ಬುಧವಾರ, ಜೂನ್ 16, 2021
22 °C
15ನೇ ಲೋಕಸಭೆ ಅಧಿವೇಶನ

ಕನ್ನಡದಲ್ಲಿ ಮಾತನಾಡಿದವರು ಮೂವರು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: 15ನೇ ಲೋಕಸಭೆಯ ಅಧಿ­ವೇಶನ­ದಲ್ಲಿ ಮೂವರು ಸದಸ್ಯರು ಕನ್ನಡ­ದಲ್ಲಿ ಮಾತನಾಡಿದ್ದಾರೆ.

ಎನ್‌.­ಚೆಲುವರಾಯಸ್ವಾಮಿ, ಪ್ರಹ್ಲಾದ ಜೋಶಿ ಹಾಗೂ ಜಿ.ಎಂ.­ಸಿದ್ದೇಶ್ವರ ಅವರೇ ಈ ಸದಸ್ಯರು.2011ರಲ್ಲಿ ಕೇಂದ್ರ ಬಜೆಟ್‌ ಕುರಿ­ತಂತೆ ಹಾಗೂ ಬೆಲೆ ಏರಿಕೆ, ಹಣ­ದುಬ್ಬರದ ಬಗ್ಗೆ ಚೆಲುವರಾಯಸ್ವಾಮಿ ಕನ್ನಡ­­ದಲ್ಲಿಯೇ ಬೇಡಿಕೆಗಳನ್ನು ಮಂಡಿ­ಸಿ­­ದ್ದರು. ಅಲ್ಲದೆ ಅವರು 2012ರ ಹಣ­ಕಾಸು ಮಸೂದೆ ಕುರಿ­ತಂತೆ ಕೂಡ ಕನ್ನಡದಲ್ಲಿ ಮಾತನಾಡಿದ್ದರು.ಜೋಶಿ ಅವರು ವಿಶ್ವ ಕನ್ನಡ ಸಮ್ಮೇ­ಳನದ ಬಗ್ಗೆ ಅಧಿವೇಶನದಲ್ಲಿ ಕನ್ನಡ­ದಲ್ಲಿ ಮಾತನಾಡಿದ್ದರು. 2011ರ ರೈಲ್ವೆ ಬಜೆಟ್‌ ಮೇಲೆ ಸಿದ್ದೇಶ್ವರ ಅವರು ಕನ್ನಡದಲ್ಲಿ ಮಾತನಾಡಿದ್ದರು.ಬೆಂಗಳೂರಿನ ರಿಜೋರ್ಸ್ ಸಂಶೋ­ಧನಾ ಪ್ರತಿಷ್ಠಾನದ ಅಧ್ಯಯನ ಈ ಅಂಶಗಳನ್ನು ಬಹಿರಂಗಗೊಳಿಸಿದೆ.

ಭಾಷೆ ಬಗ್ಗೆ: ಕನ್ನಡದ ಬಗ್ಗೆ ಹಲವಾರು ಸದಸ್ಯರು ಮಾತನಾಡಿದ್ದಾರೆ. ಕನ್ನಡದ ಉಪ ಭಾಷೆಯಾದ ತುಳು ಬಗ್ಗೆ

