ಗಗನ್ ನಾರಂಗ್

ಭಾರತ ಈ ಸಲದ ಲಂಡನ್ ಒಲಿಂಪಿಕ್ಸ್ನ ಶೂಟಿಂಗ್ ಸ್ಪರ್ಧೆಗಳಲ್ಲಿ ಗಮನಾರ್ಹ ಸಾಮರ್ಥ್ಯ ತೋರುವ ಸಾಧ್ಯತೆ ಇದೆ. ಅಭಿನವ್ ಬಿಂದ್ರಾ, ರಂಜನ್ ಸೋಧಿ, ವಿಜಯಕುಮಾರ್, ಗಗನ್ ನಾರಂಗ್ ಸೇರಿದಂತೆ ಭಾರತದ ಕೆಲವು ಶೂಟಿಂಗ್ `ತಾರೆ~ಗಳಿಂದ ಬಹಳಷ್ಟು ನಿರೀಕ್ಷೆ ಇರಿಸಿಕೊಳ್ಳಲಾಗಿದೆ.

ಈ ತಂಡದಲ್ಲಿರುವ ಹೈದರಾಬಾದ್ ಮೂಲದ ಗಗನ್ ನಾರಂಗ್ 10ಮೀಟರ್ಸ್ ಏರ್ ರೈಫಲ್ ಶೂಟಿಂಗ್ನಲ್ಲಿ ಎತ್ತರದ ಸಾಧನೆ ತೋರಲು ತುದಿಗಾಲಲ್ಲಿ ನಿಂತಿದ್ದಾರೆ. ಶೂಟಿಂಗ್ ಕ್ರೀಡೆಗೆ ಸಂಬಂಧಿಸಿದಂತೆ ದಟ್ಟ ಅನುಭವ ಹೊಂದಿರುವ ಇವರು 2003ರಲ್ಲಿ ಹೈದರಾಬಾದ್ನಲ್ಲಿ ನಡೆದಿದ್ದ ಆಫ್ರೋ ಏಷ್ಯಾ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದಿದ್ದರು. ನಂತರ 2006ರಲ್ಲಿ ಚೀನಾದ ಗುವಾಂಗ್ಜೌನಲ್ಲಿ ನಡೆದ ವಿಶ್ವಕಪ್ನಲ್ಲಿ ಸ್ವರ್ಣ ಪದಕ ಗಳಿಸಿದರು. ಇದಾಗಿ ಎರಡೇ ವರ್ಷದಲ್ಲಿ ಬ್ಯಾಂಕಾಕ್ನಲ್ಲಿ ಇವರು 10ಮೀ. ಏರ್ ರೈಫಲ್ ಸ್ಪರ್ಧೆಯಲ್ಲಿ 703.5 ಪಾಯಿಂಟ್ಗಳೊಂದಿಗೆ ವಿಶ್ವ ದಾಖಲೆ ನಿರ್ಮಿಸಿದರು.

ಕಾಮನ್ವೆಲ್ತ್ ಶೂಟಿಂಗ್ನಲ್ಲಂತೂ ನಾರಂಗ್ ನಿರಂತರವಾಗಿ ಪದಕ ಸಂಭ್ರಮ ಅನುಭವಿಸಿದವರು. ಮೆಲ್ಬನ್ನಲ್ಲಿ 2006ರಲ್ಲಿ ಮತ್ತು ದೆಹಲಿಯಲ್ಲಿ 2010ರಲ್ಲಿ ನಡೆದ ಕಾಮನ್ವೆಲ್ತ್ ಕ್ರೀಡಾಕೂಟಗಳಲ್ಲಿ ತಲಾ 4 ಚಿನ್ನ ಗಳಿಸಿದ್ದಾರೆ. ಇವರು 10ಮೀ. ಏರ್ರೈಫಲ್ ಇಂಡಿವಿಜ್ಯುವಲ್ ಸ್ಪರ್ಧೆಯಲ್ಲಷ್ಟೇ ಅಲ್ಲ, 10ಮೀ. ಏರ್ರೈಫಲ್ (ಪೇರ್ಸ್), 50 ಮೀಟರ್ಸ್ ರೈಫಲ್ 3ಪೊಸಿಷನ್ ಇಂಡಿವಿಜ್ಯುವಲ್, 50ಮೀ. ರೈಫಲ್ 3 ಪೊಸಿಷನ್ (ಪೇರ್ಸ್) ವಿಭಾಗಗಳಲ್ಲಿಯೂ ಪರಿಣತಿ ಪಡೆದಿದ್ದಾರೆ.

