ಸೋಮವಾರ, ಜನವರಿ 27, 2020
26 °C
ಟನ್‌ಗೆ ₨ 2,500 ನೀಡಲು ಸಕ್ಕರೆ ಕಾರ್ಖಾನೆ ಮಾಲೀಕರ ನಕಾರ

ಕಬ್ಬು ದರ: ಮೂಡದ ಒಮ್ಮತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಟನ್‌ ಕಬ್ಬಿಗೆ ₨ 2,500  ನೀಡಲು ಸಾಧ್ಯವೇ ಇಲ್ಲ ಎಂದು ದಕ್ಷಿಣ ಭಾರತದ ಸಕ್ಕರೆ ಕಾರ್ಖಾನೆಗಳ ಸಂಘದ (ಸಿಸ್ಮಾ) ರಾಜ್ಯ ಘಟಕ ಪಟ್ಟು ಹಿಡಿದಿದೆ. ಈ ಸಂಬಂಧ ಮುಖ್ಯಮಂತ್ರಿ ಸಿದ್ದ­ರಾಮಯ್ಯ ಅವರನ್ನು ಭೇಟಿ ಮಾಡಿ ವಿವರಿಸಲು ಸೋಮವಾರ ಬೆಂಗ­ಳೂರಿ­ನಲ್ಲಿ ನಡೆದ ಸಂಘದ ಸಭೆಯಲ್ಲಿ ನಿರ್ಧರಿಸಲಾಗಿದೆ.ಆದರೆ ಕಬ್ಬಿಗೆ ಟನ್‌ಗೆ ಸರ್ಕಾರ ₨ 2650 ದರ ನಿಗದಿ ಮಾಡಿದ್ದು, ಕಾರ್ಖಾ­­ನೆ­ಗಳು ತಮ್ಮ ಪಾಲಿನ ₨2,5­00 ದರ ನೀಡಲೇಬೇಕು ಎಂದು ಸಿದ್ದ­­ರಾಮಯ್ಯ ತಲಕಾಡಿನಲ್ಲಿ ಸ್ಪಷ್ಟಪಡಿ­ಸಿದ್ದಾರೆ. ಇತ್ತ, ಕಬ್ಬು ಬೆಳೆಗಾರರು ಬೆಳ­ಗಾವಿ ಸುವರ್ಣಸೌಧದ ಮುಂದೆ ನಡೆಸು­ತ್ತಿದ್ದ ಧರಣಿಯನ್ನು ಮುಖ್ಯಮಂತ್ರಿ ಜತೆ ಚರ್ಚೆ ನಂತರ ವಾಪಸ್‌ ಪಡೆದಿದ್ದಾರೆ.ಬಂದ್‌ಗೂ ಹಿಂಜರಿಯೊಲ್ಲ: ತಮ್ಮ ಮನ­ವಿಗೆ ಮುಖ್ಯಮಂತ್ರಿಯವರು ಪೂರಕ­ವಾಗಿ ಸ್ಪಂದಿಸದೆ ಇದ್ದಲ್ಲಿ, ನ್ಯಾಯಾಲ­ಯದ ಮೆಟ್ಟಿಲೇರುವ ಬಗ್ಗೆ ಸಕ್ಕರೆ ಕಾರ್ಖಾನೆಗಳ ಸಂಘದ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಪ್ರಸಂಗ ಬಂದರೆ ಕಬ್ಬು ಅರೆಯುವ ಚಟುವಟಿಕೆಯನ್ನು ತಕ್ಷಣದಿಂದ ನಿಲ್ಲಿ­ಸುವ ಬಗ್ಗೆಯೂ ಸಭೆಯಲ್ಲಿ ಚರ್ಚೆ ಯಾ­ಗಿದೆ. ಆದರೆ, ಅಂತಿಮ ತೀರ್ಮಾನ ತೆಗೆದುಕೊಳ್ಳಲಿಲ್ಲ ಎನ್ನಲಾಗಿದೆ.ಸರ್ಕಾರಕ್ಕೆ ರೈತರ ಬಗ್ಗೆ ಅನುಕಂಪ ಇದ್ದಲ್ಲಿ, ಈಗಾಗಲೇ ಘೋಷಿಸಿರುವ ₨ 150 ಬೆಂಬಲ ಬೆಲೆ ಜೊತೆಗೆ ಹೆಚ್ಚುವ­ರಿಯಾಗಿ ₨ 500 ನೀಡಲಿ ಎಂದು ಕಾರ್ಖಾ­ನೆಗಳ ಆಡಳಿತ ಮಂಡಳಿಗಳು ಒತ್ತಾಯಿಸುತ್ತಿವೆ. ರಾಜ್ಯದಲ್ಲಿ ಸಕ್ಕರೆ ಉತ್ಪಾ­ದನೆ ಒಂದು ಲಕ್ಷ ಟನ್‌ನಷ್ಟು ಹೆಚ್ಚಾ­ಗಿದೆ. ಸಕ್ಕರೆ ಬೆಲೆ ಕುಸಿದಿದೆ. ಸರ್ಕಾರ ನಿಗದಿ ಮಾಡಿರುವ ದರದಿಂದ ಪ್ರತಿ ಟನ್‌ಗೆ ₨ 400ರಿಂದ ₨ 600ರಷ್ಟು ನಷ್ಟವಾಗುತ್ತದೆ ಎಂಬುದು ಅವುಗಳ ಆತಂಕ.

ಪ್ರತಿಕ್ರಿಯಿಸಿ (+)