ಶುಕ್ರವಾರ, ಜೂಲೈ 10, 2020
28 °C

ಕಲಾಭಿರುಚಿ ಬೆಳೆಸಿಕೊಳ್ಳಲು ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗದಗ: ಪ್ರತಿಯೊಬ್ಬರೂ ಕಲಾಭಿರುಚಿಯನ್ನು ಬೆಳೆಸಿಕೊಂಡು ಕಲೆ ಹಾಗೂ ಕಲಾವಿದರನ್ನು ಪ್ರೋತ್ಸಾಹಿಸುವ ಅಗತ್ಯವಿದೆ ಎಂದು ಮಾಜಿ ಶಾಸಕ ಜ್ಞಾನದೇವ ದೊಡ್ಡಮೇಟಿ ಅಭಿಪ್ರಾಯಪಟ್ಟರು. ನಗರದ ಲಯ ಕಲಾ ಮನೆ ಕಲಾವಿದರ ಸಾಂಸ್ಕೃತಿಕ ಸಂಸ್ಥೆಯಿಂದ ಶುಕ್ರವಾರ ನಡೆದ ಸಮಾರಂಭದಲ್ಲಿ ‘ವರ್ಣಬಿಂದು’ ಕಲಾ ಪ್ರಶಸ್ತಿಯನ್ನು ಕಲಾವಿದ ಎನ್.ಎ. ಹರ್ಲಾಪೂರ ಅವರಿಗೆ ಪ್ರದಾನ ಮಾಡಿ ಅವರು ಮಾತನಾಡಿದರು.‘ಕಲಾವಿದರು ಸ್ಫೂರ್ತಿ, ತಪ್ಪಸ್ಸಿನಿಂದ ಕಲೆಯನ್ನು ರೂಪಿಸಿಕೊಳ್ಳಬೇಕು. ಉತ್ತಮ ಕಲಾಭಿರುಚಿ ಬೆಳೆಸಿಕೊಳ್ಳಬೇಕು. ಮೊದಲು ಕುಂಚ ಹಿಡಿದು ಚಿತ್ರ ಬಿಡಿಸುವ ಕಲಾವಿದರಿಗೆ ಭಾರಿ ಬೇಡಿಕೆ ಇತ್ತು. ಆದರೆ ಈಗ ಫ್ಲೆಕ್ಸ್ ಮತ್ತು ಕಂಪ್ಯೂಟರ್‌ನಿಂದಾಗಿ ಕಲಾವಿದರು ಚಿತ್ರಕಲೆಯಿಂದ ದೂರ ಉಳಿಯುವಂತಾಗಿದೆ’ ಎಂದು ವಿಷಾದ ವ್ಯಕ್ತಪಡಿಸಿದರು.ಕಲಾವಿದರನ್ನು ಗುರುತಿಸಿ ಗೌರವಿಸುವಂತಹ ಲಯ ಕಲಾ ಮನೆ ಸಂಸ್ಥೆ ಕಾರ್ಯ ಶ್ಲಾಘನೀಯವಾಗಿದೆ. ಪ್ರಶಸ್ತಿಗೆ ಭಾಜನರಾದ ಎನ್.ಎ. ಹರ್ಲಾಪೂರ ಅವರು ಚಿತ್ರಕಲೆಯಲ್ಲಿ ಲಯವಾಗಿದ್ದಾರೆ ಎಂದು ಹೇಳಿದರು. ಹೊಸಳ್ಳಿಯ ಅಭಿನವ ಬೂದೀಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿ, ‘ಕಠಿಣ ತಪಸ್ಸನ್ನು ಮಾಡಿದಾಗ ಸುಂದರವಾಗಿ ಕಲಾಕೃತಿ ರಚಿಸಲು ಸಾಧ್ಯವಾಗುತ್ತದೆ. ಯಾವುದು ಮನಸ್ಸನ್ನು ಕರಗಿಸುತ್ತದೆಯೋ ಅದನ್ನೇ ಕಲೆ ಎನ್ನುವುದು. ಅದು ಉಪಾಸನೆಗಿಂತಲೂ ಕಠಿಣವಾಗಿರುತ್ತದೆ’ ಎಂದು ಹೇಳಿದರು.ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಹಿರಿಯ ಕಲಾವಿದ ಎನ್.ಎ. ಹರ್ಲಾಪುರ, ‘ಎಂ.ಎ. ಚೆಟ್ಟಿ ಅವರು ಮಹಾನ ಕಲಾವಿದರು. ಅವರ ಹೆಸರಿನಲ್ಲಿ ತಮಗೆ ಪ್ರಶಸ್ತಿ ಲಭಿಸಿರುವುದು ಸಂತಸ ತಂದಿದೆ’ ಎಂದು ಹೇಳಿದರು.ಉಪನ್ಯಾಸಕ ನಾರಾಯಣ ಹಿರೇಕೊಳಚಿ ಅವರಿಂದ ಮಂಗಳ ನಿನಾದ ನಡೆಯಿತು. ಉದ್ಯಮಿ ಈಶ್ವರಸಾ ಮೇರವಾಡೆ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಲಯಾ ಕಲಾ ಮನೆ ಸಂಸ್ಥೆ ಅಧ್ಯಕ್ಷ ಶಂಕರಗೌಡ ಪಾಟೀಲ, ಮಹೇಶ ಪತ್ತಾರ, ಎ.ಎಸ್. ಮಕಾನದಾರ ಮತ್ತಿತರರು ಹಾಜರಿದ್ದರು. ಉಪನ್ಯಾಸಕ ಅನ್ನದಾನಿ ಹಿರೇಮಠ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.