ಮನೆಯಂಗಳದಲ್ಲಿ ಮಾತುಕತೆ

ಬೆಂಗಳೂರು: `ಎಲ್ಲ ಲಲಿತಕಲಾ ವಿಭಾಗಗಳ ಬಗ್ಗೆ ಕಲಾವಿದ ಕನಿಷ್ಠ ಜ್ಞಾನ ಪಡೆದರೆ ಆತ ಪರಿಪೂರ್ಣ ಕಲಾವಿದನಾಗುತ್ತಾನೆ. ಸಾಹಿತ್ಯ, ಸಂಗೀತ, ಕಲೆಗಳ ನಡುವೆ ಪರಸ್ಪರ ಸಮನ್ವಯ ಇರಬೇಕು. ಆದರೆ ನಮ್ಮಲ್ಲಿ ಸಮನ್ವಯದ ಕೊರತೆ ಇದೆ~ ಎಂದು ಹಿರಿಯ ಗ್ರಾಫಿಕ್ ಕಲಾವಿದ ಡಾ.ಸಿ.ಚಂದ್ರಶೇಖರ ಬೇಸರ ವ್ಯಕ್ತಪಡಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ನಗರದ ಕನ್ನಡ ಭವನದ ನಯನ ಸಭಾಂಗಣದಲ್ಲಿ ಶನಿವಾರ ನಡೆದ `ಮನೆಯಂಗಳದಲ್ಲಿ ಮಾತುಕತೆ~ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

`ಒಂದು ಕಲಾಕೃತಿಗೆ ಪ್ರಶಸ್ತಿ ಬಂದರೆ ಮುಂದಿನ ವರ್ಷ ಪ್ರಶಸ್ತಿ ಗಿಟ್ಟಿಸಲು ಕಲಾವಿದರು ಅದೇ ಮಾದರಿಯ ಕಲಾಕೃತಿಗಳನ್ನು ರಚಿಸುತ್ತಾರೆ. ಇಂತಹ ಪ್ರವೃತ್ತಿ ಸಲ್ಲದು. ಶ್ರದ್ಧೆಯಿಂದ ಸ್ವಂತಿಕೆಯಿಂದ ಕೂಡಿರುವ ಬೇರೆ ಮಾದರಿಯ ಕಲಾಕೃತಿಗಳನ್ನು ರಚಿಸಬೇಕು~ ಎಂದು ಅವರು ಕಲಾವಿದರಿಗೆ ಕಿವಿಮಾತು ಹೇಳಿದರು.

`ಈಗ ಕಲಾ ಶಿಕ್ಷಣ ಬಹಳ ಗೊಂದಲಮಯವಾಗಿದೆ. ಸಾರ್ವಜನಿಕ ಶಿಕ್ಷಣ ಇಲಾಖೆಯ ಕಲಾ ಶಿಕ್ಷಣ ಒಂದು ಮಾದರಿಯಾದರೆ, ದಾವಣಗೆರೆಯ ಕಲಾಶಿಕ್ಷಣ ಮತ್ತೊಂದು ಬಗೆಯದು. ಕಲಾವಿದರು ರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಲು ಪಠ್ಯಕ್ರಮದ ಗೊಂದಲ ತೊಡಕಾಗಿದೆ~ ಎಂದು ಅವರು ಅಭಿಪ್ರಾಯಪಟ್ಟರು.

`ಲಲಿತಕಲಾ ಅಕಾಡೆಮಿ ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ ವಿಶೇಷ ಘಟಕ ಯೋಜನೆಯಡಿಯಲ್ಲಿ ಅನುದಾನ ಬಿಡುಗಡೆ ಮಾಡುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳಿಗೆ ವಿನಂತಿಸಿದೆ. ಯೋಜನೆ ತಯಾರಿಸಿಕೊಂಡು ಬಂದರೆ ಅನುದಾನ ನೀಡಬಹುದು ಎಂದು ಅಧಿಕಾರಿಗಳು ತಿಳಿಸಿದರು. ಯೋಜನೆಯ ಬಗ್ಗೆ ಮಾಹಿತಿ ನೀಡಿದಾಗ ಐದು ಲಕ್ಷ ರೂಪಾಯಿ ಬಿಡುಗಡೆ ಮಾಡಿದರು. ಈಗ ಎಲ್ಲ ಅಕಾಡೆಮಿಗಳು ಈ ಯೋಜನೆಯ ಲಾಭ ಪಡೆಯುತ್ತಿವೆ. ತುಳಿತಕ್ಕೊಳಗಾದ ಕಲಾವಿದರು ಈ ಯೋಜನೆಯ ಲಾಭ ಪಡೆದು ರಾಷ್ಟ್ರೀಯ ಮಟ್ಟದ ಕಲಾವಿದರಾಗಿ ಬೆಳೆದಿದ್ದಾರೆ. ಸಲಹೆ ಸಾಕಾರಗೊಂಡಿರುವುದು ಮರೆಯದ ಕ್ಷಣ~ ಎಂದು ನೆನಪಿಸಿಕೊಂಡರು.

