ಗುರುವಾರ , ಜೂನ್ 17, 2021
21 °C

ಕಣ್ಣಿಗೆ ರಾಚುವ ಅಶ್ಲೀಲ ಪುಸ್ತಕಗಳದ್ದೇ ಕಾರುಬಾರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಣ್ಣಿಗೆ ರಾಚುವ ಅಶ್ಲೀಲ ಪುಸ್ತಕಗಳದ್ದೇ ಕಾರುಬಾರು

ಪುಟ್ಟ ವರದಿಗಾರರು ಸುದ್ದಿ ಬರೆದಾಗ...

ಬೆಂಗಳೂರು: `ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಪುಸ್ತಕದ ಅಂಗಡಿಗಳು ಸಾಕಷ್ಟು ಸಂಖ್ಯೆಯಲ್ಲಿವೆ. ಆದರೆ, ಅಲ್ಲಿ ಅಶ್ಲೀಲ ಪುಸ್ತಕಗಳನ್ನು ಕಣ್ಣಿಗೆ ರಾಚುವಂತೆ ಇಟ್ಟಿರುತ್ತಾರೆ. ಇದು ಚಿಕ್ಕ ಮಕ್ಕಳ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ...~ಇದು `ವರದಿಗಾರರಾಗಿ ಮಕ್ಕಳು~ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪುಟ್ಟ ವರದಿಗಾರರು ಶುಕ್ರವಾರ ಸಿದ್ಧಪಡಿಸಿದ ಗೋಡೆ ಪತ್ರಿಕೆ `ಮಕ್ಕಳ ಸಂದೇಶ~ದಲ್ಲಿ ಇದ್ದ ಪ್ರಧಾನ ವರದಿಯ ಆಯ್ದ ಭಾಗ.ಚೈಲ್ಡ್ ರೈಟ್ಸ್ ಟ್ರಸ್ಟ್ (ಸಿಆರ್‌ಟಿ), `ಯುನಿಸೆಫ್~ ಮತ್ತು ರಾಜ್ಯ ಮಕ್ಕಳ ಹಕ್ಕುಗಳ ನಿಗಾ ಕೇಂದ್ರ ಆಯೋಜಿಸಿರುವ ಕಾರ್ಯಕ್ರಮದ ಅಂಗವಾಗಿ ನಗರದ ವಿವಿಧ ಇಲಾಖೆಗಳ ಕಚೇರಿಗಳು, ಸಾರ್ವಜನಿಕ ಸ್ಥಳಗಳಿಗೆ ಗುರುವಾರ ಭೇಟಿ ನೀಡಿದ್ದ ಪುಟ್ಟ ವರದಿಗಾರರು, ಅಲ್ಲಿ ಕಂಡ ಕುತೂಹಲಕರ ಅಂಶಗಳನ್ನು ಆಧರಿಸಿ ಪತ್ರಿಕೆ ಸಿದ್ಧಪಡಿಸಿದ್ದರು.ಸಿದ್ಧಪಡಿಸಿದ ಪತ್ರಿಕೆಗಳನ್ನು ಇಲ್ಲಿನ ಮಿಷನ್ ರಸ್ತೆಯಲ್ಲಿರುವ ಎಸ್‌ಸಿಎಂ ಹೌಸ್‌ನಲ್ಲಿ ಶುಕ್ರವಾರ ಪ್ರದರ್ಶನಕ್ಕೆ ಇಡಲಾಗಿತ್ತು. ಅಶ್ಲೀಲ ಪುಸ್ತಕಗಳ ಕುರಿತು ಮಾತ್ರವಲ್ಲ, ಮೆಜೆಸ್ಟಿಕ್ ಪ್ರದೇಶದಲ್ಲಿ ತಿಂಡಿ-ತಿನಿಸುಗಳನ್ನು ಕೆಲವು ಅಂಗಡಿಗಳ ಮಾಲೀಕರು ಗಾಳಿಗೆ ತೆರೆದಿಡುವುದು, ಬಸ್ ನಿಲ್ದಾಣದಲ್ಲಿ ಅಂಗವಿಕಲರಿಗೆ ಸೂಕ್ತ ಸೌಲಭ್ಯ ಇಲ್ಲದಿರುವ ಕುರಿತೂ `ಮಕ್ಕಳ ಸಂದೇಶ~ ಪತ್ರಿಕೆಯಲ್ಲಿ ವರದಿ ಬರೆಯಲಾಗಿದೆ.