ಸೋಮವಾರ, ಜೂನ್ 21, 2021
30 °C

ಕಾಡಿನ ಮಕ್ಕಳ ಡೋಲು ವಾದನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎಷ್ಟೊಂದು ಮುಗಿಬಿದ್ದ ಜನಸಾಗರ ಕಿವಿಗೆ ಜಣ್ಣ ಜಣ್ಣ ಎಂದು ಕೆಳುವ ಇಂಪಾದ ವಾದ್ಯ ಸಂಗೀತ. ಏನೀರಬಹುದೆಂದು ಹೋಗಿ ನೋಡಿದರೆ ಅಲ್ಲಿ ನಡೆದಿದ್ದು ಹಕ್ಕಿಪಿಕ್ಕಿ ಬುಡಕಟ್ಟು ಜನಾಂಗದ ಅಪ್ಪಟ್ಟ ಕಲೆಯಾದ ತಾಷಾರಾಂ ಡೋಲು ವಾದನ.ಹೌದು, ತಾಷಾರಾಂ ಡೋಲು ವಾದನ ನುಡಿಸುವ ಜಾತ್ರೆ ನಡೆದಿದ್ದು ಹಾನಗಲ್ ತಾಲ್ಲೂಕಿನ ಕಲಕೇರಿ ಗ್ರಾಮದ ರಂಗಮಂದಿರದಲ್ಲಿ. ಈ ಜಾತ್ರೆಯಲ್ಲಿ ಹೊಸಪೇಟೆ ತಾಲ್ಲೂಕಿನ ಕಂಪ್ಲಿಯ ಎಚ್.ಪಿ.ಶಿಕಾರಿರಾಮು ನೇತೃತ್ವದ 14 ಕಲಾವಿದರ ತಂಡ  ಒಂದು ಗಂಟೆಗೂ ಹೆಚ್ಚು ಕಾಲ ತಾಷಾರಾಂ ಡೋಲು ವಾದನ ನುಡಿಸುತ್ತ, ನರ್ತಿಸುತ್ತ ನೆರೆದಿದ್ದ ಸಹಸ್ರಾರು ಜನ ಸಮೂಹವನ್ನು ನಿಂತ್ಲ್ಲಲಿ ನಿಂತು ನೋಡುವಂತೆ ಮಾಡಿತು.ಈ ತಾಷಾರಾಂ ಡೋಲು ವಾದನವನ್ನು ಕಾಡಿನ ಮಕ್ಕಳಾದ ಹಕ್ಕಿಪಿಕ್ಕಿ ಬುಡಕಟ್ಟು ಜನಾಂಗ ತಮ್ಮ ಮನರಂಜನೆಗಾಗಿ ಮದುವೆ, ಹಬ್ಬ-ಹರಿದಿನಗಳಲ್ಲಿ ಹಾಗೂ ಶುಭ ಸಮಾರಂಭಗಳಲ್ಲಿ ಬಾರಿಸುವ ಮೂಲಕ ಸಂತಸ ಪಡುತ್ತಾರೆ. ಇದರಲ್ಲಿ ಐದಾರು ಡೊಳ್ಳಿನ ಮಾದರಿಯ ಡೋಲು, ಡ್ರಮ್, ತಾಳಗಳು ಸೇರಿದಂತೆ ವಿವಿದ ವಾದ್ಯ ಪರಿಕರಗಳನ್ನು ಪ್ರಮುಖವಾಗಿ ಬಳಸುತ್ತಾರೆ. ಕಲಕೇರಿ ಗ್ರಾಮದಲ್ಲಿ ಬಸವೇಶ್ವರ ಹಾಗೂ ವೀರಭದ್ರೇಶ್ವರ ದೇವರ ಜಾತ್ರೆ ಇದ್ದದ್ದರಿಂದ ಹಳ್ಳಿಯಲ್ಲಿ ಹಬ್ಬದ ಸಂಭ್ರಮದ ವಾತಾವರಣ ನಿರ್ಮಾಣವಾತ್ತು. ಸರ್ಕಾರ ಬುಡಕಟ್ಟು ಜನಾಂಗಗಳ ಕಲಾ ವಿದರ ಪಾರಂಪರಿಕ ಕಲೆಗಳನ್ನು ಪ್ರೋತ್ಸಾಹಿಸುವ ಮೂಲಕ ಅವರ ಕೆಲೆಯ ರಕ್ಷಣೆಗೆ ವಾರ್ತಾ ಇಲಾಖೆ ಪ್ರಾಯೋಜಿತ ಕಲಾ ತಂಡಗಳ ಮೂಲಕ ಜನಸಾಮಾನ್ಯರಿಗೆ ಪರಿಚಯಿಸುವ ಕೆಲಸ ಮಾಡಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.ಬುಡಕಟ್ಟು ಭಾಷಿಕ ಜನಾಂಗಗಳ ಕುರಿತು ಸಂಶೋಧನಾ ಪ್ರಂಬಂಧ ಮಂಡಿಸಿದ ಬೆಂಗಳೂರ ಶಿಕ್ಷಣ ಮಹಾ ವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಡಾ.ಬಸವರಾಜ ಹಳ್ಳೂರ ` ತಾಷಾರಾಂ ವಾದನ ಬುಡಕಟ್ಟು ಜನರ ಜೀವನದ ಆಸಕ್ತಿಯ ಕ್ಷೇತ್ರವಾಗಿದೆ. ಈ ಹಿನ್ನಲೇಯಲ್ಲಿ ಬುಡಕಟ್ಟು ಕಲೆಯನ್ನು ಕಲಾವಿದರು ಅದರ ಮೂಲ ಸ್ವರೂಪವನ್ನು ತಿಳಿದುಕೊಂಡು ಅದನ್ನು ಕಾಪಾಡಲು ಇಂತಹ ಕಾರ್ಯಕ್ರಮಗಳ ಅಗತ್ಯ ಎಂದರು.ಒಂದು ಗಂಟೆಗೂ ಹೆಚ್ಚುಕಾಲ ನಡೆದ ತಾಷಾರಾಂ ಡೋಲು ವಾದನ ಜಾತ್ರೆಯಲ್ಲಿ ಕಲಾವಿದರು ವಿವಿಧ ರೀತಿಯಲ್ಲಿ ತಾಷಾರಾಂ ಡೋಲು ನುಡಿಸುತ್ತ ಕ್ರಮೇಣ ರುದ್ರಭೀಕರಾವಗಿ ನರ್ತಿಸುತ್ತ ತಮ್ಮ ವಾದ್ಯ ಕಲೆಯನ್ನು ತೋರ್ಪಡಿಸುವ ಸಂದರ್ಭ ಮಾತ್ರ ಜನಸಾಗರವನ್ನು ಕುಣಿಯುವಂತೆ ಮಾಡಿತ್ತು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.