ರಾಯಚೂರು: ಮಳೆಗಾಲವಿರಲಿ. ಬಿಸಿಲು ಕಾಲವಿರಲಿ. ವರ್ಷಪೂರ್ತಿ ನೀರಿನ ಬವಣೆ ಈ ಗ್ರಾಮದ ಜನತೆಗೆ ತಪ್ಪಿಲ್ಲ. ಹಗಲಿರಲಿ. ರಾತ್ರಿ ಇರಲಿ. ನೀರಿಗಾಗಿ ಪರಿತಪಿಸುವುದೇ. ಎಲ್ಲಿ ನೀರು ಸಿಗುತ್ತದೋ ಅಲ್ಲಿಗೆ ಓಡುವುದು!
ಮನೆ ಮಂದಿಗೆಲ್ಲ ನೀರು ತರುವುದೇ ಕೆಲಸವೇನೋ ಎಂಬುವಷ್ಟರ ಮಟ್ಟಿಗೆ ನೀರಿನ ಸಮಸ್ಯೆಗೆ ಈ ಗ್ರಾಮ ತತ್ತರಿಸಿದೆ.

ಇದು ರಾಯಚೂರು ತಾಲ್ಲೂಕಿನ ಕಟ್ಲಟ್ಕೂರು ಗ್ರಾಮದ ಸ್ಥಿತಿ! ಜಿಲ್ಲಾ ಕೇಂದ್ರ ರಾಯಚೂರಿನಿಂದ ಸುಮಾರು 10 ಕೀ.ಮಿ ದೂರ ಈ ಗ್ರಾಮ ಇದೆ. ಗ್ರಾಮ ಪಂಚಾಯಿತಿಗೆ ನಿತ್ಯ ನೀರಿಗಾಗಿ ಒತ್ತಾಯ ಇದ್ದದ್ದೇ. ಸಮಯ ಸಿಕ್ಕಾಗೆಲ್ಲ ಕಂಗೆಟ್ಟು ಜಿಲ್ಲಾಡಳಿತ ಕಚೇರಿಗೂ ಬಂದು ಈ ಗ್ರಾಮದ ಜನತೆ ನೀರಿನ ಬವಣೆ, ನೀರಿಗಾಗಿ ತಾವು ಪಡುತ್ತಿರುವ ಕಷ್ಟದ ಬಗ್ಗೆ ಅಲವತ್ತುಕೊಂಡಿದ್ದಾರೆ.

ಆದರೆ, ಸಮಸ್ಯೆ ಇನ್ನೂ ಜೀವಂತ. ಈ ಊರಾಗ ಇರಬಾರದ್ರಪ್ಪ. ನೀರಿಗಾಗಿ ನಿದ್ರೆ ಮಾಡುವ ಹಂಗೂ ಅಲ್ಲ. ಅಂಥ ಸ್ಥಿತಿ. ಬೆಳಗಿನ ಜಾವ ನೀರಿಗಾಗಿ ಗ್ರಾಮದ ಜನತೆ ಯುದ್ದಕ್ಕೆ ಹೋದವರಂತೆ ಹೋಗ್ಬೇಕು. ಇನ್ನೇನು ಜಗಳ ಆಡಬೇಕು ಅಂಥ ಸ್ಥಿತಿ. ಸಾಕಾಗಿ ಹೋಗಿದೆ ಎಂದು ಗ್ರಾಮದ ಜನತೆ ನಿತ್ಯ ತಾವು ಅನುಭವಿಸುವ ಗೋಳು ತೋಡಿಕೊಳ್ಳುತ್ತಾರೆ.

ಕಟ್ಲಟ್ಕೂರು ಗ್ರಾಮಕ್ಕೆ ತೆರಳುವವರನ್ನು ಮೊದಲು ಸ್ವಾಗತಿಸುವುದು ಊರಾಚೆ ರಸ್ತೆಗೆ ಹೊಂದಿಕೊಂಡು ಇರುವ ಕಸ,ಕಡ್ಡಿ ಹಾಗೂ ಇನ್ನಿತರೆ ತ್ಯಾಜ್ಯ ವಸ್ತುಗಳಿಂದ ಕೂಡಿದ ಕೊಳಚೆ ನೀರು ತುಂಬಿದ ಎರಡು ದೊಡ್ಡ ತೆರೆದ ತೊಟ್ಟಿಗಳು! ಇವು ಗ್ರಾಮೀಣ ನೈರ್ಮಲ್ಯ, ಶುದ್ಧ ಕುಡಿಯುವ ನೀರು ಪೂರೈಕೆಯಂಥ ಯೋಜನೆಗಳನ್ನು ಅಣಕಿಸುವಂತಿವೆ.

