ಸಿಮೆಂಟ್... ಮರಳು, ಇಟ್ಟಿಗೆ, ಕಲ್ಲು, ಜಲ್ಲಿ, ಕಬ್ಬಿಣದ ಜತೆಗೂಡಿ ಪುಟ್ಟ ಮನೆ, ದೊಡ್ಡ ಬಂಗಲೆ, ಬೃಹತ್ ಸಂಕೀರ್ಣ, ದೇಗುಲ, ಮದುವೆ ಛತ್ರ, ಸೇತುವೆ, ಅಣೆಕಟ್ಟೆ ಯಾವುದೇ ನಿರ್ಮಾಣವಿರಲಿ ಅತ್ಯಗತ್ಯವಾಗಿ ಬೇಕಾಗಿರುವ ಸರಕು. ಇತ್ತೀಚೆಗೆ ಕಲಾಕೃತಿಗಳ ರಚನೆಗೂ ಸಿಮೆಂಟ್ ಬಳಕೆ ಆಗುತ್ತಿರುವುದು ಅದರ ಹೆಚ್ಚುಗಾರಿಕೆಗೆ ಸಾಕ್ಷಿ ಎನ್ನಬಹುದು.

ಅತಿ ನುಣುಪಾಗಿ ಇರುವ, ಮುಟ್ಟಿದರೆ ಕೈಗೇ ಮೆತ್ತಿಕೊಳ್ಳುವ, ನೀರು ಬಿದ್ದರೆ ಮೊದಲಿಗೆ ಮೃದುವಾಗಿ- ನಂತರ ಗಂಟೆಗಳು ಕಳೆದಂತೆಲ್ಲ ಕಲ್ಲಿನಂತೆ ಗಟ್ಟಿಯಾಗುವ, ನೀರು ಬಿದ್ದಷ್ಟೂ ಹೆಚ್ಚು ದೃಢವಾಗುವ, ಬೂದು ಬಣ್ಣದ ಈ ಸಾಮಗ್ರಿಗೆ ಇಂಗ್ಲಿಷ್ನಲ್ಲಿ ಇಟ್ಟಿರುವ ಹೆಸರು ಸಿಮೆಂಟ್. ಇದು ಇಲ್ಲದೆ, ಯಾವುದೇ ನಿರ್ಮಾಣ ಈ ಸಾಧ್ಯ ಇಲ್ಲವೇ ಇಲ್ಲ ಎನ್ನುವಷ್ಟು ಅನಿವಾರ್ಯವಾಗಿದೆ.

ಸುಣ್ಣದ ಕಲ್ಲು, ಕಲ್ಲಿದ್ದಲಿನ ಹಾರುಬೂದಿ, ಮತ್ತಿತರ ಮೂಲವಸ್ತುಗಳನ್ನು ಬಳಸಿ ಸಿಮೆಂಟ್ ತಯಾರಿಸಲಾಗುತ್ತದೆ. ಇಂಥ ಸಿಮೆಂಟ್ ಒಂದೇ ಬಗೆಯಲ್ಲಿಲ್ಲ. ಮೂಲದಲ್ಲಿ ಒಪಿಸಿ ಮತ್ತು ಪಿಪಿಸಿ ಎಂಬ ಎರಡು ವಿಧದಲ್ಲಿ ಸಿಮೆಂಟ್ ತಯಾರಾಗುತ್ತದೆ. ಒಪಿಸಿ ಎಂದರೆ ಆರ್ಡಿನರಿ ಪೋರ್ಟ್ಲ್ಯಾಂಡ್ ಸಿಮೆಂಟ್. ಪಿಪಿಸಿ ಎಂದರೆ ಪೊಝೊಲೋನಾ ಪೋರ್ಟ್ಲ್ಯಾಂಡ್ ಸಿಮೆಂಟ್.

ಆರ್ಡಿನರಿ ಪೋರ್ಟ್ಲ್ಯಾಂಡ್ ಸಿಮೆಂಟ್- ದೊಡ್ಡ ಸಿಮೆಂಟ್ ಕಂಬಗಳು(ಪಿಲ್ಲರ್ಸ್) ಹಾಗೂ ದೊಡ್ಡ ತೊಲೆಗಳನ್ನು(ಸಿಮೆಂಟ್ ಬೀಮ್ಸ) ಮತ್ತು ತಾರಸಿಯನ್ನು ನಿರ್ಮಿಸಲು, ಗೋಡೆಗಳನ್ನು ಕಟ್ಟಲು ಬಹಳ ಸಮರ್ಥವಾಗಿದ್ದರೆ, ಪೊಝೊಲೋನಾ ಪೋರ್ಟ್ಲ್ಯಾಂಡ್ ಸಿಮೆಂಟ್ ಗೋಡೆ- ತಾರಸಿ ಪ್ಲಾಸ್ಟರಿಂಗ್ಗೆ ಹೇಳಿಮಾಡಿಸಿದ್ದಾಗಿದೆ ಎನ್ನುತ್ತಾರೆ ಸಿಮೆಂಟ್ ತಯಾರಿ ಕ್ಷೇತ್ರದ ತಜ್ಞರು.

