ಕನ್ನಡದ ಕಂಬಾರ

7

ಕನ್ನಡದ ಕಂಬಾರ

Published:
Updated:

ಕನ್ನಡದ ಕಂಬಾರ, ಕವಿತೆಗೆ ಮಂದಾರ

ಕಟ್ಟಿದನು ಕನ್ನಡಕೆ ಸೊಗಸಾದ ಹಾಡ

`ಕನ್ನಡವೆ ದೇವರು~ ಎಂಬುದನು ಮನಗಂಡು

ಹಾಡಿದನು- `ಕನ್ನಡ ತಾಯಿಯ ಸುಪ್ರಭಾತದ ಹಾಡು~.

`ಜೋಕುಮಾರಸ್ವಾಮಿ~ `ಸಿರಿಸಂಪಿಗೆ~ ನಾಟಕ

`ಸಾವಿರ ನೆರಳು~ ಸಾವಿರದ ಕವನ ಸಂಕಲನ

ಪ್ರಶಸ್ತಿ-ಪುರಸ್ಕಾರ ಈ ಮೂರು ಕೃತಿಗಳಿಗೆ

ಅದು, ಕನ್ನಡ ಭಾಷೆಗೆ ಸಂದ ಅಮೃತ ಘಳಿಗೆ.

ಮಕ್ಕಳು ಮೈದುಂಬಿ ಕುಣಿ-ಕುಣಿದರು

`ಅಲಿಬಾಬಾ ನಲವತ್ತು ಕಳ್ಳರು~ ಕಿಟ್ಟಿ ಕಥೆಯಲ್ಲಿ

ಹೇಳತೇನ ಕೇಳ, ಬೆಳ್ಳಿಮೀನು, ತಕರಾರಿನವರು

ಅಲ್ಲಿ, ಕವಿತೆಗಳನ್ನು ಹಾಡಿದರು, ಎದೆತುಂಬಿ ಸೂರು.

ಕನ್ನಡವೆಂದರೆ ಕಂಬಾರ, ಅಂತೆಯೇ ಬಲುಸಿಂಗಾರ

ಕಬ್ಬಿಣದ ಕಾಸಿ ಹದ ಮಾಡಿದಂತೆ ಹತಿಯಾರ

ದುಂಡುಮೊಗದ, ತುಂಬು ಮೀಸೆಯ ಸರದಾರ

ಅರಳು ಹುರಿದಂತ ಮಾತು ಕನ್ನಡಕ್ಕದುವೆ ಸೇತು.

ಅರಸಿ ಬಂತು ಅವರಿಗೆ ಎಂಟನೆಯ ಜ್ಞಾನಪೀಠ

ಕನ್ನಡದ ಜನಕ್ಕಂತೂ ಹಬ್ಬದ ಸವಿ, ಸವಿಯಾಟ

ಮನತುಂಬಿ ಬರೆದು, ಎದೆ ತುಂಬಿ ಹಾಡಲಿ

ಕನ್ನಡದ ಸಿರಿನುಡಿ ಯಾವೊತ್ತು ಮೊಳಗಲಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry