ಮಂಗಳವಾರ, ಮೇ 18, 2021
22 °C

ಕವಿತೆ ಜನಮುಖಿಯಾಗಬೇಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಕವಿತೆ ಜನಮುಖಿಯಾಗಬೇಕು. ಕವಿಗಳು ಸಾಮಾಜಿಕ ಜವಾಬ್ದಾರಿ ಅರಿತು ಕವನ ರಚನೆ ಮಾಡಬೇಕು~ ಎಂದು ಹಿರಿಯ ಸಾಹಿತಿ ಡಾ.ಚಂದ್ರಶೇಖರ ಕಂಬಾರ ಸಲಹೆ ನೀಡಿದರು.ನಗರದ ಆರ್.ಟಿ. ನಗರದ ತರಳಬಾಳು ಕೇಂದ್ರದಲ್ಲಿ ಶನಿವಾರ ರಾತ್ರಿ ನಡೆದ `ಕಾವ್ಯಪೂರ್ಣಿಮಾ- 2012, ಬೆಳದಿಂಗಳ ಕವಿಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.`ಕವಿಗಳು ಕಾವ್ಯವನ್ನು ಯಾರಿಗಾಗಿ, ಯಾತಕ್ಕೋಸ್ಕರ ರಚನೆ ಮಾಡುತ್ತಿದ್ದೇವೆ ಎಂಬುದನ್ನು ಅರಿತುಕೊಳ್ಳಬೇಕು. ಸಮಾಜದ ಸಾಂಸ್ಕೃತಿಕ ಅಗತ್ಯಗಳ ಜಾಗೃತಿಗೆ ಕವಿತೆ ರಚನೆಯಾಗಬೇಕು. ಈಗಿನ ಕವಿತೆಗಳು ಸ್ವಗತದ ಹಾಗೆ. ಸಮಾಜದೊಂದಿಗೆ ಸಂವಾದ ನಡೆಸುವುದಿಲ್ಲ~ ಎಂದು ು ಬೇಸರ ವ್ಯಕ್ತಪಡಿಸಿದರು.`ಹಿಂದಿನ ಕವಿಗಳು ಕವಿತೆಯೊಂದಿಗೆ ಕಥೆ ಹೇಳುತ್ತಿದ್ದರು. ಆಗ ಸಂವಹನದ ಸಮಸ್ಯೆ ಬರುತ್ತಿರಲಿಲ್ಲ. ಓದುಗರಿಗೆ ಸಂದೇಹ ಉಂಟಾಗುತ್ತಿರಲಿಲ್ಲ. ಈಗಿನ ಕವಿಗಳು ಕವಿತೆಯೊಂದಿಗೆ ಕಥೆ ಹೇಳುವುದಿಲ್ಲ. ಹಾಗಾಗಿ ಹೊಸ ಕವಿತೆಗಳು ರಸಾನುಭವದಿಂದ ವಂಚಿತವಾಗಿವೆ~ ಎಂದು  ವಿಶ್ಲೇಷಿಸಿದರು. `ಈಗಿನ ಕಾವ್ಯಕ್ಕೂ ಹಿಂದಿನ ಕಾವ್ಯಕ್ಕೂ ಬಹಳ ಅಂತರ ಇದೆ. ಹೊಸ ಕಾವ್ಯಗಳು ಅಪಾಯದ ಹಾದಿಯಲ್ಲಿ ಇವೆ. ಈಗಿನ ಕವಿಗಳು ಹಳೆಯ ಕಾವ್ಯಗಳನ್ನು ಓದುವುದೂ ಇಲ್ಲ. ಅನೇಕ ಕವಿಗಳಿಗೆ ವಚನ ಸಾಹಿತ್ಯ ತಮ್ಮ ಪರಂಪರೆ ಅನ್ನಿಸುವುದೇ ಇಲ್ಲ~ ಎಂದು ಅವರು ವಿಷಾದಿಸಿದರು.  ಅವರು ಈ ಸಂದರ್ಭ `ಆ ಮರ ಈ ಮರ~ , `ರೆಕ್ಕೆ ಹುಳು~ ಎಂಬ ಕವನ ವಾಚಿಸಿದರು.   ತರಳುಬಾಳು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, `ಲೇಖಕರು ಸಾಮಾಜಿಕ ಜವಾಬ್ದಾರಿ ಅರಿತು ಕಾವ್ಯ ರಚನೆ ಮಾಡಬೇಕು. ಕವಿತೆಗಳು ಸಮಾಜಮುಖಿಯಾಗಬೇಕು~ ಎಂದರು. ಕವಿಗಳಾದ ಜಯಂತ ಕಾಯ್ಕಿಣಿ, ಬಿ. ಆರ್. ಲಕ್ಷ್ಮಣರಾವ್, ಡಾ. ಎಚ್. ಎಲ್. ಪುಷ್ಪ, ಎಚ್.ಡುಂಡಿರಾಜ್, ಜರಗನಹಳ್ಳಿ ಶಿವಶಂಕರ್, ಡಾ. ಮಮತಾ ಜಿ. ಸಾಗರ್, ಜಿ. ಎನ್. ಮೋಹನ್, ಬಿ. ಟಿ. ಲಲತಾ ನಾಯಕ್, ಡಾ. ಸರಜೂ ಕಾಟ್ಕರ್, ಅಬ್ದುಲ್ ರಶೀದ್, ಡಾ.ಟಿ. ಸಿ. ಪೂರ್ಣಿಮಾ, ಡಾ. ಎಂ. ಎಸ್. ಶೇಖರ್, ಡಾ.ಲತಾ ಗುತ್ತಿ, ಡಾ. ವಿಕ್ರಂ ವಿಸಾಜಿ, ಜ. ನಾ. ತೇಜಶ್ರೀ, ವೀರಣ್ಣ ಮಡಿವಾಳರ ಕವಿಗೋಷ್ಠಿಯಲ್ಲಿ ಕವನ ವಾಚಿಸಿದರು. ಇದಕ್ಕೂ ಮುನ್ನ ಯಶವಂತ ಹಳಿಬಂಡಿ ಅವರಿಂದ ಭಾವಗೀತೆಗಳ ಗಾಯನ ನಡೆಯಿತು.ಸಾಹಿತಿ ಡಾ. ಎಚ್. ಎಸ್.ವೆಂಕಟೇಶ ಮೂರ್ತಿ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ಲೇಖಕಿ ಡಾ. ಕಮಲಾ ಹಂಪನಾ ಮತ್ತು ಇತರರು ಕವಿಗೊಷ್ಠಿಯಲ್ಲಿ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.