ಇಷ್ಟೇ ಅಲ್ಲ, ಸಿಮೆಂಟ್ಗಳಲ್ಲಿ ಹಲವು ದರ್ಜೆಗಳೂ(ಗ್ರೇಡ್) ಇವೆ. ಸಿಮೆಂಟಿನ ದೃಢತೆ, ಅದು ನೀರು ಕುಡಿದು (ಕ್ಯೂರಿಂಗ್) ಗಟ್ಟಿಯಾಗಲು ತೆಗೆದುಕೊಳ್ಳುವ ಅವಧಿ, ದೀರ್ಘ ಕಾಲದ ಬಾಳಿಕೆ, ಮರಳು-ಕಬ್ಬಣಿ-ಜಲ್ಲಿ ಜತೆ ಸಮ್ಮಿಶ್ರಣಗೊಳ್ಳುವ ಬಗೆ, ಬಣ್ಣ ಮೊದಲಾದ ಗುಣಗಳನ್ನು ಆಧರಿಸಿ ಸಿಮೆಂಟಿನ ದರ್ಜೆಯನ್ನು ನಿರ್ಧರಿಸಲಾಗುತ್ತದೆ. ಆಯಾ ದರ್ಜೆಗೆ ತಕ್ಕಂತೆ ಸಿಮೆಂಟಿನ ಬೆಲೆಯಲ್ಲಿಯೂ ವ್ಯತ್ಯಾಸವಾಗುತ್ತದೆ.

ಗುಣಮಟ್ಟದ ವಿಚಾರಕ್ಕೆ ಬಂದರೆ ಒಂದೇ ಬಗೆಯಲ್ಲಿಯೂ ಇಲ್ಲ. ಕಂಪನಿಯಿಂದ ಕಂಪನಿಗೆ, ಬ್ರಾಂಡ್ನಿಂದ ಬ್ರಾಂಡ್ಗೆ ಸಿಮೆಂಟ್ ಗುಣಮಟ್ಟದಲ್ಲಿ ವ್ಯತ್ಯಯವಿರುತ್ತದೆ. ಅಷ್ಟೇ ಅಲ್ಲ, ಸಿಮೆಂಟ್ ತಯಾರಿಕೆ ಕಂಪನಿ ಇರುವ ಪ್ರದೇಶ, ಅಲ್ಲಿಯಷ್ಟೇ ದೊರಕುವ ಕಚ್ಚಾ ಸಾಮಗ್ರಿ, ಸಿಮೆಂಟ್ ತಯಾರಿ ಯಂತ್ರಗಳ ಸಾಮರ್ಥ್ಯ, ಕಂಪನಿಗಳ ಬದ್ಧತೆಯೂ ಸಿಮೆಂಟ್ನ ಗುಣಮಟ್ಟವನ್ನು ನಿರ್ಧರಿಸುವಂತಹುದಾಗಿರುತ್ತದೆ.

ಸಿಮೆಂಟ್ ಎಂಬುದು ಎಷ್ಟು ಕಾಲವಾದರೂ ಇಟ್ಟು ಬಳಸಬಹುದಾದ ವಸ್ತು ಅಲ್ಲ. ಅದಕ್ಕೂ ಕೆಲವು ವಾರ, ತಿಂಗಳ ಕಾಲ ಮಿತಿಯಷ್ಟೇ ಇದೆ. ದೀರ್ಘ ಕಾಲ ಸಿಮೆಂಟನ್ನು ಕಾಯ್ದಿಡಲಾಗುವುದಿಲ್ಲ. ವಾತಾವರಣದಲ್ಲಿನ ತೇವಾಂಶವನ್ನು ಹೀರಿಕೊಂಡೇ ಸಿಮೆಂಟ್ ಇದ್ದಲ್ಲಿಯೇ, ಚೀಲದೊಳಗೇ ಕಲ್ಲಿನಂತೆ ಗಟ್ಟಿಯಾಗಿ ಬಿಡುತ್ತದೆ. ನಂತರ ಅದು ನಿರುಪಯೋಗಿಯಾಗುತ್ತದೆ. ಮತ್ತೆ ಅದನ್ನು ಚೀಲದಿಂದ ತೆಗೆಯುವುದೂ ಕಷ್ಟ, ತೆಗೆದರೂ ಪುಡಿ ಮಾಡಿ ಮತ್ತೆ ಬಳಸಿಕೊಳ್ಳಬಹುದು ಎಂಬುದು ಆಗದ ಮಾತು.

