ದಾವಣಗೆರೆ: ಉದ್ದೇಶಿತ `ಉನ್ನತ ಶಿಕ್ಷಣ ಮತ್ತು ಸಂಶೋಧನಾ ಮಸೂದೆ-2011~ ಮಂಡಿಸಲು ಮುಂದಾಗಿರುವ ಕೇಂದ್ರ ಸರ್ಕಾರದ ವಿರುದ್ಧ ವಕೀಲರು ಬುಧವಾರ ನ್ಯಾಯಾಲಯಗಳ ಕಲಾಪದಿಂದ ದೂರ ಉಳಿದು ಪ್ರತಿಭಟನೆ ನಡೆಸಿದರು. ಇದರಿಂದ ಕಕ್ಷಿದಾರರು ಪರದಾಡಬೇಕಾಯಿತು.

ನಗರದ ನ್ಯಾಯಾಲಯಗಳ ಸಂಕೀರ್ಣದ ಸಭಾಂಗಣದಲ್ಲಿ ಸಭೆ ಸೇರಿದ ವಕೀಲರು, ಇಲ್ಲಿವರೆಗೆ ಸ್ವಾಯತ್ತತೆ ಹೊಂದಿರುವ ವಕೀಲರ ಪರಿಷತ್ತಿನ ಮೇಲೆ ಕೇಂದ್ರ ಸರ್ಕಾರ ಹಿಡಿತ ಸಾಧಿಸುವ ಹುನ್ನಾರ ನಡೆಸಿದೆ. ಯಾವುದೇ ಕಾರಣಕ್ಕೂ ಇಂತಹ ಕ್ರಮಗಳಿಗೆ ಅವಕಾಶ ನೀಡಬಾರದು. ಕಲಾಪದಿಂದ ದೂರ ಉಳಿಯುವ ಮೂಲಕ ಪ್ರತಿರೋಧ ವ್ಯಕ್ತಪಡಿಸಬೇಕು ಎಂದು ನಿರ್ಣಯಿಸಿದರು.

ಭಾರತೀಯ ವಕೀಲರ ಪರಿಷತ್ತಿನ ನಿರ್ದೇಶನದಂತೆ ನ್ಯಾಯಾಲಯಗಳ ಕಲಾಪ ಬಹಿಷ್ಕರಿಸಿದ ವಕೀಲರು, ನ್ಯಾಯಾಲಯಗಳ ಸಂಕೀರ್ಣದಿಂದ ಮೆರವಣಿಗೆಯಲ್ಲಿ ತೆರಳಿ ಪಿ.ಬಿ. ರಸ್ತೆಯಲ್ಲಿ (ರಾಜಭವನ್ ಹೋಟೆಲ್ ಎದುರು) ಕೇಂದ್ರ ಮಾನವ ಸಂಪನ್ಮೂಲ ಸಚಿವ ಕಪಿಲ್ ಸಿಬಲ್ ಪ್ರತಿಕೃತಿ ಹಾಗೂ ಮಸೂದೆಯ ನಕಲು ಪ್ರತಿಯನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.

ಈ ಮಸೂದೆ ಜಾರಿಗೆ ಬಂದಲ್ಲಿ `ವಕೀಲರ ಕಾಯ್ದೆ 1961~ರಲ್ಲಿ ಇರುವ ಎಲ್ಲಾ ಅಂಶಗಳು ವಜಾಗೊಳ್ಳುತ್ತವೆ. `ವಕೀಲರ ಕಾಯ್ದೆ 1961~ ಪ್ರಕಾರ, ಭಾರತೀಯ ವಕೀಲರ ಪರಿಷತ್ತು ಮತ್ತು ರಾಜ್ಯ ವಕೀಲರ ಪರಿಷತ್ತುಗಳು ಕ್ಷಮತೆಯಿಂದ ಕಾರ್ಯ ನಿರ್ವಹಿಸುತ್ತಿವೆ. ವಕೀಲರ ಪರಿಷತ್ತಿನಲ್ಲಿ ಕಾನೂನು ಅಭ್ಯಾಸ ಮಾಡಿರುವ ವಕೀಲರು ಚುನಾಯಿತ ಪ್ರತಿನಿಧಿಗಳಾಗಿ ಕಾರ್ಯ ನಿರ್ವಹಿಸುತ್ತಾರೆ. ವಕೀಲರು ಭಾರತೀಯ ನಾಗರಿಕರಾಗಿರುತ್ತಾರೆ.