ಕೂಡ ಅಧಿ­ವೇಶನದಲ್ಲಿ ಚರ್ಚೆ ನಡೆದಿದೆ. ಬೇರೆ ರಾಜ್ಯದ ಸದಸ್ಯರೂ ಕೂಡ ಕನ್ನಡದ ಬಗ್ಗೆ ಮಾತನಾಡಿದ್ದಾರೆ.ವಿಶ್ವನಾಥ ಕತ್ತಿ, ನಳಿನ್‌ಕುಮಾರ್‌ ಕಟೀಲ್‌, ಶಿವರಾಮ ಗೌಡ ಅವರು ಕನ್ನಡ ಶಾಸ್ತ್ರೀಯ ಭಾಷೆಯ ಅತ್ಯು­ನ್ನತ ಕೇಂದ್ರ ಮೈಸೂರಿನಲ್ಲಿ ಸ್ಥಾಪನೆ­­ಯಾಗ­ಬೇಕು ಎಂದು ಒತ್ತಾಯಿಸಿ­ದ್ದರು. ಪಿ.ಸಿ.­ಗದ್ದಿಗೌಡರ್‌ ಅವರು 11ನೇ ಶತ­ಮಾ­ನದ ಇತಿಹಾಸ ಹಾಗೂ ಕನ್ನಡ ಮತ್ತು ತೆಲುಗು ಕಾವ್ಯಗಳ ಬಗ್ಗೆ ಸಂಶೋ­ಧನೆ­­­ಯಾಗಬೇಕು ಎಂದು ಒತ್ತಾಯಿಸಿದ್ದರು. ಎಷ್ಟೇ ಜನರು ಪರೀಕ್ಷೆಗೆ ಕುಳಿತಿದ್ದರೂ ಕನ್ನಡದಲ್ಲಿಯೇ ಯುಪಿಎಸ್‌ಸಿ ಪರೀಕ್ಷೆ ಬರೆಯಲು ಅವಕಾಶ ನೀಡಬೇಕು ಎಂದು ನಳಿನ್‌ಕುಮಾರ್‌ ಕಟೀಲ್‌ ಆಗ್ರಹಿಸಿದ್ದರು.ಹೊರ ರಾಜ್ಯಗಳ ಸದಸ್ಯರಾದ ಪ್ರಭಾಕರ ಪೊನ್ನಮ್‌, ಕಾವೂರಿ ಸಾಂಬ­ಶಿವರಾವ್‌, ಪಿ.ಲಿಂಗಂ, ತಥಾಗತ ಸತ್ಪತಿ ಅವರು ಅಧಿವೇಶನದಲ್ಲಿ ಕನ್ನಡದ ಬಗ್ಗೆ ಮಾತನಾಡಿದ್ದಾರೆ.ತುಳು ಭಾಷೆಗೂ ಶಾಸ್ತ್ರೀಯ ಭಾಷೆಯ ಸ್ಥಾನ ನೀಡಬೇಕು ಎಂದು ಅನಂತ­ಕುಮಾರ್‌ ಅವರು ಒತ್ತಾ­ಯಿಸಿ­ದ್ದರು. ಆದರೆ ಅಂತಹ ಪ್ರಸ್ತಾವ ಸರ್ಕಾರ ಮುಂದೆ ಇಲ್ಲ ಎಂಬ ಉತ್ತರ ಅವರಿಗೆ ದೊರಕಿತ್ತು.ಸಂವಿಧಾನದ 8ನೇ ಪರಿಚ್ಛೇದದಲ್ಲಿ ತುಳು ಭಾಷೆಯನ್ನು ಸೇರಿಸಬೇಕುಎಂದು ನಳಿನ್‌ಕುಮಾರ್‌ ಒತ್ತಾಯಿಸಿದ್ದರು. ಇದೇ ವಿಷಯದ ಬಗ್ಗೆ ಕಾಸರಗೋಡು ಸದಸ್ಯ ಪಿ.ಕರುಣಾಕರನ್‌ ಅವರೂ ಮಾತನಾಡಿದ್ದರು.ಒಟ್ಟಾರೆಯಾಗಿ ಕಳೆದ ಐದು ವರ್ಷದ ಅಧಿವೇಶನವನ್ನು ಪರಿಶೀಲಿಸಿ­ದಾಗ ಭಾಷಾ ವಿಷಯಗಳ ಬಗ್ಗೆ ಚರ್ಚೆ ನಡೆ­ಸು­ವುದು ಲೋಕಸಭಾ ಸದಸ್ಯರಿಗೆ ಮುಖ್ಯ­ವಾಗಿರಲಿಲ್ಲ ಎಂದು ವರದಿ ಹೇಳಿದೆ.ಬಂಗಾಲಿ, ಒಡಿಯಾ, ಮರಾಠಿ ಭಾಷೆಗಳ ಬಗ್ಗೆ ಒಮ್ಮೆಯೂ ಚರ್ಚೆ­ಯಾಗಿಲ್ಲ. ಕನ್ನಡ, ಛತ್ತೀಸಗಡಿ, ಇಂಗ್ಲಿಷ್‌, ಹಿಂದಿ, ತುಳು, ತೆಲುಗು, ತಮಿಳು, ಗುಜರಾತಿ, ಮಲೆಯಾಳಿ, ಸಂಸ್ಕೃತ, ಸಂತಾಲಿ, ಉರ್ದು ಭಾಷೆಗಳ ಬಗ್ಗೆ ಚರ್ಚೆಗಳು ನಡೆದಿವೆ.ಆದರೆ ಸಂಗೀತ, ಸಂಸ್ಕೃತಿ, ಸಾಹಿತ್ಯ ಮತ್ತು ಅವುಗಳ ಬೆಳವಣಿಗೆಗಳ ಬಗ್ಗೆ ಒಮ್ಮೆಯೂ ಚರ್ಚೆಯಾಗಿಲ್ಲ. ಭಾಷೆಯ ಬಗ್ಗೆ ಪ್ರಸ್ತಾಪವಾದರೂ ಅವು­ಗಳ ನಿಜವಾದ ಸಮಸ್ಯೆಗಳ ಬಗ್ಗೆ ಪರಿಣಾಮಕಾರಿ ಚರ್ಚೆಯಾಗಿಲ್ಲ ಎಂದು ವರದಿ ಹೇಳಿದೆ.

ಕನ್ನಡದ ಬಗ್ಗೆ ಹಲವಾರು ಸದಸ್ಯರು ಅಧಿವೇಶನದಲ್ಲಿ ಪ್ರಶ್ನೆಯನ್ನು ಕೇಳಿ­ದ್ದಾರೆ. ಅವುಗಳಲ್ಲಿ ಬಹುತೇಕ ಪ್ರಶ್ನೆಗಳು ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ನೀಡುವುದರ ಕುರಿ­ತಾ­ಗಿಯೇ ಇದ್ದವು.ಕನ್ನಡದ ಬಗ್ಗೆ ಬಿಜೆಪಿ ಸದಸ್ಯರು ಮಾತ್ರ ಪ್ರಶ್ನೆಯನ್ನು ಕೇಳಿದ್ದರು. ವಿಶ್ವನಾಥ ಕತ್ತಿ ಅವರು 4,

ಶಿವರಾಮ ಗೌಡ 3, ಪಿ.ಸಿ.ಗದ್ದಿಗೌಡರ 2, ಡಿ.ಬಿ.ಚಂದ್ರೇಗೌಡ, ನಳಿನ್‌­ಕುಮಾರ್‌ ಕಟೀಲ್‌, ಜಿ.ಎಂ.ಸಿದ್ದೇಶ್ವರ, ಪ್ರಹ್ಲಾದ ಜೋಶಿ ತಲಾ ಒಂದು ಪ್ರಶ್ನೆಯನ್ನು ಕೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.