ಸಿಮೆಂಟಿನ ಇನ್ನೊಂದು ಮೂಲಗುಣ ಎಂದರೆ, `ನೀನು ಎಷ್ಟು ನೀರು ಕೊಡುತ್ತೀಯೋ ನಾನು ಅಷ್ಟೂ ಗಟ್ಟಿಯಾಗುವೆ~ ಎನ್ನುವುದಾಗಿದೆ. ಅಂದರೆ, ಮನೆ, ಕಟ್ಟಡ, ಸೇತುವೆ ಏನೇ ಇರಲಿ, ಅವನ್ನು ನಿರ್ಮಿಸುವ ಮುನ್ನ ಭೂಮಿ ಅಗೆದು ಕಲ್ಲಿನ ತಳಪಾಯವನ್ನೋ, ದೊಡ್ಡ ಕಂಬಕ್ಕೆ ಆಧಾರವನ್ನೋ ನಿರ್ಮಿಸುವ ಹಂತದಿಂದ ಹಿಡಿದು ಪ್ರತಿ ಹಂತದಲ್ಲಿಯೂ ಸಿಮೆಂಟು ಹೆಚ್ಚು ಕ್ಯೂರಿಂಗ್ (ನೀರಿನಿಂದ ತೋಯ್ಯಿಸುವ ಅಗತ್ಯ ಸೇವೆ) ಕೇಳುತ್ತದೆ. ನಂತರದಲ್ಲಿ ಗೋಡೆ ನಿರ್ಮಾಣ, ಸಜ್ಜಾ ನಿರ್ಮಾಣ ಹಂತದಲ್ಲಿಯೂ ಅವನ್ನು ಬೆಳಿಗ್ಗೆ, ಮಧ್ಯಾಹ್ನ, ಸಂಜೆ ಎಂದು ದಿನದಲ್ಲಿ ಸಾಧ್ಯವಾದಷ್ಟು (3-4 ಬಾರಿಯಾದರೂ) ನೀರಿನಿಂದ ತೊಯ್ಯಿಸಬೇಕಾದ್ದು ಅತ್ಯಗತ್ಯ. ಆಗ ತಳಪಾಯ, ಗೋಡೆ, ಸಜ್ಜ ಎಲ್ಲವೂ ಬಹಳ ದೃಢವಾಗುತ್ತವೆ, ದೀರ್ಘ ಕಾಲ ಗಟ್ಟಿಮುಟ್ಟಾಗಿರುತ್ತವೆ.

ಇನ್ನು ತಾರಸಿಗಂತೂ ಹೆಚ್ಚು ನೀರಿನ ಉಪಚಾರ ಅಗತ್ಯ. ತಾರಸಿ ನಿರ್ಮಿಸಿದ ನಂತರ ಅದರ ಅಂಚಿಗೆ ಮತ್ತು ಮಧ್ಯೆ ಹಲವು ವಿಭಾಗ ಮಾಡಿ ಕಟ್ಟೆಕಟ್ಟಿ ಪುಟ್ಟ ಕೊಳದಂತೆ ನೀರು ತುಂಬಿಸಿ ವಾರಗಳವರೆಗೂ (ಸಿಮೆಂಟಿನ ದರ್ಜೆ ಆಧರಿಸಿ ಕ್ಯೂರಿಂಗ್ ಅವಧಿ ವ್ಯತ್ಯಾಸವಾಗುತ್ತದೆ) ಉಪಚಾರ ಮಾಡಬೇಕು.

ಅನುಭವಿ ಕಟ್ಟಡ ನಿರ್ಮಾಣಗಾರರು, ಮೇಸ್ತ್ರಿಗಳು ಹೇಳುವುದು `ಗೋಡೆ, ಸಜ್ಜ, ತಾರಸಿಯಿಂದ ಬಿಳಿ ಬಣ್ಣದ ದ್ರವ ಹೊರಬಿದ್ದಿದೆ ಎಂದರೆ ಒಳ್ಳೆಯ ಕ್ಯೂರಿಂಗ್ ಆಗಿದೆ ಎಂದು ಅರ್ಥ. ಹಾಗೆ ಗೋಡೆ, ತಾರಸಿಯಲ್ಲಿ ಬಿಳಿದ್ರವ ಕಾಣುವವರೆಗೂ ಕ್ಯೂರಿಂಗ್ ಕೈಗೊಳ್ಳಿರಿ. ನಿಮ್ಮ `ಕನಸಿನ ಮನೆ~ ದೀರ್ಘ ಕಾಲ ಬಾಳಿಕೆ ಬರುತ್ತದೆ. ಬಹಳ ಗಟ್ಟಿಮುಟ್ಟಾಗಿರುತ್ತದೆ~.
ಇದಿಷ್ಟು ಸಿಮೆಂಟ್ ಎಂಬ ನಿರ್ಮಾಣ ಸಾಮಗ್ರಿಯ ಸಂಕ್ಷಿಪ್ತ `ಆತ್ಮಕಥೆ~. ಬೂದು ಬಣ್ಣದ ಈ `ಗಟ್ಟಿ ಕುಳ~ದ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಮುಂದಿನ ವಾರ ಓದಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.