ಶುಕ್ರವಾರ, ಜೂನ್ 18, 2021
20 °C

ಒಲಿದವರಿಗಾಗಿ ಒಡವೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಒಲಿದವರಿಗೆ ಉಡುಗೊರೆ ನೀಡುವಾಗ ಹೊನ್ನು, ವಜ್ರಗಳನ್ನೇ ನೀಡಿ.. ಇವು ನಿಮ್ಮ ಬಾಂಧವ್ಯದಷ್ಟೇ ಶಾಶ್ವತ ಎಂದು ತನಿಷ್ಕ್ ಆಭರಣ ವಿನ್ಯಾಸದ ಜಿಎಂ ರೇವತಿ ಕಾಮತ್ ಸಲಹೆ ನೀಡುತ್ತಿದ್ದಾರೆ.ಅಮ್ಮನ ವಾತ್ಸಲ್ಯಕ್ಕೆ ಹೋಲಿಸಬಹುದಾದದ್ದು ಏನಾದರೂ ಇದೆಯೇ? ಎಂಬ ಪ್ರಶ್ನೆಯನ್ನು ಮುಂದಿರಿಸಿ, ಹುಬ್ಬೇರಿಸಿ, ಕತ್ತು ಅಲುಗಾಡಿಸಿ ಅದು ಅಮೂಲ್ಯ ಎನ್ನುವುದಿಲ್ಲವೇ? ಅಮೂಲ್ಯ ಅಮ್ಮನ ಪ್ರೀತಿಗೆ ಮೌಲ್ಯ ಕಟ್ಟದಿರಿ, ವಜ್ರಕ್ಕೆ ಮಾತ್ರ ಮೌಲ್ಯ ನೀಡಿ, ಚಂದದ ಉಡುಗೊರೆ ಕೊಂಡೊಯ್ಯಿರಿ ಎನ್ನುತ್ತಾರೆ ಅವರು.ಅಮ್ಮ ಅಷ್ಟೇ ಅಲ್ಲ, ಸಹೋದರಿ, ಸಂಗಾತಿ, ಸ್ನೇಹಿತೆ ಹೀಗೆ ವಿಶೇಷ ಬಾಂಧವ್ಯ ಹೊಂದಿರುವ ಎಲ್ಲರಿಗೂ ಕೊಡುಗೆಯಾಗಿ ನೀಡುವಂಥ ಸಂಗ್ರಹ ತನಿಷ್ಕ್‌ನಲ್ಲಿ ಲಭ್ಯ ಎನ್ನುತ್ತಾರೆ ಅವರು.ಉಡುಗೊರೆಯನ್ನು ಹೇಗೆ ಆಯ್ಕೆ ಮಾಡಿಕೊಳ್ಳಬೇಕು ಎಂಬುದಕ್ಕೂ ರೇವತಿ ಸಲಹೆ ನೀಡಿದ್ದಾರೆ.ಮನಮೆಚ್ಚಿದ ಮನದನ್ನೆಗೆ ವಜ್ರದ ಪೆಂಡೆಂಟ್ ನೀಡಿ. ನಿಮ್ಮ ಕೊಡುಗೆ ಹೃದಯಕ್ಕಂಟಿಕೊಂಡು, ಅವಳ ಹೃದಯ ಬಡಿತದ ಅನುಭವಿಸುತ್ತದೆ. ಪ್ರತಿ ಬಡಿತದೊಂದಿಗೂ ನಿಮ್ಮ ಹೆಸರು ಅನುರಣಿಸುವಂತಾಗುತ್ತದೆ.

