ವಾಷಿಂಗ್ಟನ್(ಪಿಟಿಐ):ಜಾಗತಿಕ ಸೆಲ್ಫೋನ್ಗಳ ಮೇಲೆ ಕಣ್ಗಾವಲು ನಡೆಸಿದ್ದನ್ನು ಸಮರ್ಥಿಸಿಕೊಂಡಿರುವ ಅಮೆರಿಕದ ರಹಸ್ಯ ರಾಷ್ಟ್ರೀಯ ಭದ್ರತಾ ಸಂಸ್ಥೆಯು(ಎನ್ಎಸ್ಎ), ಇದು ಅಮೆರಿಕ ಅಧ್ಯಕ್ಷರ ಆದೇಶ ಅಡಿಯಲ್ಲಿ ಕಾನೂನು ಬದ್ಧ ಎಂದು ವಾದಿಸಿದೆ.

‘ಇದು ಸಾರ್ವತ್ರಿಕ ಅಲ್ಲ. ಪ್ರತಿ ಸೆಲ್ಫೋನಿನ ಸ್ಥಾನ ಎನ್ಎಸ್ಎಗೆ ತಿಳಿದಿಲ್ಲ ಹಾಗೂ ಅದನ್ನು ಶೋಧಿಸಲೂ ಸಾಧ್ಯವಿಲ್ಲ. ವಿಶ್ವದ ಅತಿ ಅಪಾಯಕರ ಭಾಗಗಳ ಕೆಲವೆಡೆ ಈ ಯೋಜನೆಯನ್ನು ಬಳಸಲಾಗಿದೆ. ರಾಷ್ಟ್ರಕ್ಕೆ ಹಾನಿಮಾಡಲು ಭಯೋತ್ಪಾದಕರು ಸಕ್ರೀಯವಾಗಿ ಯೋಜನೆ ರೂಪಿಸುವ ತಾಣಗಳೂ ಇದರಲ್ಲಿ ಸೇರಿವೆ. ಈ ಯೋಜನೆಯಿಂದ ವಿದೇಶಿ ಗುಪ್ತಚರ ಕಣ್ಗಾವಲು ಕಾಯ್ದೆ (ಎಫ್ಐಎಸ್ಎ) ಉಲ್ಲಂಘನೆಯಾಗಿಲ್ಲ’ ಎಂದು ಎನ್ಎಸ್ಎ ವಕ್ತಾರೆ ವಾಣಿ ವಿನ್ಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಶ್ವವ್ಯಾಪಿ ಸೆಲ್ಫೋನ್ಗಳು ಎಲ್ಲಿವೆ ಎಂಬುದರ ಸುಮಾರು 5 ಶತಕೋಟಿ ದಾಖಲೆಗಳನ್ನು ಎನ್ಎಸ್ಎ ಪ್ರತಿನಿತ್ಯ ಸಂಗ್ರಹಿಸುತ್ತಿದೆ. ಇದರಲ್ಲಿ ಅಮೆರಿಕ ಪ್ರಜೆಗಳೂ ಹಾಗೂ ಅಮೆರಿಕದ ನಾಗರಿಕರಲ್ಲದ ಜನರೂ ಸೇರಿದ್ದಾರೆ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದ ಕೆಲದಿನಗಳ ಬೆನ್ನಲ್ಲೆ ಈ ಹೇಳಿಕೆ ಹೊರಬಿದ್ದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.