ಶಿವಥಾಪಾ
ಭಾರತದ ಬಾಕ್ಸಿಂಗ್ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಶಿವಥಾಪಾ ಬಹಳ ಭರವಸೆಯ ಕ್ರೀಡಾಪಟುವಾಗಿದ್ದಾರೆ. ಇವರಿಗಿನ್ನೂ ಹದಿನೆಂಟರ ಹರೆಯ. 2016ರ ಒಲಿಂಪಿ ಕ್ಸ್ನಲ್ಲಿ ಭಾಗವಹಿಸುವ ಸಾಧ್ಯತೆಯ ಬಗ್ಗೆ ಕನಸು ಕಾಣುತ್ತಿದ್ದ ಇವರಿಗೆ ಲಂಡನ್ ಒಲಿಂಪಿಕ್ಸ್ಗೇ ರಹದಾರಿ ಸಿಕ್ಕಿಬಿಟ್ಟಿದೆ. ಹೀಗಾಗಿ ಲಂಡನ್ನಲ್ಲಿ ಈ ಸಲ ಶಿವಥಾಪಾ ಮಹತ್ವದ್ದನ್ನು ಸಾಧಿಸುವ ಅತ್ಯುತ್ಸಾಹ ಹೊಂದಿದ್ದಾರೆ.

ಮೂಲತಃ ಅಸ್ಸಾಮ್ ರಾಜ್ಯದವರಾದ ಇವರಿಗೆ ಎಳವೆಯಿಂದಲೇ ಸಮರಕಲೆಗಳ ಬಗ್ಗೆ ಅತೀವ ಆಸಕ್ತಿ. ಇವರ ತಂದೆ ಕರಾಟೆಪಟುವಾಗಿದ್ದರಿಂದ, ಇವರು ಕೂಡ ಆರನೇ ವಯಸ್ಸಿನಲ್ಲೇ ಕರಾಟೆ ತಂತ್ರಗಳನ್ನು ಕಲಿತು ಹಲವು ಪದಕಗಳನ್ನು ಗೆದ್ದುಕೊಂಡಿದ್ದರು. ನಂತರ ಫುಟ್ಬಾಲ್ ಬಗ್ಗೆ ಅತೀವ ಆಸಕ್ತಿ ಬೆಳೆಸಿಕೊಂಡ ಇವರು, ಶಾಲಾ ಮಟ್ಟದ ಕೆಲವು ಟೂರ್ನಿಗಳಲ್ಲಿಯೂ ಆಡಿದ್ದರು.

ಬಾಕ್ಸಿಂಗ್ ಬಗ್ಗೆ ಅರಿವು ಮೂಡಿದ ಮೇಲೆ ತಂದೆಯ ಮಾರ್ಗದರ್ಶನದಲ್ಲಿ ಇವರು ಈ ಕ್ರೀಡೆಯ ಮೊದಲ ಪಾಠಗಳನ್ನು ಕಲಿತರು. ಶಾಲಾ ಮಟ್ಟದಲ್ಲಿ, ರಾಜ್ಯ ಜೂನಿಯರ್ ಮಟ್ಟದಲ್ಲಿ ಗಮನ ಸೆಳೆದ ಇವರು ರಾಷ್ಟ್ರೀಯ ಜೂನಿಯರ್ ಕೂಟಗಳಲ್ಲಿ ಮಿಂಚಿದರು. ಹೀಗಾಗಿ ಭಾರತ ತಂಡಕ್ಕೆ ಆಯ್ಕೆಯಾಗಿ ಅಜರ್ಬೈಜಾನ್ನಲ್ಲಿ ನಡೆದ ಅಂತರರಾಷ್ಟ್ರೀಯ ಜೂನಿಯರ್ ಬಾಕ್ಸಿಂಗ್ ಚಾಂಪಿಯನ್ಷಿಪ್ನಲ್ಲಿ ಪಾಲ್ಗೊಂಡು ಪದಕ ಗಳಿಸಿದಾಗ ಇವರಿಗಿನ್ನೂ ಹದಿನೈದರ ಹರೆಯ. 2009ರ ವಿಶ್ವ ಜೂನಿಯರ್ ಬಾಕ್ಸಿಂಗ್ ಚಾಂಪಿಯನ್ಷಿಪ್ನಲ್ಲಿ ಪಾಲ್ಗೊಂಡಿದ್ದ ಇವರು ಕಂಚಿನ ಪದಕ ಗೆದ್ದುಕೊಂಡರು. 2010ರಲ್ಲಿ ನಡೆದ ಯುವ ಒಲಿಂಪಿಕ್ಸ್ನ ಬಾಕ್ಸಿಂಗ್ನಲ್ಲಿ ಸ್ಪರ್ಧಿಸಿ ರಜತ ಪದಕ ಗಳಿಸಿದರು.

