ಭಾನುವಾರ, ಮೇ 22, 2022
21 °C

ಕಬ್ಬಿನ ಗದ್ದೆಗೆ ಬೆಂಕಿ: ಅಪಾರ ಹಾನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 ಸರಗೂರು: ಸಮೀಪದ ಹಂಚೀಪುರ ಗ್ರಾಮದಲ್ಲಿ ಗುರುವಾರ ಕಬ್ಬಿನ ಗದ್ದೆಗೆ ಆಕಸ್ಮಿಕವಾಗಿ ಬೆಂಕಿಬಿದ್ದು ಸುಮಾರು 8 ಎಕರೆ ಕಬ್ಬು ಸುಟ್ಟು ಹೋಗಿದೆ. ಹಂಚೀಪುರ ಗ್ರಾಮ ಪಂಚಾಯಿತಿ ಸೇರಿದ ಸರ್ವೆ ನಂಬರ್ 5/2 ಮತ್ತು  10 ಸರ್ವೆ ನಂಬರ್‌ಗೆ ಸೇರಿದ 8 ಎಕರೆ  ಕಬ್ಬಿನ   ಗದ್ದೆಯಲ್ಲಿ  ಮಧ್ಯಾಹ್ನ 3.30ರ ಸಮಯದಲ್ಲಿ ಬೆಂಕಿ ಬಿದ್ದಿದ್ದು, ಅಂದಾಜು 390ಟನ್ ಕಬ್ಬು ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.ಹಂಚೀಪುರ  ಗ್ರಾಮದ  ಶಿವ ನಾಗಮ್ಮ ಎರಡೂವರೆ ಎಕರೆ, ಮಲ್ಲಿಕಾರ್ಜುನ ಎರಡೂವರೆ ಎಕರೆ, ಎಚ್.ಎನ್.ಮಹದೇವಪ್ಪ 2 ಎಕರೆ, ಮಂಜುನಾಥ 1 ಎಕರೆಯಲ್ಲಿ ಬೆಳೆದಿದ್ದ ಕಬ್ಬು ಬೆಂಕಿಗೆ ಆಹುತಿಯಾಗಿದೆ. ಒಂದು ಕಡೆ ಬಿದ್ದ ಬೆಂಕಿ ಗಾಳಿಯ ಹೊಡೆತಕ್ಕೆ ಅಕ್ಕ ಪಕ್ಕದ ಜಮೀನುಗಳಿಗೆ ಆವರಿಸಿಕೊಂಡಿತು. ಇದರಿಂದಾಗಿ ಅಂದಾಜು 8ಲಕ್ಷರೂಪಾಯಿಯಷ್ಟು ನಷ್ಟವಾಗಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.‘ಕಬ್ಬು ಬೆಳೆಯಲು ನಾವು ಬ್ಯಾಂಕಿನಲ್ಲಿ ಸಾಲ ಮಾಡಿದ್ದು, ಬ್ಯಾಂಕಿನ ಸಾಲ ಮರುಪಾವತಿ   ಹೇಗೆ ಮಾಡುವುದು ಎಂಬ ಚಿಂತೆ ಕಾಡುತ್ತಿದೆ. ಬೆಳೆಯೂ ನಮ್ಮ ಕೈಗೆ ಬರುವ ಹಂತದಲ್ಲಿದ್ದಾಗ ಈ ಘಟನೆ ಸಂಭವಿಸಿದ್ದು, ಅಪಾರ ನಷ್ಟವಾಗಿದೆ ಎಂದು ತಮ್ಮ ಅಳಲು ತೋಡಿಕೊಂಡರು.ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಬಣ್ಣಾರಿ ಅಮ್ಮನ್ ಷುಗರ್ ಕಂಪನಿಯವರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದರು. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು  ನಂದಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.