`1940ರ ಸಮಯ. ಬೆಂಗಳೂರು ನಗರ ಅನೇಕ ಹಳ್ಳಿಗಳನ್ನು ಒಳಗೊಂಡಿತ್ತು. ಬೆಂಗಳೂರಿಗೆ ಗ್ರಾಮೀಣ ಸೊಗಡು ಇತ್ತು. ನಾನು ಮಾಗಡಿ ರಸ್ತೆಯ ಸಮೀಪದ ಗೋಪಾಲಪುರದಲ್ಲಿ ಜನಿಸಿದೆ. ಮನೆಯ ಹಿಂದೆ ಸಣ್ಣ ಝರಿಯ ಮಾದರಿಯ ಸಣ್ಣ ನದಿ ಹರಿಯುತ್ತಿತ್ತು. ಮಣ್ಣಿನ ಜತೆ ಆಟವಾಡುತ್ತಾ ಹೊಸ ಹೊಸ ಆಕಾರಗಳನ್ನು ರಚಿಸಿದೆ. ಮನೆ ಸುತ್ತಮುತ್ತಲಿನ ನಿಸರ್ಗ, ರಾಗಿ ಹೊಲ, ಮಲ್ಲಿಗೆ ತೋಟಗಳು ನನ್ನ ಮೇಲೆ ಒಂದಲ್ಲ ಒಂದು ರೀತಿಯಲ್ಲಿ ಪ್ರಭಾವ ಬೀರಿದವು. ಕಲಾವಿದನಾಗಲು ನನಗೆ ನಿಸರ್ಗವೇ ಪ್ರೇರಣೆ~ ಎಂದು ಅವರು ಬಹಿರಂಗಪಡಿಸಿದರು.

`1980ರ ಹೊತ್ತಿಗೆ ದಲಿತ, ಬಂಡಾಯ, ರೈತ ಚಳವಳಿಗಳು ಪ್ರಖರವಾಗಿ ಬೆಳೆದಿದ್ದವು. ಈ ಹೋರಾಟಗಳ ಸತ್ವ ಹೀರಿಕೊಂಡು ಬೆಳೆದೆ. ಫುಟ್ಪಾತ್ನಲ್ಲಿ ನಿಂತು ದಲಿತ ಚಳವಳಿಕಾರರ ಭಾಷಣಗಳನ್ನು ಕೇಳಿದೆ~ ಎಂದು ಅವರು ತಿಳಿಸಿದರು.