ಇದೀಗ ಒಲಿಂಪಿಕ್ಸ್ನಲ್ಲಿ ಸ್ಪರ್ಧಿಸಲು ಅರ್ಹತೆ ಗಳಿಸಿರುವ ಶಿವಥಾಪಾ ಪ್ರಸಕ್ತ ನಿತ್ಯವೂ ಏಳು ಗಂಟೆಗಳ ಕಾಲ ಸತತ ಅಭ್ಯಾಸದಲ್ಲಿ ತಲ್ಲೀನರಾಗಿದ್ದಾರೆ. ಲಂಡನ್ನಲ್ಲಿ ಪದಕದ ಬಳಿ ಹೋಗಲೇ ಬೇಕೆಂಬ ತುಡಿತ ಅವರಲ್ಲಿದೆ. ಒಂದು ವೇಳೆ ಈ ಸಲ ವಿಫಲರಾದರೂ, ಮುಂಬರುವ ಒಲಿಂಪಿಕ್ಸ್ನಲ್ಲಿ ಇವರು ಭಾರತಕ್ಕೆ ಪದಕ ತರಲಿರುವ ಸಾಧ್ಯತೆಗಳು ಹೆಚ್ಚಾಗಿವೆ.

ಇತಿಹಾಸದ ಪುಟಗಳಿಂದ
ಎರಡನೇ ಒಲಿಂಪಿಕ್ಸ್ ಕೂಟವನ್ನು ತೀರಾ ಅವ್ಯವಸ್ಥೆಯಿಂದ ನಡೆಸಿ ಕುಖ್ಯಾತಿಗೆ ಒಳಗಾಗಿದ್ದ ಪ್ಯಾರಿಸ್ ನಗರದ ಮಂದಿ ಏಳನೇ ಒಲಿಂಪಿಕ್ಸ್ಗೆ ಆತಿಥ್ಯ ವಹಿಸಿ ಉತ್ತಮವಾಗಿ ಸಂಘಟಿಸಿದರು. 1924ರಲ್ಲಿ ನಡೆದ ಈ ಕೂಟದಲ್ಲಿ 44 ದೇಶಗಳು ಪಾಲ್ಗೊಂಡಿದ್ದವು.

ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ, ಆತಿಥೇಯ ದೇಶ ಮತ್ತು ನಾಲ್ಕು ವರ್ಷಗಳ ನಂತರ ಆತಿಥ್ಯ ವಹಿಸಲಿರುವ ದೇಶಗಳ ಧ್ವಜಾರೋಹಣವು ಪ್ರಧಾನ ಕ್ರೀಡಾಂಗಣದಲ್ಲಿಯೇ ನಡೆಯುವ ಸಂಪ್ರದಾಯ ಈ ಒಲಿಂಪಿಕ್ಸ್ ಸಂದರ್ಭದಲ್ಲಿಯೇ ಆರಂಭವಾಯಿತು.

ಈ ಕೂಟದ ಕ್ರೀಡಾಸ್ಪರ್ಧೆಗಳಲ್ಲಿ ಎಂದಿನಂತೆ ಅಮೆರಿಕ ದೇಶವೇ ತನ್ನ ಮೇಲುಗೈ ಸಾಧಿಸಿತ್ತು. 45 ಚಿನ್ನದ ಪದಕಗಳು ಅಂದು ಅಮೆರಿಕಾದ ಮುಡಿಗೇರಿದ್ದವು. ಆ ಕಾಲದಲ್ಲಿ ಸುಮಾರು ಒಂದು ಕೋಟಿ ಜನಸಂಖ್ಯೆ ಹೊಂದಿದ್ದ ಅಮೆರಿಕ ಅಷ್ಟು ಪದಕಗಳು ಗೆದ್ದಿದ್ದಕ್ಕಿಂತ, ಫಿನ್ಲ್ಯಾಂಡ್ನಂತಹ ಸಣ್ಣದೇಶವೊಂದು 14 ಚಿನ್ನಗಳನ್ನು ಗೆದ್ದಿದ್ದು ಮಹತ್ತರ ಸಂಗತಿಯೇ ಆಗಿತ್ತು. ಆತಿಥೇಯ ಫ್ರಾನ್ಸ್ 13 ಸ್ವರ್ಣ ಪದಕಗಳನ್ನು ತನ್ನ ಮಡಿಲಿಗೆ ಹಾಕಿಕೊಂಡಿತ್ತು.

