ಕಾರವಾರ: ಕಳೆದ ಕೆಲವು ದಿನಗಳಿಂದ ಬಿಡುವು ನೀಡಿದ ಗಾಳಿ-ಮಳೆ ಸೋಮವಾರ ಸಂಜೆ ಮತ್ತೆ ಸುರಿದು ತಂಪೆರೆಯಿತು.

ಕರಾವಳಿ ತಾಲ್ಲೂಕುಗಳಲ್ಲಿ ಮಾತ್ರ ಕೆಲವೆಡೆ ಸಂಜೆಯ ಹೊತ್ತಿಗೆ ಮಳೆ ಸುರಿದರೆ ಘಟ್ಟ ಪ್ರದೇಶ ಮತ್ತು ಅರೆಬಯಲುಸೀಮೆ ಪ್ರದೇಶಗಳಲ್ಲಿ ಬಿಸಿಲಿನ ವಾತಾವರಣ ಮುಂದುವರಿದಿತ್ತು.

ಸಂಜೆ ಸುಮಾರು ಒಂದು ತಾಸು ಸುರಿದ ಮಳೆಯಿಂದಾಗಿ ಜನರು ತೊಂದರೆ ಅನುಭವಿಸಿದರು. ಮಳೆಯೊಂದಿಗೆ ಪ್ರತಿಗಂಟೆ 45-50 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸುತ್ತಿತ್ತು.ಶಾಲೆ ಬಿಡುವ ಸಮಯಕ್ಕೆ ಸರಿಯಾಗಿ ಮಳೆ ಸುರಿದಿದ್ದರಿಂದ ರೈನ್ಕೋಟ್, ಕೊಡೆ ಬಿಟ್ಟುಬಂದ ಮಕ್ಕಳು ನೆನೆಯುತ್ತಲೇ ಮನೆಯತ್ತ ಹೆಜ್ಜೆ ಹಾಕಿದರು.

ಘಟ್ಟ ಮತ್ತು ಅರೆಬಯಲುಸೀಮೆ ಪ್ರದೇಶಗಳಲ್ಲಿ ಮಳೆ ಮಾಯವಾಗಿದ್ದು ಬೇಸಿಗೆ ವಾತಾವರಣ ಕಂಡುಬಂದಿದೆ. ಮಳೆ ಕೈಕೊಟ್ಟಿದ್ದರಿಂದ ಕೃಷಿ ಕಾರ್ಯಕ್ಕೂ ಹಿನ್ನಡೆ ಉಂಟಾಗಿದ್ದು ರೈತರು ಚಿಂತಿತರಾಗಿದ್ದಾರೆ.

`ಜೂನ್ 13ರ ಸುಮಾರಿಗೆ ಮುಂಗಾರು ಜಿಲ್ಲೆಯ ಕರಾವಳಿ ಪ್ರವೇಶ ಮಾಡುವ ಸಾಧ್ಯತೆ ಇದೆ~ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.