ಇವರು ಕಾಮನ್ವೆಲ್ತ್, ಏಷ್ಯಾಡ್, ವಿಶ್ವಕಪ್ ಶೂಟಿಂಗ್ ಕೂಟಗಳಲ್ಲೆಲ್ಲಾ ಪದಕ ಗೆದ್ದಿದ್ದಾರೆ. ಆದರೆ ಅಥೆನ್ಸ್ ಮತ್ತು ಬೀಜಿಂಗ್ ಒಲಿಂಪಿಕ್ಸ್ಗಳಲ್ಲಿ ಮಾತ್ರ ನಿರಾಸೆ ಅನುಭವಿಸಿದರು. ಇದೀಗ ಅವರು ಮೂರನೇ ಬಾರಿಗೆ ಒಲಿಂಪಿಕ್ಸ್ನಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ. ಈ ಸಲ ಪದಕ ಗೆದ್ದೇ ಗೆಲ್ಲುವ ಆತ್ಮವಿಶ್ವಾಸ ಅವರದು.

ಇತಿಹಾಸದ ಪುಟಗಳಿಂದ

ಒಲಿಂಪಿಕ್ಸ್ ಮೂಲತತ್ವಗಳಿಗೆ ವಿರುದ್ಧವಾದ ಧೋರಣೆಗಳನ್ನೇ ಮೈತುಂಬಿ ಕೊಂಡಂತಿದ್ದ ಸರ್ವಾಧಿಕಾರಿ ಹಿಟ್ಲರ್ನ ಆಶ್ರಯದಲ್ಲೇ 1936ರಲ್ಲಿ ಬರ್ಲಿನ್ನಲ್ಲಿ ಒಲಿಂಪಿಕ್ಸ್ ಕೂಟ ನಡೆದದ್ದು ವಿಪರ್ಯಾಸ. ಆದರೆ ನಾಜಿಗಳು ಅಧಿಕಾರದ ಗದ್ದುಗೆ ಏರುವುದಕ್ಕೆ ಎರಡು ವರ್ಷಗಳಿಗೆ ಮೊದಲೇ ಬಾರ್ಸಿಲೋನಾದಲ್ಲಿ ನಡೆದಿದ್ದ ಅಂತರರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯ ಸಭೆಯಲ್ಲಿ ಆ ತೀರ್ಮಾನ ಕೈಗೊಳ್ಳಲಾಗಿತ್ತು.

ಒಲಿಂಪಿಕ್ಸ್ ಶುರುವಾಗುವುದಕ್ಕೆ ಕೆಲವು ತಿಂಗಳ ಮೊದಲಿನಿಂದಲೇ ಹಿಟ್ಲರ್ `ಇಲ್ಲಿ ಕಪ್ಪುವರ್ಣೀಯರು ಮತ್ತು ಯಹೂದಿಗಳು ಸ್ಪರ್ಧಿಸುವುದಕ್ಕೆ ನಾವು ಅವಕಾಶ ಕೊಡುವುದಿಲ್ಲ~ ಎಂದು ರಾಗ ಶುರು ಹಚ್ಚಿಕೊಂಡಿದ್ದ. ಆದರೆ ಐಓಸಿ ಈ ಕೂಟವನ್ನೇ ರದ್ದುಗೊಳಿಸಿ ಬಿಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದರಿಂದ ಹಿಟ್ಲರ್ ಸುಮ್ಮನಾಗಿದ್ದ.

ಆದರೆ ಈ ಕೂಟವನ್ನು ಅತ್ಯುತ್ತಮವಾಗಿ ಸಂಘಟಿಸುವುದನ್ನೇ ತನ್ನ ಪ್ರತಿಷ್ಠೆಯ ಪ್ರಶ್ನೆಯಾಗಿಸಿಕೊಂಡಿದ್ದ ನಾಜಿಗಳ ಸರ್ಕಾರ ಬರ್ಲಿನ್ನಲ್ಲಿ ಉತ್ತಮ ಮಟ್ಟದ ಕ್ರೀಡಾ ಮೂಲಸೌಲಭ್ಯಗಳನ್ನು ನಿರ್ಮಿಸಿತು. ಈ ಕೂಟದಲ್ಲಿ ಯಾರಿಗೂ ಯಾವುದೇ ಕೊರತೆಯಾಗದಂತೆ ವ್ಯವಸ್ಥಿತವಾಗಿ ಸಂಘಟಿಸಲಾಗಿತ್ತು.

