ಸೋಮವಾರ, ಜೂನ್ 14, 2021
27 °C

ಕನಕಪುರ: ರಾಮಚಂದ್ರ ಅಧ್ಯಕ್ಷ, ಹೇಮರಾಜು ಉಪಾಧ್ಯಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕನಕಪುರ:  ಪಟ್ಟಣದ ಪುರಸಭೆಯ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಸೋಮ­ವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆ­ಸ್‌ನ 8ನೇ ವಾರ್ಡಿನ ಸದಸ್ಯ ವಕೀಲ ರಾಮ­ಚಂದ್ರ ಅಧ್ಯಕ್ಷರಾಗಿ, 25ನೇ ವಾರ್ಡಿನ ಸದಸ್ಯೆ ಹೇಮರಾಜು ಉಪಾ­ಧ್ಯಕ್ಷೆಯಾಗಿ ಅವಿರೋಧ ಆಯ್ಕೆ­ಯಾದರು.ಅಧ್ಯಕ್ಷ ಸ್ಥಾನವು ಹಿಂದುಳಿದ ‘ಎ’ ವರ್ಗಕ್ಕೆ ಮೀಸಲಾಗಿತ್ತು. ಉಪಾಧ್ಯಕ್ಷ ಸ್ಥಾನವು ಸಾಮಾನ್ಯ ಮಹಿಳೆಗೆ ಮೀಸ­ಲಾಗಿತ್ತು. 27 ಸಂಖ್ಯಾಬಲವನ್ನು ಹೊಂದಿದ ಪುರಸಭೆಯಲ್ಲಿ ಕಾಂಗ್ರೆಸ್ 22 ಸದಸ್ಯರನ್ನು, ಜೆಡಿಎಸ್‌ನ‌4 ಸದ­ಸ್ಯರು, ಒಬ್ಬ ಪಕ್ಷೇತರ ಸದಸ್ಯರು ಇದ್ದಾರೆ.ಎಲ್ಲಾ ಸದಸ್ಯರ ಒಮ್ಮತದ ಅಭ್ಯರ್ಥಿ­ಯಾಗಿ ವಕೀಲ ರಾಮಚಂದ್ರ ಅಧ್ಯಕ್ಷ ಸ್ಥಾನಕ್ಕೆ, ಹೇಮರಾಜು ಉಪಾದ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ಚುನಾ­ವಣಾ ಅಧಿಕಾರಿಯಾಗಿ ಕರ್ತವ್ಯ ನಿರ್ವ­ಹಿಸಿದ ತಹಶೀಲ್ದಾರ್ ಶಿವ­ರುದ್ರಪ್ಪ ಇಬ್ಬರ ಅವಿರೋಧ ಆಯ್ಕೆ  ಘೋಷಣೆ ಮಾಡಿದರು.ಕಾಂಗ್ರೆಸ್‌ ಮುಖಂಡರಾದ ಎಸ್.ರವಿ, ಆರ್.ಕೃಷ್ಣಮೂರ್ತಿ, ಯೋ­ಜ­ನಾ ಪ್ರಾಧಿಕಾರದ ಅಧ್ಯಕ್ಷ ಎಂ.ಡಿ.­ವಿಜಯ­­ದೇವು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್.ದಿಲೀಪ್, ಎಂ.ಪುರು­ಷೋ­ತ್ತಮ್, ತಾಲ್ಲೂಕಿನ ವಿವಿಧ ರಾಜ­ಕೀಯ ಪಕ್ಷಗಳ ಮುಖಂಡರು, ಜಿಲ್ಲಾ ತಾಲ್ಲೂಕು ಪಂಚಾಯಿತಿ ಸದಸ್ಯರು, ವಿವಿಧ ಸಂಘ ಸಂಸ್ಥೆಯ ಮುಖ್ಯಸ್ಥರು, ವಕೀ­ಲರು, ಪುರಸಭೆ ಅಧಿಕಾರಿಗಳು ನೂತನ ಅಧ್ಯಕ್ಷ ಉಪಾಧ್ಯಕ್ಷರನ್ನು ಅಭಿ­ನಂದಿಸಿದರು.ವಿಶ್ವಾಸಕ್ಕೆ ಧಕ್ಕೆ ತರುವುದಿಲ್ಲ:  ನೂತನ ಅಧ್ಯಕ್ಷ­­ರಾಗಿ ಅಧಿಕಾರ ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಮಾತ­ನಾಡಿದ ರಾಮಚಂದ್ರ ಅವರು, ‘ಯಾರ ವಿಶ್ವಾಸಕ್ಕೂ ಧಕ್ಕೆ ಬಾರದಂತೆ ಕೊಟ್ಟಿ­ರುವ ಜವಾಬ್ದಾರಿಯನ್ನು ದುರು­ಪ­-ಯೋಗ ಪಡಿಸಿಕೊಳ್ಳದೆ ವಿಶ್ವಾಸರ್ಹ­ವಾಗಿ ಕೆಲಸ ಮಾಡುತ್ತೇನೆ ಎಂದರು.ಪಟ್ಟಣವು ಅತೀ ವೇಗವಾಗಿ ಬೆಳೆ­ಯು­­ತ್ತಿದ್ದು ಅಷ್ಟೇ ವೇಗದಲ್ಲಿ ಮೂಲ­ಸೌಕರ್ಯ ಸಮಸ್ಯೆಗಳೂ ಎದುರಾ­ಗುತ್ತಿವೆ. ಭವಿಷ್ಯದ ದೃಷ್ಟಿಯಿಂದ ಬೆಳೆ­ಯು­­ತ್ತಿ­ರುವ ನಗರಕ್ಕೆ ಅನುಗುಣವಾಗಿ ಯೋಜನೆ­ಗಳನ್ನು ರೂಪಿಸಿ ಕಾರ್ಯ ನಿರ್ವ­ಹಿಸ­ಲಾಗುವುದು.ಉತ್ತಮ ಆಡಳಿ­ತಕ್ಕಾಗಿ ಸಾರ್ವಜನಿಕರು ತಮ್ಮ ಸಲಹೆ ಸೂಚನೆ ನೀಡಬಹುದಾಗಿದೆ ಎಂದರು.ಅಭಿನಂದನೆ: ಅಧ್ಯಕ್ಷ ಸ್ಥಾನ ಅಲಂಕರಿ­ಸಲು ಅವಕಾಶ ಕಲ್ಪಿಸಿಕೊಟ್ಟ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಮತ್ತು ಸಂಸದ ಡಿ.ಕೆ.ಸುರೇಶ್ ಅವರಿಗೆ ಅವರು ಇದೇ ವೇಳೆ ಕೃತಜ್ಞತೆ ಸಲ್ಲಿಸಿದರು.ಉಪಾಧ್ಯಕ್ಷೆ ಹೇಮರಾಜು ಮಾತ­ನಾಡಿ, ‘ಜನರ ಸಮಸ್ಯೆಗೆ ಸ್ಪಂದಿಸುವ ಮೂಲಕ ಪಟ್ಟಣದಲ್ಲಿನ ಅಗತ್ಯ ಮೂಲ ಸೌಕರ್ಯ ಕಲ್ಪಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.