ಸಾರ್ವಜನಿಕರ ಸೇವೆ ಸಲ್ಲಿಸುತ್ತಾರೆ. ಆದರೆ, ಉದ್ದೇಶಿತ ಮಸೂದೆ ಜಾರಿಯಾದರೆ ಭಾರತೀಯ ವಕೀಲರ ಪರಿಷತ್ತಿನಿಂದ ಹೊರಗಿಡುವ ಯತ್ನ ಮಾಡಲಾಗಿದೆ. ವಿದೇಶಿ ವಕೀಲರು, ಸಂಸ್ಥೆಗಳನ್ನು ಭಾರತಕ್ಕೆ ಕರೆತರುವ ಯತ್ನ ಮಾಡಲಾಗಿದೆ. ಇದು ಖಂಡನೀಯ ಎಂದರು.

ಭಾರತೀಯ ವಕೀಲರ ಪರಿಷತ್ತು ಮತ್ತು ರಾಜ್ಯ ವಕೀಲರ ಪರಿಷತ್ತುಗಳಲ್ಲಿ ಕೇಂದ್ರ ಸರ್ಕಾರ ತಾನು ಬಯಸುವ ಕಾನೂನನ್ನೇ ಅಭ್ಯಾಸ ಮಾಡಿರದ ವ್ಯಕ್ತಿಗಳನ್ನು ನಾಮನಿರ್ದೇಶನ ಮಾಡುವ ಮೂಲಕ ವಕೀಲರ ಪರಿಷತ್ತುಗಳನ್ನು `ಬಲಹೀನ~ಗೊಳಿಸುವ ಹುನ್ನಾರ ಅಡಿಗಿದೆ ಎಂದು ಆರೋಪಿಸಿದರು.

ಮಸೂದೆ ವಿರೋಧಿಸಿ, ಇದೇ ಪ್ರಥಮ ಬಾರಿಗೆ ಎರಡು ದಿನಗಳ ಕಾಲ ನ್ಯಾಯಾಲಯಗಳಿಂದ ದೂರ ಉಳಿಯಲಾಗುತ್ತಿದೆ. ಇದರಿಂದ ಹೆಚ್ಚಿನ ಪರಿಣಾಮ ಆಗಲಿದೆ. ಇದಕ್ಕೂ ಸರ್ಕಾರ ಸ್ಪಂದಿಸದೆ ಇದ್ದಲ್ಲಿ, ಮುಂಗಾರು ಅಧಿವೇಶನದ ದಿನದಂದು ನವದೆಹಲಿಯಲ್ಲಿ ಎಲ್ಲ ರಾಜ್ಯಗಳ ವಕೀಲರು ಸಮಾವೇಶಗೊಂಡು ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದು ಹಿರಿಯ ವಕೀಲ ಎಂ.ಎಂ. ಖಿಲೇದಾರ್ ಸಭೆಯಲ್ಲಿ ತಿಳಿಸಿದರು. ಮಸೂದೆಯಲ್ಲಿ, `ಕಾನೂನು ಕಾಲೇಜುಗಳು~ ಹಾಗೂ `ಕಾನೂನು ಕ್ಷೇತ್ರ~ ಎಂಬುದನ್ನು ತೆಗೆದುಹಾಕಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ವಿ. ತಿಮ್ಮೇಶಿ, ಪ್ರಧಾನ ಕಾರ್ಯದರ್ಶಿ ಬಿ.ಎಂ. ಬಸವನಗೌಡ, ಉಪಾಧ್ಯಕ್ಷೆ ಐ. ವಸಂತಕುಮಾರಿ, ಹಿರಿಯ ವಕೀಲ, ಮಾಜಿ ಶಾಸಕ ಬಿ.ಜಿ. ಕೊಟ್ರಪ್ಪ, ಎಲ್.ಎಚ್. ಅರುಣ್ಕುಮಾರ್, ಶ್ಯಾಮ್, ಅಶೋಕ್, ಎಂ.ಐ. ಖಾದರ್ ಬಾಷಾ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ವಕೀಲರು ಕಲಾಪದಿಂದ ದೂರ ಉಳಿದಿದ್ದರಿಂದ, ಬುಧವಾರ 800ಕ್ಕೂ ಹೆಚ್ಚು ಪ್ರಕರಣ ವಿಚಾರಣೆ ಮತ್ತು ವಿಲೇವಾರಿಗೆ ತೊಂದರೆಯಾಯಿತು ಎಂದು ಮೂಲಗಳು ತಿಳಿಸಿವೆ. ದೂರದ ಊರಿನಿಂದ ವಿವಿಧ ವ್ಯಾಜ್ಯಗಳ ವಿಚಾರಣೆಗೆ ಸಂಬಂಧಿಸಿದಂತೆ ಆಗಮಿಸಿದ್ದ ಕಕ್ಷಿದಾರರು ಬರಿಗೈಲಿ ವಾಪಸಾಗಬೇಕಾಯಿತು.
ಮಸೂದೆ ವಿರೋಧಿಸಿ, ವಕೀಲರು ಜುಲೈ 12ರಂದು ಸಹ ನ್ಯಾಯಾಲಯಗಳ ಕಲಾಪದಿಂದ ದೂರ ಉಳಿಯಲಿದ್ದಾರೆ.