ಆಗಸ್ಟ್ 1ರಿಂದ 16ರವರೆಗೆ ನಡೆದ ಈ ಕೂಟದಲ್ಲಿ 49 ದೇಶಗಳ 3,963 ಮಂದಿ ಪಾಲ್ಗೊಂಡಿದ್ದರು. ಈ ಕೂಟದಲ್ಲಿಯೇ ಮೊದಲ ಬಾರಿಗೆ ಬ್ಯಾಸ್ಕೆಟ್ಬಾಲ್ ಕ್ರೀಡೆಯನ್ನು ಆಡಿಸಲಾಯಿತು. ಅಂತಿಮ ಪಂದ್ಯದಲ್ಲಿ ಕೆನಡಾವನ್ನು 19-8ರಿಂದ ಸೋಲಿಸಿದ ಅಮೆರಿಕ ಚಿನ್ನ ಗೆದ್ದಿತ್ತು. ಅಲ್ಲಿಂದೀಚೆಗೆ ಅಮೆರಿಕಾದಲ್ಲಿ ಬ್ಯಾಸ್ಕೆಟ್ಬಾಲ್ ಅತ್ಯಂತ ಜನಪ್ರಿಯವಾಗಿದೆ. ಇಟಲಿಯ ಫುಟ್ಬಾಲ್ ತಂಡ ಚಿನ್ನದ ಪದಕ ಗೆದ್ದಿತು.

ಈ ಕೂಟದ ಫಲಿತಾಂಶವೂ ಸೇರಿದಂತೆ ಎಲ್ಲಾ ವಿವರಗಳನ್ನು ರೇಡಿಯೊ ಜಾಲದ ಮೂಲಕ ಬಿತ್ತರಿಸಲಾಗಿತ್ತು. ಒಲಿಂಪಿಕ್ಸ್ ಸ್ಪರ್ಧೆಗಳನ್ನು ಮೊದಲ ಬಾರಿಗೆ ಟೆಲಿವಿಷನ್ನಲ್ಲಿ ತೋರಿಸಿದ್ದೂ ಇದೇ ಕೂಟದಲ್ಲಿ. ಈ ಕೂಟದಲ್ಲಿ ಜರ್ಮನಿ 33 ಚಿನ್ನವೂ ಸೇರಿದಂತೆ 89 ಪದಕ ಗೆದ್ದರೆ, ಅಮೆರಿಕ 24 ಚಿನ್ನವೂ ಸೇರಿದಂತೆ 56 ಪದಕ ಗಳಿಸಿತ್ತು.

ಅಬೆಬೆ ಬಿಕಿಲ

ಒಲಿಂಪಿಕ್ಸ್ನಲ್ಲಿ ಆಫ್ರಿಕಾದ ಪಾಲ್ಗೊಳ್ಳುವಿಕೆಯ ಸಂಗತಿ ಪ್ರಸ್ತಾಪವಾದಾಗಲೆಲ್ಲಾ ಅಬೆಬೆ ಬಿಕಿಲ ನೆನಪಾಗುವುದು ಸಹಜ. ಇಥಿಯೋಪಿಯಾದ ಈ ಓಟಗಾರ ಮ್ಯೋರಥಾನ್ ಓಟದಲ್ಲಿ ಎರಡು ಒಲಿಂಪಿಕ್ಸ್ಗಳಲ್ಲಿ ಬಂಗಾರದ ಪದಕ ಗೆದ್ದ ಸಾಹಸಿ.

