ಗುರುವಾರ , ಜೂನ್ 24, 2021
28 °C
ಆಯಾರಾಂ ಗಯಾರಾಂ

ಕಾಂಗ್ರೆಸ್‌ ಅಭ್ಯರ್ಥಿ ಬಿಜೆಪಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಐಎಎನ್‌ಎಸ್‌): ಮಧ್ಯ ಪ್ರದೇಶದ ಭಿಂಡ್‌ ಮೀಸಲು ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಭಗೀರಥ್‌ ಪ್ರಸಾದ್‌ ಅವರು ಭಾನುವಾರ ಬಿಜೆಪಿ ಸೇರಿರು­ವುದು ಕಾಂಗ್ರೆಸ್‌ಗೆ ತೀವ್ರ ಇರಿಸು ಮುರಿಸು ಉಂಟು ಮಾಡಿದೆ. ಕಾಂಗ್ರೆಸ್‌ ಶನಿವಾರ ಬಿಡುಗಡೆ ಮಾಡಿದ ಅಭ್ಯರ್ಥಿಗಳ ಪಟ್ಟಿಯಲ್ಲಿ ಭಗೀರಥ್‌ ಹೆಸರಿತ್ತು.ಬರಿದಾಗುತ್ತಿರುವ ಆಂಧ್ರ ಕಾಂಗ್ರೆಸ್‌ ಕೈ: (ಹೈದರಾಬಾದ್‌ ವರದಿ): ಕಿರಣ್‌­ಕುಮಾರ್ ರೆಡ್ಡಿ ಅವರ ಸರ್ಕಾರದಲ್ಲಿ ಸಚಿವರಾಗಿದ್ದ ಇಬ್ಬರು ಕಾಂಗ್ರೆಸ್‌ ತೊರೆದು ತೆಲುಗು ದೇಶಂ ಪಕ್ಷ (ಟಿಡಿಪಿ) ಸೇರಿದ್ದಾರೆ. ಟಿ.ಜಿ.ವೆಂಕಟೇಶ, ಇ.ಪ್ರತಾಪ ರೆಡ್ಡಿ ಅವರು ಪಕ್ಷದ ಮುಖ್ಯಸ್ಥ ಎನ್‌.ಚಂದ್ರಬಾಬು ನಾಯ್ಡು ಅವರ ಸಮ್ಮುಖದಲ್ಲಿ ಟಿಡಿಪಿ ಸೇರಿದರು. ಮೊದಲೇ ಸೀಮಾಂಧ್ರ ಭಾಗದಲ್ಲಿ ಬಲ ಕಳೆದುಕೊಂಡಿರುವ ಕಾಂಗ್ರೆಸ್‌ಗೆ ಇದರಿಂದಾಗಿ ಮತ್ತಷ್ಟು ಹಿನ್ನಡೆ ಉಂಟಾಗಿದೆ.ಮಾಜಿ ಸಚಿವೆ ಗಲ್ಲಾ ಅರುಣಾ ಕುಮಾರಿ, ಅವರ ಮಗ ಗಲ್ಲಾ ಜಯದೇವ್‌, ಕಾಂಗ್ರೆಸ್‌ ಶಾಸಕರಾದ ಆದಾಲ ಪ್ರಭಾಕರ ರೆಡ್ಡಿ, ಶ್ರೀಧರ ಕೃಷ್ಣ ರೆಡ್ಡಿ,  ಬಿ.ಸತ್ಯಾನಂದ ಅವರೂ ಟಿಡಿಪಿ ಸೇರಿದರು. ಮುಂಬರುವ ದಿನಗಳಲ್ಲಿ ಇನ್ನೂ ಕೆಲವರು ಕಾಂಗ್ರೆಸ್‌ ತ್ಯಜಿಸುವ ಸಾಧ್ಯತೆ ಇದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.