ಸೋಮವಾರ, ಜನವರಿ 20, 2020
27 °C

ಓಂಕಾರೇಶ್ವರ ದೇವಸ್ಥಾನ: ಹುತ್ತರಿ ನಾಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡಿಕೇರಿ: ನಗರದ ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ಡಿ.15ರಂದು ಸಾಂಪ್ರದಾಯಿಕವಾಗಿ ಹುತ್ತರಿ ಹಬ್ಬವನ್ನು ಆಚರಿಸಲಾಗುವುದು ಎಂದು ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಮೇಶ್‌ ಹೊಳ್ಳ ತಿಳಿಸಿದರು.ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ನಿಶ್ಚಯಿಸಿರುವಂತೆ ಅಂದು ರಾತ್ರಿ 9.15ಕ್ಕೆ ನೆರೆ ಕಟ್ಟಲಾಗುವುದು. ರಾತ್ರಿ 9.45ಕ್ಕೆ ಕದಿರು ತೆಗೆಯಲಾಗುವುದು ಎಂದು ಅವರು ಹೇಳಿದರು.ಈ ಕಾರ್ಯಕ್ರಮವನ್ನು ಓಂಕಾರೇಶ್ವರ ದೇವಾಲಯ, ಮಡಿಕೇರಿ ಕೊಡವ ಸಮಾಜ ಹಾಗೂ ಪಾಂಡೀರ ಕುಟುಂಬದ ಸಹಕಾರದಲ್ಲಿ ನಡೆಸಲಾಗುತ್ತಿದ್ದು, ಆಗಮಿಸುವ ಭಕ್ತರಿಗೆ ಕದಿರನ್ನು ನೀಡಲಾಗುವುದು ಎಂದರು.ನಂತರ ಮೆರವಣಿಗೆ ತೆರಳಿದ ಬಳಿಕ ಕದಿರನ್ನು ಶ್ರೀ ಕೋಟೆ ಗಣಪತಿ ದೇವಾಲಯದಲ್ಲಿ ಅರ್ಪಿಸಿದ ಬಳಿಕ ಓಂಕಾರೇಶ್ವರ ದೇವಾಲಯದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆಯಲಿವೆ ಎಂದು ತಿಳಿಸಿದರು.ಡಿ.16ರಂದು ಹುತ್ತರಿ ಅಂಗವಾಗಿ ಮಧ್ಯಾಹ್ನ 3 ಗಂಟೆಗೆ ನಗರದ ಕೋಟೆ ಆವರಣದಲ್ಲಿ ಹುತ್ತರಿ ಕೋಲಾಟ ನಡೆಯಲಿದೆ ಎಂದು ಅವರು ಹೇಳಿದರು. ದೇವಾಲಯದ ವ್ಯವಸ್ಥಾಪನಾ ಸಮಿತಿಯ ಸದಸ್ಯ ಗಾಂಧಿ ಅಯ್ಯಪ್ಪ, ವ್ಯವಸ್ಥಾಪಕ ಸಂಪತ್‌ ಕುಮಾರ್‌ ಇದ್ದರು.

ಪ್ರತಿಕ್ರಿಯಿಸಿ (+)