ಇಥಿಯೋಪಿಯಾದ ಸಣ್ಣಪುಟ್ಟ ದೂರ ಓಟದ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುತ್ತಿದ್ದ ಇವರಿಗೆ ಒಲಿಂಪಿಕ್ಸ್ನಲ್ಲಿ ಪಾಲ್ಗೊಳ್ಳಲು ಅವಕಾಶ ಸಿಕ್ಕಿದ್ದೇ ಆಕಸ್ಮಿಕ. 1960ರ ರೋಮ್ ಒಲಿಂಪಿಕ್ಸ್ಗೆ ತೆರಳಲು ಇಥಿಯೋಪಿಯ ತಂಡ ಸಿದ್ಧವಾಗಿತ್ತು. ವಿಮಾನ ಏರಲು ಒಂದೆರಡು ಗಂಟೆ ಇದೆ ಎನ್ನುವಾಗ ಬಿಕಿಲ ಅವರ ಆಯ್ಕೆಯನ್ನು ಪ್ರಕಟಿಸಲಾಯಿತು. ಯಾವುದೇ ಪೂರ್ವ ತಯಾರಿ ಇಲ್ಲದೆ ಅವರು ವಿಮಾನ ಏರಿ, ರೋಮ್ಗೆ ಹೋಗಿ ಇಳಿದರು. ಓಟಕ್ಕೆ ಅಗತ್ಯವಾದ ಶೂ ಕೂಡ ಅವರಲ್ಲಿರಲಿಲ್ಲ. ತಮ್ಮ ಕಾಲಿಗೆ ಹೊಂದುವಂತಹ ಪಾದರಕ್ಷೆಗಾಗಿ ಹುಡುಕಾಟ ನಡೆಸಿದರಾದರೂ, ಸರಿಯಾದ ಶೂ ಸಿಗಲಿಲ್ಲ. ಅಷ್ಟರಲ್ಲಿ ಸ್ಪರ್ಧೆಯ ಸಮಯ ಬಂದೇ ಬಿಟ್ಟಿತು. ಬಿಕಿಲ ಬರಿಗಾಲಲ್ಲೇ ಓಡಿದರು. ನಿಗದಿತ ದೂರವನ್ನು 2ಗಂಟೆ 15ನಿಮಿಷ 17ಸೆಕೆಂಡುಗಳಲ್ಲಿ ಕ್ರಮಿಸಿ ಚಿನ್ನದ ಪದಕ ಗೆದ್ದುಕೊಂಡಿದ್ದೇ ಅಲ್ಲದೆ ವಿಶ್ವದಾಖಲೆಯನ್ನೂ ಮಾಡಿದರು. ಆ ನಂತರ ಇವರು ಹಿಂತಿರುಗಿ ನೋಡಿದ್ದೇ ಇಲ್ಲ. ಇವರು 1961ರಲ್ಲಿ ನಡೆದ ಅಥೆನ್ಸ್ ಕ್ಲಾಸಿಕಲ್ ಮ್ಯೋರಥಾನ್ ಸೇರಿದಂತೆ ಕೆಲವು ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ಜಯದ ನಗೆ ಚೆಲ್ಲಿದರು. 1964ರಲ್ಲಿ ಟೋಕಿಯೋದಲ್ಲಿ ನಡೆದ ಒಲಿಂಪಿಕ್ಸ್ನಲ್ಲಿ ಪಾಲ್ಗೊಂಡು 2ಗಂಟೆ 12ನಿಮಿಷ 11ಸೆಕೆಂಡುಗಳಲ್ಲಿ ಓಡಿ ಬಂಗಾರದ ಪದಕ ಗೆದ್ದರು. ಅದರ ಮರುವರ್ಷ ದ.ಕೊರಿಯಾದ ಸೋಲ್ನಲ್ಲಿ ನಡೆದ ಅಂತರರಾಷ್ಟ್ರೀಯ ಮ್ಯೋರಥಾನ್ನಲ್ಲಿ ಭಾಗವಹಿಸಿ ಮೊದಲಿಗರಾಗಿ ಗುರಿ ಮುಟ್ಟಿದ್ದರು.

ಮೆಕ್ಸಿಕೊದಲ್ಲಿ 1968ರಲ್ಲಿ ಒಲಿಂಪಿಕ್ಸ್ ನಡೆದಿದ್ದಾಗ ಇವರಿಗೆ 36ರ ಹರೆಯ. ಅಲ್ಲಿಗೆ ತೆರಳಿದ್ದ ಇವರು ಇದ್ದಕ್ಕಿದ್ದಂತೆ ಅಸ್ವಸ್ಥರಾಗಿ 4 ದಿನ ಮಲಗಿದ್ದರು. ನಂತರ ಮ್ಯೋರಥಾನ್ ಓಟದಲ್ಲಿ ಪಾಲ್ಗೊಂಡಿದ್ದರಾದರೂ, ಆರು ಮೈಲಿಗಳಷ್ಟು ದೂರ ಓಡಿ ಬಳಲಿಕೆಯಿಂದ ಕುಸಿದು, ಓಟ ನಿಲ್ಲಿಸಿದರು. ಆ ನಂತರ ಅವರು ಓಡಿದ್ದು ಕಡಿಮೆ. 1973ರಲ್ಲಿ ಮೆದುಳಿನ ರಕ್ತಸ್ರಾವದಿಂದ ಬಿಕಿಲ ಸಾವನ್ನಪ್ಪಿದರು. ಇವರು ಆಫ್ರಿಕ ಕಂಡ ಅಪರೂಪದ ಅಥ್ಲೀಟ್.

