ಶನಿವಾರ, ಜನವರಿ 18, 2020
25 °C

ಕನಕದಾಸರ ತತ್ವ ಇಂದಿಗೂ ಪ್ರಸ್ತುತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ: ಜೀವನದಲ್ಲಿ ಸ್ವತಃ ನೊಂದುಬೆಂದರೂ ಇತರರಿಗಾಗಿ ಅತ್ಯುತ್ಕೃಷ್ಟವಾದ ಕೀರ್ತನೆಗಳನ್ನು ರಚಿಸುವ ಮೂಲಕ ಸಮಾಜ ಸುಧಾರಣೆಗೆ ಕಾರಣರಾದ ದಾಸಶ್ರೇಷ್ಠ ಕನಕದಾಸರ ತತ್ವಾದರ್ಶಗಳನ್ನು ಇಂದಿಗೂ ಪ್ರಸ್ತುತವಾಗಿವೆ  ಎಂದು ಉಪಮೇಯರ್ ಶಶಿಕಲಾ ಅಭಿಪ್ರಾಯಪಟ್ಟರು.ಕನಕ ನೌಕರರ ಸಂಘದ ಜಿಲ್ಲಾ ಹಾಗೂ ತಾಲ್ಲೂಕು ಘಟಕಗಳ ವತಿಯಿಂದ ನಗರದ ಗಾಂಧಿಭವನದಲ್ಲಿ ಭಾನುವಾರ ಏರ್ಪಡಿಸಲಾಗಿದ್ದ ಕನಕ ಜಯಂತಿ ಉತ್ಸವ ಹಾಗೂ ಸಮಾಜದ ಉತ್ತಮ ನೌಕರರ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.ಶರಣಯ್ಯ ಸ್ವಾಮಿ ಒಡೆಯರ್ ಸಾನ್ನಿಧ್ಯವಹಿಸಿದ್ದರು. ವಿಮ್ಸ ಪ್ರಾಚಾರ್ಯ ಶ್ರೀನಿವಾಸಮೂರ್ತಿ, ಡಾ. ತರಸಾಲಪ್ಪ, ಕೃಷ್ಣಕುಮಾರ್, ಕೆ.ಚಂದ್ರಶೇಖರ್, ಆನಂದ್ ಉಕ್ಕಲಿ, ಶಿವಲಿಂಗಯ್ಯ, ಸಿದ್ಧನಗೌಡ ಸಿಂಧುವಾಳ, ಚಿದಾನಂದಪ್ಪ, ಎಂ.ಜಿ. ಮೇಟಿ, ಸೋಮಶೇಖರ್, ಕೆರಕೋಡಪ್ಪ ಉಪಸ್ಥಿತರಿದ್ದರು. ಲಕ್ಷ್ಮಿ ಪವನಕುಮಾರ್ ಪ್ರಾರ್ಥಿಸಿದರು.

 

ಟಿ. ಮರಿಸ್ವಾಮಿ ಸ್ವಾಗತಿಸಿದರು. ಬಿ.ಟಿ. ಕಲ್ಲಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಯರ‌್ರಿಸ್ವಾಮಿ ಕಾರ್ಯಕ್ರಮ ನಿರೂಪಿಸಿದರು. ವಿವಿಧ ಇಲಾಖೆಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸುತ್ತಿರುವ ಸಮಾಜದ ನೌಕರರನ್ನು  ಗೌರವಿಸಲಾಯಿತು.

ಪ್ರತಿಕ್ರಿಯಿಸಿ (+)