ಇಲ್ಲಿ ಇದು ಲೀಡ್ ಸುದ್ದಿ!: ಮಕ್ಕಳ ಇನ್ನೊಂದು ತಂಡ ಸಿದ್ಧಪಡಿಸಿದ `ಪ್ರಜ್ಞಾ ಪತ್ರಿಕೆ~ಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಅಮಿತಾ ಪ್ರಸಾದ್ ಅವರ ಜೊತೆ ಪುಟ್ಟ ವರದಿಗಾರರು ನಡೆಸಿದ ಸಂವಾದ ಪ್ರಮುಖ ಸುದ್ದಿಯಾಗಿದೆ! ಡಾ. ಅಮಿತಾ ಅವರನ್ನು ಗುರುವಾರ ಭೇಟಿ ಮಾಡಿದ್ದ ಪುಟ್ಟ ವರದಿಗಾರರು, ಮಕ್ಕಳ ಗ್ರಾಮ ಸಭೆ ಕುರಿತು ಅವರ ಜೊತೆ ಮಾತನಾಡಿದ್ದರು. `ಮಕ್ಕಳ ಗ್ರಾಮ ಸಭೆ ಕಡ್ಡಾಯ~ ಎಂದು ಡಾ. ಅಮಿತಾ ನೀಡಿರುವ ಹೇಳಿಕೆಯನ್ನು ಲೀಡ್ ಸುದ್ದಿಯಾಗಿ ಬರೆದಿದ್ದಾರೆ.ಅನ್ಸರ್ ಖಾನ್, ಪವಿತ್ರಾ, ಸವಿತಾ, ಆನಂದ ಮತ್ತು ರವಿಶಂಕರ್ ಅವರು ಸೇರಿ ಸಿದ್ಧಪಡಿಸಿರುವ `ಮಕ್ಕಳ ಕೂಗು~ ಪತ್ರಿಕೆಯಲ್ಲಿ ಬಾಲಕರ ಸರ್ಕಾರಿ ವಿದ್ಯಾರ್ಥಿ ನಿಲಯಗಳಲ್ಲಿ ಸೂಕ್ತ ಸೌಲಭ್ಯಗಳು ಇಲ್ಲ ಎಂಬ ಪ್ರಮುಖ ಸುದ್ದಿ ಇದೆ.

ಅಲ್ಲದೆ, ಅಲ್ಲಿ ವಯಸ್ಸಿನಲ್ಲಿ ತುಸು ಹಿರಿಯರಾದ ಮಕ್ಕಳು ಕಿರಿಯರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದೂ ವರದಿ ಬರೆದಿದ್ದಾರೆ!`ವರದಿಯಾಗಬಲ್ಲ ಅಂಶಗಳನ್ನು ಮಕ್ಕಳೇ ಆಯ್ಕೆ ಮಾಡಿದ್ದಾರೆ. ಆದರೆ ಅದಕ್ಕೆ ಒಂದು ರೂಪ ನೀಡುವಲ್ಲಿ ನಾವು ಅವರಿಗೆ ಸಹಾಯ ಮಾಡಿದ್ದೇವೆ~ ಎಂದು ಸಿಆರ್‌ಟಿಯ ಕಾರ್ಯಕಾರಿ ನಿರ್ದೇಶಕ ವಾಸುದೇವ ಶರ್ಮ `ಪ್ರಜಾವಾಣಿ~ಗೆ ತಿಳಿಸಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.