ಈ ಕೂಟದಲ್ಲಿ ಅಮೆರಿಕದ ಜಾನಿ ವೆಲ್ಮುಲ್ಲರ್ ಎಂಬಾತ ಈಜಿನಲ್ಲಿ ಎರಡು ಚಿನ್ನದ ಜತೆಗೆ ವಾಟರ್ಪೋಲೊದಲ್ಲೊಂದು ಕಂಚಿನ ಪದಕ ಗಳಿಸಿ ಗಮನ ಸೆಳೆದಿದ್ದರು. ಅಮೆರಿಕಾಕ್ಕೆ ವಾಪಸಾದ ಮೇಲೆ ಅವರು ಹಾಲಿವುಡ್ ಚಿತ್ರರಂಗದಲ್ಲಿ ಜನಪ್ರಿಯ ನಟರಾಗಿದ್ದು, 12ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು. ಈ ಕೂಟದಲ್ಲಿ 100ಮೀಟರ್ಸ್ ಓಟದಲ್ಲಿ ಕಂಚಿನ ಪದಕ ಗೆದ್ದ ನ್ಯೂಜಿಲೆಂಡ್ನ ಆರ್ಥರ್ ಪೊರಿಟ್ ಎಂಬುವವರು ಕೆಲವು ವರ್ಷಗಳು ಉರುಳಿದ ಮೇಲೆ ನ್ಯೂಜಿಲೆಂಡ್ನ ಗವರ್ನರ್ ಜನರಲ್ ಹುದ್ದೆಗೇರಿದ್ದರು.

ಒಲಿಂಪಿಕ್ಸ್ ಫುಟ್ಬಾಲ್ನಲ್ಲಿ ಉರುಗ್ವೆ ದೇಶವು ಚಿನ್ನದ ಪದಕ ಗೆದ್ದಿತು. ನಂತರ ವಿಶ್ವಕಪ್ ಫುಟ್ಬಾಲ್ ಸಂಘಟನೆಗೆ ಒಂದು ರೀತಿಯಲ್ಲಿ ಈ ಗೆಲುವಿನ ಸ್ಫೂರ್ತಿಯೂ ಕಾರಣ ಎನ್ನಲಾಗಿದೆ.

ಕೆಲ್ಲಿ ಹೋಮ್ಸ
ಇಂಗ್ಲೆಂಡ್ನ ಸರ್ವಕಾಲ ಶ್ರೇಷ್ಠ ಅಥ್ಲೀಟ್ಗಳಲ್ಲಿ ಕೆಲ್ಲಿಹೋಮ್ಸ ಒಬ್ಬರು. ಇವರು ಮಹಿಳಾ ವಿಭಾಗದ 800ಮೀ. ಮತ್ತು 1,500ಮೀ. ಓಟದ ಸ್ಪರ್ಧೆಗಳಲ್ಲಿ ಮಾಡಿರುವ ಸಾಧನೆ ಅಪ್ರತಿಮವಾದುದು.

ಸಿಡ್ನಿಯಲ್ಲಿ 2000ದಲ್ಲಿ ನಡೆದ ಒಲಿಂಪಿಕ್ಸ್ನ 800ಮೀ. ಓಟದಲ್ಲಿ ರಜತ ಪದಕ ಗೆದ್ದಿದ್ದ ಇವರು, 2004ರ ಅಥೆನ್ಸ್ ಒಲಿಂಪಿಕ್ಸ್ನ 800ಮೀ. ಮತ್ತು 1,500ಮೀ. ಓಟದಲ್ಲಿ ಚಿನ್ನ ಗೆದ್ದುಕೊಂಡಿದ್ದರು.