ಈ ತೆರೆದ ತೊಟ್ಟಿಗಳನ್ನು ಗ್ರಾಮದ ರೈತರೊಬ್ಬರು ತಮ್ಮ ಜಮೀನಿಗೆ ನೀರು ಉಣಿಸಲು ನೀರು ಸಂಗ್ರಹಕ್ಕೆ ನಿರ್ಮಿಸಿದ್ದಂಥದ್ದು. ಆದರೆ, ನೀರಿನ ಸಮಸ್ಯೆಗೆ ಕಂಗೆಟ್ಟಿರುವ ಗ್ರಾಮದ ಜನತೆ ನೀರಿಗಾಗಿ ತೆರೆದ ತೊಟ್ಟಿಗಳಿಗೆ ದುಂಬಾಲು ಬಿದ್ದಿದ್ದಾರೆ. ಇಲ್ಲಿನ ನೀರನ್ನು ದ್ವಿಚಕ್ರವಾಹನ, ಸೈಕಲ್ ಮೇಲೆ, ಜೋಡು ಕೊಡ ಹೊತ್ತು ಜನತೆ ಒಯ್ಯುತ್ತಾರೆ.

ಈ ಕಸ ಕಡ್ಡಿ ತುಂಬಿದ ನೀರೆ ನಮ್ಗೆ ಗತಿ. ಇಲ್ಲದೇ ಇದ್ರೆ ಬಳಕೆ ಮಾಡ್ಲಿಕೆ ನೀರೇ ಇಲ್ಲ. ಗ್ರಾಮದ ಸುತ್ತಮುತ್ತ, ಕೆಲ ಮೈಲು ದೂರ ಇರುವ ನೀರಾವರಿ ತೋಟಗಳಿಗೆ ತೆರಳಿ ನೀರು ತರಬೇಕು. ಅದಕ್ಕಿಂತ ಇದೇ ವಾಸಿ ಎಂದು ಒಯ್ಯುತ್ತೇವೆ ಎಂದು ಜನ ಸಮಸ್ಯೆ ಬಿಚ್ಚಿಡುತ್ತಾರೆ.

ಗ್ರಾಮಕ್ಕೆ ಕುಡಿಯುವ ನೀರು ಪೂರೈಕೆಗೆ ಚಂದ್ರಬಂಡಾ ರಸ್ತೆಯಿಂದ ಕಟ್ಲಟ್ಕೂರು ಗ್ರಾಮಕ್ಕೆ ತೆರಳುವ ರಸ್ತೆ ಮಾರ್ಗದ ಕ್ರಾಸ್ನಲ್ಲಿ ಗ್ರಾಮ ಪಂಚಾಯಿತಿ ಒಂದು ಕೊಳವೆ ಬಾವಿ ನಿರ್ಮಿಸಿದೆ. ಈ ಕೊಳವೆ ಬಾವಿಯಿಂದ ಗ್ರಾಮದಲ್ಲಿರುವ ಟ್ಯಾಂಕ್ಗೆ ನೀರು ಬಂದು ಸಂಗ್ರಹವಾಗಿ ಪೂರೈಕೆ ಆಗಬೇಕು. ಈ ಒಂದು ಕೊಳವೆ ಬಾವಿಯಿಂದ ದೊರಕುವ ನೀರೂ ಗ್ರಾಮಕ್ಕೆ ಸಾಕಾಗುವುದಿಲ್ಲವಂತೆ.

ಆ ನೀರೂ ವಿದ್ಯುತ್ ಸಮಸ್ಯೆ, ಸರಿಯಾದ ಸಮಯಕ್ಕೆ ನೀರು ಬಿಡದೇ ಇರುವುದರಿಂದ ದೊರಕುವುದಿಲ್ಲ. ಕೊಳವೆ ಬಾವಿಯಿಂದ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಕುಡಿಯುವ ನೀರು ಪೂರೈಕೆ ಪೈಪ್ಲೈನ್ನ್ನೇ ಕೊರೆದು ಕೆಲವರು ಸಂಪರ್ಕ ಪಡೆದು ನೀರು ಪಡೆಯುತ್ತಿರುವುದು. ಹೀಗೆ ಹಲವು ಕಾರಣಗಳಿಂದ ಅರ್ಧ ಊರಿಗೆ ನೀರು ಸಿಕ್ಕರೆ ಇನ್ನರ್ಧ ಊರಿಗೆ ನೀರೇ ಇಲ್ಲ. ಗ್ರಾಮದಲ್ಲಿ ಕೆಲ ಕೈಪಂಪ್ ಇದ್ದರೂ ಪ್ರಯೋಜನಕ್ಕಿಲ್ಲದಂತಾಗಿದೆ.