ಕೆನಡಾ

ಒಲಿಂಪಿಕ್ಸ್ ಆಂದೋಲನ ಪ್ರಬಲಗೊಳ್ಳುವ ನಿಟ್ಟಿನಲ್ಲಿ ಕೆನಡಾ ದೇಶದ ಕೊಡುಗೆ ಅಪಾರ. 1896 ಮತ್ತು 1980ರ ಒಲಿಂಪಿಕ್ಸ್ಗಳನ್ನು ಹೊರತು ಪಡಿಸಿ ಈ ದೇಶ ನಿರಂತರವಾಗಿ ಒಲಿಂಪಿಕ್ಸ್ ಮೇಳದಲ್ಲಿ ಪಾಲ್ಗೊಳ್ಳುತ್ತಾ ಬಂದಿದೆಯಲ್ಲದೆ, ಒಂದು ಸಲ ಆತಿಥ್ಯವನ್ನೂ ನೀಡಿತ್ತು.

ಪ್ಯಾರಿಸ್ನಲ್ಲಿ ನಡೆದಿದ್ದ ಎರಡನೇ ಒಲಿಂಪಿಕ್ಸ್ನಲ್ಲಿ ಭಾಗವಹಿಸಿದ್ದ ಕೆನಡಾ ಅಲ್ಲಿ ಒಂದು ಚಿನ್ನ ಮತ್ತೊಂದು ಕಂಚಿನ ಪದಕವನ್ನು ಗೆದ್ದುಕೊಂಡಿತ್ತು. ಆ ನಂತರ ಒಂದಿಲ್ಲಾ ಒಂದು ಕ್ರೀಡೆಯಲ್ಲಿ ಕೆನಡಾ ಹೆಚ್ಚುಗಾರಿಕೆ ತೋರುತ್ತಲೇ ಬಂದಿದೆ. 1908ರಲ್ಲಿ ಲಂಡನ್ನಲ್ಲಿ ಈ ಕೂಟ ನಡೆದಿದ್ದಾಗ 3ಚಿನ್ನವೂ ಸೇರಿದಂತೆ 16 ಪದಕಗಳನ್ನು ಗೆದ್ದಿತ್ತು. 1976ರಲ್ಲಿ ಕೆನಡಾ ದೇಶವು ಒಲಿಂಪಿಕ್ಸ್ಗೆ ಆತಿಥ್ಯ ವಹಿಸಿತ್ತು. ಮಾಂಟ್ರಿಯಲ್ನಲ್ಲಿ ನಡೆದಿದ್ದ ಆ ಕೂಟದಲ್ಲಿ 92ದೇಶಗಳ 6028 ಕ್ರೀಡಾಪಟುಗಳು ಪಾಲ್ಗೊಂಡಿದ್ದರು. 123ಸ್ಪರ್ಧೆಗಳು ಅತ್ಯಂತ ಪೈಪೋಟಿಯಿಂದ ನಡೆದವು. ಆದರೆ ಕೆನಡಾ ಮಾತ್ರ ಒಂದೂ ಚಿನ್ನದ ಪದಕ ಗೆಲ್ಲಲಾಗಲಿಲ್ಲ. ಆ ಸಲ ಕೆನಡಾ 5 ರಜತ ಪದಕಗಳೂ ಸೇರಿದಂತೆ 11 ಪದಕಗಳನ್ನಷ್ಟೇ ಗೆದ್ದಿತ್ತು.

ಪದಕ ಗಳಿಕೆಯ ಮಟ್ಟಿಗೆ ಹೇಳುವುದಿದ್ದರೆ 1984ರ ಲಾಸ್ಏಂಜಲೀಸ್ ಒಲಿಂಪಿಕ್ಸ್ ಕೆನಡಾ ಕ್ರೀಡಾಪಟುಗಳಿಗೆ ಬಹಳಷ್ಟು ತೃಪ್ತಿ ನೀಡಿತ್ತು. ಆ ಕೂಟದಲ್ಲಿ ಕೆನಡಾ 10 ಚಿನ್ನವೂ ಸೇರಿದಂತೆ 44 ಪದಕಗಳನ್ನು ಗೆದ್ದಿತ್ತು.
ಹೀಗೆ ಕೆನಡಾದ ಕ್ರೀಡಾಪಟುಗಳು ಒಲಿಂಪಿಕ್ಸ್ನಲ್ಲಿ ಈವರೆಗೆ 58 ಚಿನ್ನವೂ ಸೇರಿದಂತೆ 260 ಪದಕಗಳನ್ನು ಗೆದ್ದಿದೆ. ಅಥ್ಲೆಟಿಕ್ಸ್ನಲ್ಲಿಯೇ ಹೆಚ್ಚು ಪದಕ. ಈ ದೇಶದ ಅಥ್ಲೀಟ್ಗಳು 13 ಚಿನ್ನವೂ ಸೇರಿದಂತೆ 52 ಪದಕಗಳನ್ನು ಗಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.