ಗುರುವಾರ , ಮೇ 26, 2022
23 °C

ಔರಾದ್: ಕೆಜೆಪಿ ಧರಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಔರಾದ್: ರಸ್ತೆ ಕಾಮಗಾರಿ ಪೂರ್ಣಗೊಳಿಸುವಂತೆ ಆಗ್ರಹಿಸಿ ಸೋಮವಾರದಿಂದ ಖೇರ್ಡಾ ಮತ್ತು ಹೊಕ್ರಾಣಾ ಗ್ರಾಮಸ್ಥರು ನಡೆಸುತ್ತಿರುವ ಹೋರಾಟವನ್ನು ಬೆಂಬಲಿಸಿ ಬುಧವಾರ ಕೆಜೆಪಿ ಮುಖಂಡರು ಧರಣಿ ನಡೆಸಿದರು.ರಮೇಶ ದೇವಕತೆ, ಧೋಂಡಿಬಾ ನರೋಟೆ, ಸೂರ್ಯಕಾಂತ ಫುಲಾರಿ, ಶಿವಾಜಿ ಬೋಗಾರ, ಜಗನ್ನಾಥ ಮುದಾಳೆ, ಅಫಜಲ್ ಪಠಾಣ, ರಾಜಕುಮಾರ ಕನಸೆ, ಸಂಜು ವಡೆಯರ್ ನೇತೃತ್ವದಲ್ಲಿ ಧರಣಿ ನಡೆಯಿತು.ಖೇರ್ಡಾ ಮತ್ತು ಹೊಕ್ರಾಣಾ ಗ್ರಾಮಸ್ಥರು ಕಳೆದ ಮೂರು ದಿನಗಳಿಂದ ಧರಣಿ ನಡೆಸುತ್ತಿದ್ದರೂ ಯಾವೊಬ್ಬ ಅಧಿಕಾರಿ ಕೇಳಲು ಬಂದಿಲ್ಲ.

ರಸ್ತೆ ಕಾಮಗಾರಿ ಅಪೂರ್ಣ ಮಾಡಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ನೆನೆಗುದಿಗೆ ಬಿದ್ದ ಕಾಮಗಾರಿ ಆರಂಭಿಸದಿದ್ದಲ್ಲಿ ಔರಾದ್ ಬಂದ್‌ಗೆ ಕರೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.