ಜಮೈಕಾದಿಂದ ವಲಸೆ ಬಂದು ಲಂಡನ್ನಲ್ಲಿ ನೆಲೆಸಿ, ಕಾರು ಚಾಲಕರಾಗಿದ್ದ ಹೋಮ್ಸ ಎಂಬುವವರು ಲಂಡನ್ನ ಮಹಿಳೆಯೊಬ್ಬರನ್ನು ಮದುವೆಯಾಗಿದ್ದರು. ಈ ದಂಪತಿಯ ಪುತ್ರಿ ಕೆಲ್ಲಿಹೋಮ್ಸ. ಈಕೆಗೆ ತಿಳಿವಳಿಕೆ ಬರುವ ಮೊದಲೇ ಆ ದಂಪತಿ ವಿಚ್ಛೇದನ ಪಡೆದು ಬೇರೆಯಾಗುತ್ತಾರೆ. ಕೆಲ್ಲಿ ಹಾಸ್ಟೆಲ್ ಒಂದರಲ್ಲಿಯೇ ಬೆಳೆದು ಶಿಕ್ಷಣ ಪಡೆಯುತ್ತಾರೆ. 1983ರಲ್ಲಿ ಶಾಲೆಯಲ್ಲಿರುವಾಗಲೇ ಇವರಿಗೆ ಕ್ರೀಡೆಯೇ ಮೊದಲ ಆಸಕ್ತಿ.

ಶಿಕ್ಷಣ ಮುಗಿಯುತ್ತಿದ್ದಂತೆಯೇ ಇವರು ಬ್ರಿಟಿಷ್ ಸೇನೆಗೆ ಸೇರುತ್ತಾರೆ. ಅಲ್ಲಿ ಅಥ್ಲೆಟಿ ಕ್ಸ್ನಲ್ಲೇ ಗಮನವನ್ನು ಕೇಂದ್ರೀಕರಿಸುತ್ತಾರೆ. ವಿಶೇಷವೆಂದರೆ ಇವರು ಬ್ರಿಟನ್ ಸೇನೆಯ ಜೂಡೊ ಚಾಂಪಿಯನ್ ಕಿರೀಟ ಧರಿಸುತ್ತಾರೆ. ತರಬೇತಿದಾರರೊಬ್ಬರ ಸಲಹೆಯ ಮೇರೆಗೆ ಓಟದ ಸ್ಪರ್ಧೆಯಲ್ಲಿ ಹೆಚ್ಚಿನ ಗಮನ ಹರಿಸಿ ಪರಿಣತಿ ಗಳಿಸುತ್ತಾರೆ.

ಹೀಗಾಗಿ ಇವರು 1994ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಪಾಲ್ಗೊಂಡು 1,500ಮೀ. ಓಟದಲ್ಲಿ ಚಿನ್ನದ ಪದಕ ಗಳಿಸುತ್ತಾರೆ. ನಂತರ ಇವರು ಹಿಂತಿರುಗಿ ನೋಡಿದ್ದೇ ಇಲ್ಲ. 1998 ಮತ್ತು 2002ರ ಕಾಮನ್ವೆಲ್ತ್ ಕ್ರೀಡಾಕೂಟಗಳಲ್ಲಿ ಕ್ರಮವಾಗಿ ಚಿನ್ನ ಮತ್ತು ಬೆಳ್ಳಿಯ ಪದಕಗಳನ್ನು ಗೆದ್ದುಕೊಳ್ಳುತ್ತಾರೆ.

1995ರ ವಿಶ್ವ ಅಥ್ಲೆಟಿಕ್ ಚಾಂಪಿಯನ್ಷಿಪ್ನ 1,500ಮೀ. ಮತ್ತು 800ಮೀ. ಓಟಗಳಲ್ಲಿ ಕ್ರಮವಾಗಿ ರಜತ ಮತ್ತು ಕಂಚಿನ ಪದಕಗಳನ್ನು ಗೆಲ್ಲುತ್ತಾರೆ. 2003ರ ವಿಶ್ವ ಅಥ್ಲೆಟಿಕ್ಸ್ನ 800ಮೀ. ಓಟದಲ್ಲಿಯೂ ರಜತ ಪದಕ ಗಳಿಸಿದ್ದರು. ಅಥೆನ್ಸ್ ಒಲಿಂಪಿಕ್ಸ್ನಲ್ಲಿ ಎರಡು ಚಿನ್ನಗಳ ಸಾಧನೆ ಮಾಡಿದಾಗ ಕೆಲ್ಲಿ ಇಂಗ್ಲೆಂಡ್ನಲ್ಲಿ ಮನೆಮಾತಾಗಿದ್ದರು. ಅದರ ಮರುವರ್ಷವೇ ಅಂತರರಾಷ್ಟ್ರೀಯ ಕೂಟಗಳಲ್ಲಿ ಸ್ಪರ್ಧಿಸುವುದರಿಂದ ನಿವೃತ್ತಿ ಪ್ರಕಟಿಸಿದರು.