`ಪಿಯುಸಿಯಲ್ಲಿ ಉತ್ತೀರ್ಣನಾದ ಬಳಿಕ ಕಲಾ ಶಿಕ್ಷಕ ಹಡಪದ್ ಅವರನ್ನು ಗೆಳೆಯ ಪ.ಸ. ಕುಮಾರ್ ಪರಿಚಯಿಸಿದರು. ತರಗತಿಯಲ್ಲಿ ಕಷ್ಟದಲ್ಲಿ ಉತ್ತೀರ್ಣನಾಗುತ್ತಿದ್ದ ನಾನು ಅವರ ಚಿತ್ರಕಲಾ ಶಾಲೆಗೆ ಸೇರಿದ ಬಳಿಕ ಎಲ್ಲ ಪರೀಕ್ಷೆಗಳಲ್ಲಿ ಉತ್ತೀರ್ಣನಾಗುತ್ತಾ ಹೋದೆ. ಹಡಪದ್ ಅವರು ಶ್ರೇಷ್ಠ ಶಿಕ್ಷಕ. ವಿದ್ಯಾರ್ಥಿಯ ಮನೋಧರ್ಮಕ್ಕೆ ತಕ್ಕಂತೆ ಪಾಠ ಮಾಡುವ ಕೌಶಲ ಅವರಲ್ಲಿ ಇತ್ತು. 1979ರಲ್ಲಿ ಲಲಿತಕಲಾ ಅಕಾಡೆಮಿ ಅಧ್ಯಕ್ಷರಾಗಿ ಬಂದ ಹಿರಿಯ ಕಲಾವಿದ ಕೆ.ಕೆ. ಹೆಬ್ಬಾರ್ ಅವರು ರಾಜ್ಯದ ಗ್ರಾಫಿಕ್ ಕಲಾವಿದರನ್ನು ಗುರುತಿಸುವ ಕಾರ್ಯದಲ್ಲಿ ಅವರು ತೊಡಗಿದ್ದರು. ನಾನು ಅವರ ಗಮನಕ್ಕೆ ಬಂದೆ. ಗ್ರಾಫಿಕ್ಗೆ ಸೇರಿದೆ. ಎರಡು ವರ್ಷಗಳ ಕಾಲ ಶಾಂತಿನಿಕೇತನದಲ್ಲಿ ಕಲಿತೆ~ ಎಂದರು.

`80ರ ಬಳಿಕ ಹೆಬ್ಬಾರರಿಂದ ಪ್ರಭಾವಿತರಾಗಿ ಬಂದ ಕಲಾವಿದರು ಕಲಾ ಸಮುದಾಯವನ್ನು ಹೊಸ ರೀತಿಯಲ್ಲಿ ಕಟ್ಟಿದರು. ಅವರು ಸಮಕಾಲೀನ ಕಲೆಯನ್ನು ಅರ್ಥ ಮಾಡಿಕೊಂಡು ಬೆಳೆದರು. ಕೆಲವು ವರ್ಷಗಳ ಹಿಂದೆ ರಾಜ್ಯದ 22 ಮಂದಿ ಕಲಾವಿದರು ಕೇಂದ್ರ ಲಲಿತಕಲಾ ಅಕಾಡೆಮಿಯ ಮಾನ್ಯತೆ ಪಡೆದಿದ್ದರು. ಈಗ 160 ಕಲಾವಿದರು ಮಾನ್ಯತೆ ಪಡೆದಿದ್ದಾರೆ~ ಎಂದು ಅವರು ತಿಳಿಸಿದರು.

`ಮೂವತ್ತು ವರ್ಷಗಳ ಹಿಂದೆ ನಗರದಲ್ಲಿ ಇದ್ದುದು ಒಂದೇ ಖಾಸಗಿ ಗ್ಯಾಲರಿ. ಆರು ತಿಂಗಳಿಗೆ ಒಂದು ಪ್ರದರ್ಶನ ನಡೆಯುತ್ತಿತ್ತು. ಅದೇ ಹೊತ್ತಿಗೆ ವೆಂಕಟಪ್ಪ ಗ್ಯಾಲರಿ ಆರಂಭಗೊಂಡಿತ್ತು. ಕಲಾ ಪರಂಪರೆ ಜನರನ್ನು ತಲುಪುತ್ತಿಲ್ಲ ಅನಿಸಿದಾಗ ಗೆಳೆಯರೆಲ್ಲ ಸೇರಿ ನಾಲ್ಕೈದು ಕಲಾ ಮೇಳಗಳನ್ನು ನಡೆಸಿದೆವು. ಈಗ ಸಾಕಷ್ಟು ಗ್ಯಾಲರಿಗಳು ಆರಂಭಗೊಂಡಿವೆ. ದೇಶದ ಸಾಂಸ್ಕೃತಿಕ ಕೇಂದ್ರವಾಗಿ ಬೆಂಗಳೂರು ಬೆಳೆದಿದೆ~ ಎಂದು ಅವರು ಅಭಿಪ್ರಾಯಪಟ್ಟರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಬಿ.ಟಿ.ಮುನಿರಾಜಯ್ಯ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.