದರು.

ಈಚಿನ ದಿನಗಳಲ್ಲಿ ಕೆಲವು ಉಗ್ರಗಾಮಿ ಸಂಘಟನೆಗಳು ಉತ್ತರ ಕರ್ನಾಟಕದಲ್ಲಿ ತಮ್ಮ ಚಟುವಟಿಕೆಯನ್ನು ವಿಸ್ತರಿಸುತ್ತಿದ್ದು, ದಾಳಿ ನಡೆಯುವ ಸಾಧ್ಯತೆಗಳೂ ಇವೆ ಎಂಬ ಬೇಹುಗಾರಿಕಾ ಇಲಾಖೆ ಶಂಕೆ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಈ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.

ಭಯದ ಅಗತ್ಯವಿಲ್ಲ: `ವಿಮಾನ ನಿಲ್ದಾಣದ ಭದ್ರತೆಗೆ ಸದ್ಯದ ಸವಾಲೆಂದರೆ ರಕ್ಷಣಾ ಗೋಡೆ. ನಿಲ್ದಾಣದ ಸುತ್ತ ತಂತಿಬೇಲಿಯಷ್ಟೇ ಇದೆ. ಹೀಗಾಗಿ ಭದ್ರತೆಯ ದೃಷ್ಟಿಯಿಂದ ನಿಲ್ದಾಣದ ಸುತ್ತ ಪೊಲೀಸರ ಕಣ್ಗಾವಲು ಇರಿಸಲಾಗಿದೆ. ಇನ್ನಿತರ ಸೂಕ್ತ ಭದ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ. ಹೀಗಾಗಿ ಆತಂಕ ಪಡುವ ಅಗತ್ಯವಿಲ್ಲ~ ಎನ್ನುತ್ತಾರೆ ಪೊಲೀಸ್ ಆಯುಕ್ತ ರಾಮಚಂದ್ರ ರಾವ್.

`ಭದ್ರತಾ ದೃಷ್ಟಿಯಿಂದ ದೇಶದ ಎಲ್ಲ ಸಣ್ಣ ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಕೇಂದ್ರ ಸರ್ಕಾರ ಸೂಚನೆ ರವಾನಿಸಿದ್ದು, ಹುಬ್ಬಳ್ಳಿ ನಿಲ್ದಾಣದಲ್ಲೂ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಅಷ್ಟೇ. ಇಷ್ಟಕ್ಕೂ ಇಲ್ಲಿನ ವಿಮಾನ ನಿಲ್ದಾಣದಲ್ಲಿ ಸದ್ಯ ಏಕೈಕ ವಿಮಾನವಷ್ಟೇ ಸಂಚಾರ ನಡೆಸುತ್ತಿದೆ.

ಖಾಸಗಿ ವಿಮಾನಗಳ ಹಾರಾಟವೂ ಕಡಿಮೆ. ಅದಕ್ಕೆ ತಕ್ಕ ಭದ್ರತೆಯನ್ನೂ ನಾವು ಕಲ್ಪಿಸುತ್ತಿದ್ದೇವೆ~ ಎಂದು ವಿಮಾನ ನಿಲ್ದಾಣದ ಭದ್ರತೆಯ ಉಸ್ತುವಾರಿ ಹೊತ್ತಿರುವ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.