ಒಂದೆರಡು ಕೊಡ ನೀರು ಪಡೆಯಲು ಎರಡು ದಿನ ಕಾಯಬೇಕು ಎಂದು ಗ್ರಾಮಸ್ಥರಾದ ಹನುಮಂತಪ್ಪ, ಭೀಮಣ್ಣ, ವೃದ್ದೆ ಶಿವಮ್ಮ, ಬಾಲಕ ಮಲ್ಲಿಕಾರ್ಜುನ ಅವರು `ಪ್ರಜಾವಾಣಿ~ಗೆ ಸಮಸ್ಯೆ ಹೇಳಿಕೊಂಡ್ರು.

ಕುಡಿಯಲು ಊರ ಬಾವಿ ನೀರೇ ಗತಿ: ಕಟ್ಲಟ್ಕೂರ ಗ್ರಾಮದ ಊರಾಚೆ ಇರುವ ಹಳೆಯ ಮತ್ತು ಶಿಥಿಲಾವಸ್ಥೆಯಲ್ಲಿರುವ `ಊರ ಬಾವಿ~ಯೇ ಈಗ ಗ್ರಾಮದ ಜನತೆಗೆ ಕುಡಿಯುವ ನೀರಿಗೆ ಆಧಾರ ಆಗಿದೆ. ಹಳೆಯದಾದ ಈ ಬಾವಿ ಪಕ್ಕವೇ ಗ್ರಾಮದ ರೈತರ ತೋಟವಿದೆ.

ಅವರೇ ತಮ್ಮ ಕೊಳವೆ ಬಾವಿಯಿಂದ ಈ ಬಾವಿಗೆ ನೀರು ತುಂಬಿಸುತ್ತಾರೆ. ಈ ನೀರೇ ಗ್ರಾಮಸ್ಥರಿಗೆ ಆಧಾರವಾಗಿದೆ. ಆಳವಾದ ಮತ್ತು ಶಿಥಿಲಗೊಂಡ ಈ ಬಾವಿಗೆ ಚಿಕ್ಕಮಕ್ಕಳು, ಮಹಿಳೆಯರು, ವಯಸ್ಸಾದವರೂ ಇಳಿದು ನೀರು ತುಂಬಿದ ಕೊಡ ಹೊತ್ತು ತರುತ್ತಾರೆ. ಅಪ್ಪಿ ತಪ್ಪಿ ಕಾಲು ಜಾರಿದರೆ ಮೂಲೆಗುಂಪು!.

ಊರಾಗ ನೀರಿನ ಸಮಸ್ಯೆ ಇದೆ. ನಮ್ಮ ಬೆಳೆಗೆ ನೀರಿನ ಕೊರತೆ ಆಗುತ್ತದೆ. ಆದ್ರೂ ಊರ ಜನರಿಗೆ ನೀರು ಕುಡಿಯಾಕಾದ್ರೂ ಬೇಕಲ್ಲ ಅಂಥ ನಿತ್ಯ ಊರ ಬಾವಿಗೆ ನೀರು ತುಂಬಿಸಿರುತ್ತೇವೆ ಎಂದು ರೈತ ಪರಶುರಾಮ ಹೇಳಿದ್ರು.

ಇದು ಜಿಲ್ಲಾ ಕೇಂದ್ರಕ್ಕೆ ಹತ್ತಿರುವ ಇರುವ ಗ್ರಾಮದ ನೀರಿನ ಬವಣೆ! ಕುಡಿಯುವ ನೀರು ಪೂರೈಕೆಗೆ ಕೋಟ್ಯಂತರ ರೂಪಾಯಿ ಬಂದಿದೆ. ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗಿದೆ ಎಂಬ ಜಿಲ್ಲಾ ಆಡಳಿತ ಯಂತ್ರ, ಜಿಲ್ಲಾ ಪಂಚಾಯಿತಿ, ಜನಪ್ರತಿನಿಧಿಗಳ ಹೇಳಿಕೆಗಳನ್ನು ಈ ಗ್ರಾಮದ ಸ್ಥಿತಿ ಪ್ರಶ್ನಿಸುವಂತಿದೆ. ಈ ಸಮಸ್ಯೆ ಪರಿಹಾರ ಎಂದು?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.