ಮಲಪ್ಪುರ (ಕೇರಳ): ಇದೇ ತಿಂಗಳಲ್ಲಿ ಕೇರಳದಲ್ಲಿ ಸ್ನೇಹಪರ ಪಂದ್ಯ ಆಡುವುದಾಗಿ ಘೋಷಿಸಿದ್ದ ಅರ್ಜೆಂಟೀನಾ ಫುಟ್ಬಾಲ್ ತಂಡವು ಇದೀಗ ಭೇಟಿಯನ್ನು 2026ರ ಮಾರ್ಚ್ಗೆ ಮುಂದೂಡಿದೆ. ಇದನ್ನು ಕೇರಳ ಕ್ರೀಡಾ ಸಚಿವ ವಿ.ಅಬ್ದುರಹಿಮಾನ್ ಸೋಮವಾರ ಖಚಿತಪಡಿಸಿದ್ದಾರೆ.

‘ಮುಂದಿನ ವರ್ಷದ ಮಾರ್ಚ್ನಲ್ಲಿ ಕೇರಳಕ್ಕೆ ಭೇಟಿ ನೀಡುವುದಾಗಿ ಹಾಗೂ ಈ ಬಗ್ಗೆ ಶೀಘ್ರದಲ್ಲೇ ಅಧಿಕೃತ ಘೋಷಣೆ ಮಾಡುವುದಾಗಿ ಅರ್ಜೆಂಟೀನಾ ತಂಡವು ಎರಡು ದಿನಗಳ ಹಿಂದೆ ಇ–ಮೇಲ್ನಲ್ಲಿ ತಿಳಿಸಿದೆ’ ಎಂದು ಅಬ್ದುರಹಿಮಾನ್ ಹೇಳಿದ್ದಾರೆ.

ದಿಗ್ಗಜ ಆಟಗಾರ ಲಯೊನೆಲ್ ಮೆಸ್ಸಿ ನಾಯಕತ್ವದ ಹಾಲಿ ವಿಶ್ವ ಚಾಂಪಿಯನ್ ಅರ್ಜೆಂಟೀನಾ ತಂಡವು ನವೆಂಬರ್ 10 ರಿಂದ 18ರ ನಡುವೆ ಕೊಚ್ಚಿ ಅಥವಾ ತಿರುವನಂತಪುರದಲ್ಲಿ ಸ್ನೇಹಪರ ಪಂದ್ಯ ಆಡುವುದಾಗಿ ಈ ಹಿಂದೆ ಘೋಷಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.