ಪೋರ್ಚುಗಲ್
ಪೋರ್ಚುಗಲ್, ಒಲಿಂಪಿಕ್ ಆಂದೋಲನದೊಳಗೆ ಉತ್ಸಾಹದಿಂದ ಸೇರ್ಪಡೆಗೊಂಡ 13ನೇ ದೇಶ. 1909ರಿಂದ ಈವರೆಗೆ ಈ ಚಳವಳಿಯ ಆಗುಹೋಗುಗಳಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುತ್ತಾ ಬಂದಿದೆ.

ಆದರೆ ಕ್ರೀಡೆಗೆ ಸಂಬಂಧಿಸಿದಂತೆ ಈ ದೇಶದ ಕ್ರೀಡಾಪಟುಗಳು ತೀರಾ ಎತ್ತರದ ಸಾಮರ್ಥ್ಯ ತೋರಿದ್ದು ಮಾತ್ರ ಅಷ್ಟರಲ್ಲೆೀ ಇದೆ. 1912ರಲ್ಲಿ ಸ್ಟಾಕ್ಹೋಮ್ನಲ್ಲಿ ಮೊದಲ ಬಾರಿಗೆ ಭಾಗವಹಿಸಿದ್ದ ಈ ದೇಶ ಕಳೆದ ಒಂದು ಶತಮಾನದಲ್ಲಿ ಗಳಿಸಿದ್ದು ಕೇವಲ 4 ಚಿನ್ನಗಳೂ ಸೇರಿದಂತೆ 22 ಪದಕಗಳನ್ನು ಮಾತ್ರ.

1924ರಲ್ಲಿ ಪ್ಯಾರಿಸ್ನಲ್ಲಿ ನಡೆದಿದ್ದ ಒಲಿಂಪಿಕ್ಸ್ನ ಈಕ್ವೆಸ್ಟ್ರೀಯನ್ ಟೀಮ್ ಪೈಪೋಟಿಯಲ್ಲಿ ಈ ದೇಶ ಕಂಚಿನ ಪದಕ ಗೆದ್ದಿತು. ಅದು ಮೊದಲ ಪದಕ. 1984ರ ಲಾಸ್ಏಂಜಲೀಸ್ ಒಲಿಂಪಿಕ್ಸ್ನಲ್ಲಿ 1ಚಿನ್ನ ಮತ್ತು 2ಕಂಚಿನ ಪದಕ ಗೆದ್ದುದೇ ಈ ದೇಶದ ಈವರೆಗಿನ ಅತ್ಯುತ್ತಮ ಸಾಧನೆಯಾಗಿದೆ. ಬೀಜಿಂಗ್ನಲ್ಲಿ ಈ ದೇಶ 1ಚಿನ್ನ ಮತ್ತೊಂದು ಬೆಳ್ಳಿ ಗೆದ್ದಿತ್ತು.

ಅಥ್ಲೆಟಿಕ್ಸ್ನಲ್ಲಿ ಗಮನ ಸೆಳೆದಿರುವ ಈ ದೇಶ ಈವರೆಗೆ 4 ಚಿನ್ನ ಸೇರಿದಂತೆ 10 ಪದಕಗಳನ್ನು ಗಳಿಸಿದೆ. ಆದರೆ ಈ ದೇಶದಲ್ಲಿ ಫುಟ್ಬಾಲ್, ಸೈಕ್ಲಿಂಗ್ ಬಹಳ ಜನಪ್ರಿಯವಾದರೂ ಒಲಿಂಪಿಕ್ಸ್ನಲ್ಲಿ ಬಂಗಾರದ ಸಾಮರ್ಥ್ಯ ತೋರಲು ಸಾಧ್ಯವಾಗಿಲ್ಲ. ಹಿಂದೆ ಈ ದೇಶದ ಕಾರ್ಲೊಸ್ ಲೋಪೆಜ್ ಎಂಬಾತ ಮ್ಯೋರಥಾನ್ ಓಟದಲ್ಲಿ ಸ್ವರ್ಣ ಪದಕ ಗೆದ್ದು ದೂರ ಓಟಕ್ಕೆ ಸಂಬಂಧಿಸಿದಂತೆ ಪೋರ್ಚುಗಲ್ ದೇಶದಾದ್ಯಂತ ಹೊಸ ಅಲೆ ಹುಟ್ಟು ಹಾಕಿದ್ದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.