ಭಾನುವಾರ, ಜನವರಿ 26, 2020
28 °C

ಕಣ್ಣೋಟದಿಂದಲೇ ಕಡತ ರವಾನೆ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್‌ (ಪಿಟಿಐ): ಕಣ್ಣೋಟ­ದಿಂದಲೇ   ಕಂಪ್ಯೂಟರ್‌ ಪರದೆಯಿಂದ (ಸ್ಕ್ರೀನ್‌) ನಿಮ್ಮ ಸ್ಮಾರ್ಟ್‌ಫೋನ್‌ ಅಥವಾ ಟ್ಯಾಬ್ಲೆಟ್‌ಗೆ  ಕಡತಗಳನ್ನು (ಫೈಲ್ಸ್‌) ರವಾನಿಸಲು ಅವಕಾಶ ಮಾಡಿಕೊಡುವ ಹೊಸ ತಂತ್ರಜ್ಞಾನ­ವನ್ನು ಬ್ರಿಟನ್‌ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ.‘ಐಡ್ರಾಪ್‌’ ಹೆಸರಿನ ಈ ನೂತನ ತಂತ್ರಜ್ಞಾನ, ಕಂಪ್ಯೂಟರ್‌ ಬಳಕೆ­ದಾರರ ಕಣ್ಣುಗಳ ಚಲನವಲನಗಳನ್ನು  ಗುರುತಿಸಿ ಸಂಬಂಧಿಸಿದ ಕಡತ ಅಥವಾ ಚಿತ್ರವನ್ನು ಸ್ಮಾರ್ಟ್‌ಫೋನ್‌ ಅಥವಾ ಟ್ಯಾಬ್ಲೆಟ್‌ಗೆ ಕಳುಹಿಸುತ್ತದೆ ಎಂದು ‘ನ್ಯೂ ಸೈಂಟಿಸ್ಟ್‌’ ವರದಿ ಮಾಡಿದೆ.ಉದಾಹರಣೆಗೆ ಯಾವುದಾದರೂ ಕಡತ ಅಥವಾ ಛಾಯಾಚಿತ್ರವನ್ನು ಆಯ್ಕೆ ಮಾಡಿ ಗುಂಡಿ ಒತ್ತಿದರೆ ಸಾಕು ಅದು ಕಂಪ್ಯೂಟರ್‌ ಬಳಕೆದಾರರ ಸ್ಮಾರ್ಟ್‌­ಫೋನ್‌ಗೆ ತಲುಪುತ್ತದೆ.‘ನಾವು ಯಾವ ಕಡತ ಅಥವಾ ಚಿತ್ರವನ್ನು ಪಡೆಯಲು ಬಯಸುತ್ತೇವೆ ಸಹಜವಾಗಿ ನಮ್ಮ ಕಣ್ಣುಗಳು ಆ ಕಡೆಗೆ ಹರಿಯುತ್ತವೆ. ಅದಕ್ಕೆ ಪೂರಕವಾಗಿ ನಮ್ಮ ತಂತ್ರಜ್ಞಾನ ಕಾರ್ಯ­ನಿರ್ವಹಿಸುತ್ತದೆ’ ಎಂದು ಇತರ ಸಹೋದ್ಯೋಗಿಗಳೊಂದಿಗೆ ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿರುವ ಬ್ರಿಟನ್‌ನ ಲ್ಯಾಂಕ್‌ಸ್ಟರ್‌ ವಿಶ್ವವಿದ್ಯಾ­ಲಯದ ಜೇಸನ್‌ ಟರ್ನರ್‌ ತಿಳಿಸಿದ್ದಾರೆ.ಬೆರಳಿಗೆ ಸಂದೇಶ

.ವಾಷಿಂಗ್ಟನ್‌ (ಪಿಟಿಐ):
ಮೊಬೈ­ಲ್‌ಗೆ ಕರೆ ಬಂದಿದ್ದು ತಿಳಿ­ಯದೆ ಎಷ್ಟೋ ಕರೆಯನ್ನು ಸ್ವೀಕ­ರಿಸಲು ಸಾಧ್ಯವಾ­ಗುವುದಿಲ್ಲ.  ಇನ್ನು ಮುಂದೆ ಈ ತೊಂದರೆ ಇಲ್ಲ.  ನಿಮ್ಮ ಕೈ ಬೆರಳಿಗೆ ಸಂದೇಶ­  ಕಳುಹಿ­ಸು­­ವಂತಹ ಹೊಸ ತಂತ್ರಜ್ಞಾ­ನವನ್ನು ಅಭಿವೃದ್ಧಿಪಡಿ­ಸಲಾಗಿದೆ.

ಕೈ ಬೆರಳಿ­ನಲ್ಲಿ ಬ್ಲೂಟೂತ್‌ ಉಂ­ಗುರ ಧರಿಸಿ­ದರೆ ನಿಮ್ಮ ಸ್ಮಾರ್ಟ್‌­ಫೋನ್‌ ನೇರ­ವಾಗಿ ನಿಮ್ಮ ಕೈ ಬೆರಳಿಗೇ ಸಂದೇಶ ಕಳಿಸುವಂತಹ ತಂತ್ರಜ್ಞಾನ ಇದರ­ಲ್ಲಿದೆ ಎಂದು ಮೂಲಗಳು ತಿಳಿಸಿವೆ.ಉಂಗುರದ ಬದಲಾಗಿ ಗಡಿ­ಯಾರ, ಟೈಮರ್‌ ಹಾಗೂ ಫೋನ್‌ ಫೈಂಡರ್‌ಗಳನ್ನೂ ಬಳಸಬಹುದು.

ಪ್ರತಿಕ್ರಿಯಿಸಿ (+)