ಹರಪನಹಳ್ಳಿ ವರದಿ
ಕೇಂದ್ರ ಸರ್ಕಾರ ಜಾರಿಗೊಳಿಸಲು ಹೊರಟಿರುವ `ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಮಸೂದೆ-2011~ರ ಮಸೂದೆಯನ್ನು ವಿರೋಧಿಸಿ ವಕೀಲರ ಸಂಘದ ಪದಾಧಿಕಾರಿಗಳು ಬುಧವಾರ ನ್ಯಾಯಾಲಯದ ಕಲಾಪ ಬಹಿಷ್ಕರಿಸಿ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

ಕಲಾಪ ಆರಂಭವಾಗುತ್ತಿದ್ದಂತಿಯೇ ನ್ಯಾಯಾಲಯದ ಸಮುಚ್ಛಯದಲ್ಲಿರುವ ವಕೀಲರ ಸಂಘದ ಕಚೇರಿಯಲ್ಲಿ ಸಂಘದ ಅಧ್ಯಕ್ಷ ಮಂಜುನಾಥ ಕಣವಿಹಳ್ಳಿ ಅಧ್ಯಕ್ಷತೆಯಲ್ಲಿ ತುರ್ತುಸಭೆ ನಡೆಸಿದ ಪದಾಧಿಕಾರಿಗಳು, ಉದ್ದೇಶಿತ ಮಸೂದೆಯ ದುಷ್ಪರಿಣಾಮಗಳನ್ನು ಗಂಭೀರವಾಗಿ ಚರ್ಚಿಸಿದರು. ಬಳಿಕ ನ್ಯಾಯಾಲಯ ಕಲಾಪಗಳನ್ನು ಬಹಿಷ್ಕರಿಸುವ ಮೂಲಕ ಪ್ರತಿಭಟನೆ ನಡೆಸಿದರು.

ಕೋರ್ಟ್ ಆವರಣದಿಂದ ಮಿನಿ ವಿಧಾನಸೌಧಕ್ಕೆ ತೆರಳಿ ಬಹಿರಂಗ ಸಭೆ ನಡೆಸಿದರು. ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಂಘದ ಅಧ್ಯಕ್ಷ ಮಂಜುನಾಥ ಕಣವಿಹಳ್ಳಿ ಮಾತನಾಡಿ, ದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವಕೀಲರ ಕಾರ್ಯ ನಿರ್ವಹಣೆಯಲ್ಲಿನ ಸ್ವಾತಂತ್ರ್ಯ ಹಾಗೂ ಸ್ವಾಯತ್ತತೆಯನ್ನು ಕಸಿಯುವ ಹುನ್ನಾರ ಮಸೂದೆಯಲ್ಲಿ ಅಡಕವಾಗಿದೆ.

ಜತೆಗೆ, ಸ್ವತಂತ್ರವಾಗಿ ಕಾರ್ಯ ನಿರ್ವಹಿಸುತ್ತಿರುವ ವಕೀಲರ ರಾಜ್ಯ ಪರಿಷತ್ ಮತ್ತು ರಾಷ್ಟ್ರ ಪರಿಷತ್ಗಳ ಚಟುವಟಿಕೆಗಳಲ್ಲಿಯೂ ಹಸ್ತಕ್ಷೇಪ ಮಾಡುವ ಮೂಲಕ ಪರಿಷತ್ ಚಟುವಟಿಕೆಗಳನ್ನು ಸಂಕುಚಿತಗೊಳಿಸುವ ಕುತಂತ್ರ ಮಸೂದೆ ಒಳಗೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂಘದ ಪದಾಧಿಕಾರಿಗಳಾದ ವಿ.ಜಿ. ಪ್ರಕಾಶಗೌಡ, ಕೆ. ಜಗದಪ್ಪ, ಎಸ್.ಎಂ. ಚನ್ನಬಸಯ್ಯ, ಟಿ. ವೆಂಕಟೇಶ್, ಬಂಡ್ರಿ ಗೋಣಿಬಸಪ್ಪ, ಆನಂದ್, ಮಂಜುನಾಥ ಬಾಗಳಿ, ಕೆ. ಪ್ರಕಾಶ್, ಸೀಮಾ, ಡಿ. ಹನುಮಂತಪ್ಪ, ಗುಡಿ ಬಿಂದುಮಾಧವ, ಮಂಜನಾಯ್ಕ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.