 

ಈಗಾಗಲೇ ವಜ್ರದ ಪದಕ ಅವಳ ಬಳಿ ಇದ್ದರೆ ಅದಕ್ಕೆ ಹೊಂದುವಂಥ ಲೋಲಾಕು ನೀಡಿರಿ. ಕೆನ್ನೆಗೆ ಮುತ್ತಿಡುವ ಕರಿ ಕೂದಲಿನೊಂದಿಗೆ ವಜ್ರದ ಮೆರುಗು ನೀಡಿದಂತಾಗುತ್ತದೆ.ಒಂದು ವೇಳೆ ವಜ್ರ ಅವರ ಸಂಗ್ರಹದಲ್ಲಿದ್ದರೆ, ರೂಬಿ, ಪಚ್ಚೆ ಮುಂತಾದ ಹರಳುಗಳ ಶ್ರೇಣಿಯೇ ಇಲ್ಲಿ ಲಭ್ಯ.ಅಮ್ಮನಿಗೆ ಬಳೆ, ಉಂಗುರ ಮುಂತಾದವುಗಳನ್ನು ನೀಡಬಹುದು. ಪ್ರತಿ ಸಲವೂ ನಿಮ್ಮ ಉಡುಗೊರೆ ಬಾಂಧವ್ಯವನ್ನು ಗಟ್ಟಿಗೊಳಿಸುತ್ತದೆ ಎಂಬುದು ಅವರ ಭರವಸೆ.18 ಕ್ಯಾರೆಟ್ ಚಿನ್ನದಲ್ಲಿ ಅಳವಡಿಸಿರುವ ವಜ್ರದಾಭರಣಗಳು ಒಲವನ್ನು ಬಲಪಡಿಸುತ್ತವೆ ಎನ್ನುತ್ತಾರೆ ಅವರು. ಆಭರಣಗಳ ದೇಖುರೇಕಿಯ ಬಗ್ಗೆಯೂ ಸಲಹೆಗಳನ್ನು ನೀಡಿದ್ದಾರೆ ರೇವತಿ ಕಾಮತ್. ಮುತ್ತಿನ ಆಭರಣಗಳಾದರೆ ಅವನ್ನು ಮೆದು ವಸ್ತ್ರದಲ್ಲಿ ಅಥವಾ ಅರಳೆಯಲ್ಲಿ ಸುತ್ತಿಡಬೇಕು.ಪ್ಲಾಟಿನಂ ಆಭರಣಗಳಾದರೆ ಅತಿ ಮುಚ್ಚಟೆಯಿಂದ ಎತ್ತಿಡಬೇಕು. ಅದರ ಒಂದು ಭಾಗ ಇನ್ನೊಂದರ ಮೇಲೆ ಬೀಳದಂತೆ ಗಮನಹರಿಸಬೇಕು. ಇಲ್ಲದಿದ್ದರೆ ಆಭರಣಗಳ ಮೇಲೆ ತಿರುಚು ಗಾಯ ಮೂಡುವ ಸಾಧ್ಯತೆಗಳಿರುತ್ತವೆ.

 

ಈಜುವಾಗ ಆಭರಣಗಳನ್ನು ಎತ್ತಿಡುವುದು ಸುರಕ್ಷಿತ. ಸಾಮಾನ್ಯವಾಗಿ ಅಲಂಕಾರ ಮುಗಿದ ನಂತರವೇ ಆಭರಣ ತೊಡುವುದು ಉತ್ತಮ ಅಭ್ಯಾಸ. ಸ್ನಾನ ಮಾಡುವಾಗ ಆಭರಣಗಳನ್ನು ಎತ್ತಿಡಬೇಕು.ಇಲ್ಲದಿದ್ದರೆ ಸೋಪಿನ ನೀರು ಆಭರಣಗಳ ಹೊಳಪಿನ ಮೇಲೆ ಸಣ್ಣದೊಂದು ಪರದೆ ಮೂಡುವಂತೆ ಮಾಡುತ್ತದೆ ರೇವತಿ ಎಚ್ಚರಿಸುತ್ತಾರೆ.

ಬದುಕಿನಲ್ಲಿ ಹೊನ್ನು ಇರಲಿ ಬಿಡಲಿ, ಬದುಕು ಬಂಗಾರವಾಗಿರಲಿ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.