ಪಾವಗಡ: ಪಶು ಸಾಕಣೆಗೆ ಸೂಕ್ತ ಪ್ರದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ತಾಲ್ಲೂಕಿನಲ್ಲೇ ಜಾನುವಾರು ಸಂಖ್ಯೆ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ. ದಶಕದಿಂದ ಬಿಡದೆ ಕಾಡುತ್ತಿರುವ ಬರ, ಮೇವಿನ ಸಮಸ್ಯೆ, ಕುಡಿಯುವ ನೀರಿಗೂ ತತ್ವಾರ, ಸತತ ನಷ್ಟ ಸೇರಿದಂತೆ ಸೂಕ್ತ ಪಶು ವೈದ್ಯಕೀಯ ಸೇವೆ ಅಲಭ್ಯತೆಯಿಂದ ಬಹುತೇಕ ರೈತರು ಪಶು ಸಂಗೋಪನೆಯಿಂದ ವಿಮುಖರಾಗುತ್ತಿದ್ದಾರೆ.

ತಾಲ್ಲೂಕಿನ ಇತಿಹಾಸ ತಿರುವಿ ಹಾಕಿದರೆ ಲಕ್ಷ ಲಕ್ಷ ಸಂಖ್ಯೆಯಲ್ಲಿ ಜಾನುವಾರು ಸಾಕಣೆ ನಡೆಯುತ್ತಿತ್ತು ಎಂಬುದಕ್ಕೆ ಸಾಕಷ್ಟು ನಿದರ್ಶನಗಳಿವೆ. ಇಲ್ಲಿನ ಬೆಟ್ಟಗುಡ್ಡಗಳ ಭೌಗೋಳಿಕ ಹಿನ್ನೆಲೆಯೂ ಇದಕ್ಕೆ ಪೂರಕವಾಗಿತ್ತು. ಸುತ್ತಮುತ್ತಲ ಸಾಮಂತರಿಗೆ ಬೆಣ್ಣೆ, ತುಪ್ಪವನ್ನು ರವಾನಿಸಲಾಗುತ್ತಿತ್ತು ಎಂಬ ಅಂಶ ದಾಖಲೆಗಳಲ್ಲಿದೆ. ಪಾವಗಡ, ವೈ.ಎನ್.ಹೊಸಕೋಟೆ, ನಿಡಗಲ್ ಕೋಟೆಗಳಲ್ಲಿರುವ ಭಾರೀ ಗಾತ್ರದ ತುಪ್ಪದ ಕೊಳಗಳೇ ಇದಕ್ಕೆ ಜೀವಂತ ನಿದರ್ಶನ.

ತಾಲ್ಲೂಕಿನ ಕಾಮನದುರ್ಗ, ನಿಡಗಲ್ ಬೆಟ್ಟದ ಆಸುಪಾಸಿನ ಹಳ್ಳಿಕಾರ್ ತಳಿ ರಾಸುಗಳು ರಾಜ್ಯದಲ್ಲೇ ಹೆಸರುವಾಸಿ. ಪ್ರಸ್ತುತ ಈ ಭಾಗದಲ್ಲೂ ರಾಸುಗಳ ಸಂಖ್ಯೆ ಗಣನೀಯವಾಗಿ ಇಳಿಮುಖವಾಗುತ್ತಿದೆ.

ತಾಲ್ಲೂಕಿನ ಪಶು ಇಲಾಖೆ ಮಾಹಿತಿಯನ್ವಯ 1,25,563 ಕುರಿಗಳಿವೆ. 39,294 ದನಗಳು, 16,804 ಎಮ್ಮೆಗಳು, 38,716 ಮೇಕೆಗಳು, 49,716 ಕೋಳಿಗಳಿವೆ. 2007ರ ಗಣತಿ ಪ್ರಕಾರ ತಾಲ್ಲೂಕಿನಲ್ಲಿ 3,84,392 ಪ್ರಾಣಿಗಳಿದ್ದವು. ಆದರೆ 2012ರ ಗಣತಿ ಪ್ರಕಾರ ಅವುಗಳ ಸಂಖ್ಯೆ 2,79,512ಕ್ಕೆ ಇಳಿದಿದೆ. ಐದು ವರ್ಷದಲ್ಲಿ ಜಾನುವಾರುಗಳ ಸಂಖ್ಯೆ ಲಕ್ಷಕ್ಕೂ ಅಧಿಕ ಕಡಿಮೆಯಾಗಿವೆ.

ತಾಲ್ಲೂಕಿನಲ್ಲಿ 1 ಪಶು ಆಸ್ಪತ್ರೆ, 5 ಪಶು ಚಿಕಿತ್ಸಾಲಯಗಳು, 8 ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರಗಳು, 2 ಕೃತಕ ಗರ್ಭಧಾರಣಾ ಕೇಂದ್ರಗಳು, 1 ಸಂಚಾರಿ ಪಶು ಚಿಕಿತ್ಸಾಲಯ ಇದೆ. ಆದರೆ ಇರುವ 8 ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರಗಳಲ್ಲಿ ಸಿಬ್ಬಂದಿಯ ಕೊರತೆ ಕಾಡುತ್ತಿದೆ. ವೈದ್ಯರು, ಸಿಬ್ಬಂದಿಯಿಲ್ಲದೆ ಚಿಕಿತ್ಸಾ ಕೇಂದ್ರಗಳಿದ್ದೂ ಪ್ರಯೋಜನವಿಲ್ಲ. ತಾಲ್ಲೂಕಿಗೆ ಇರುವ ಏಕೈಕ ಪಶು ಚಿಕಿತ್ಸಾಲಯದಲ್ಲೂ ವೈದ್ಯರಿಲ್ಲ. ವೆಂಕಟಮ್ಮನಹಳ್ಳಿಯಲ್ಲಿರುವ ಕೃತಕ ಗರ್ಭಧಾರಣಾ ಕೇಂದ್ರದಲ್ಲಿಯೂ ಸಿಬ್ಬಂದಿಯಿಲ್ಲ.

ಸತತ ಬರದಿಂದ ಕಂಗೆಟ್ಟ ತಾಲ್ಲೂಕಿನ ಜನತೆಗೆ ಪಶು ವೈದ್ಯಕೀಯ ಸೇವೆಯೂ ಲಭ್ಯವಾಗದೆ ಜಾನುವಾರುಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಇನ್ನೂ ಹಲ ಗ್ರಾಮಗಳ ರೈತರು ಆಂಧ್ರದಲ್ಲಿ ತಮ್ಮ ರಾಸುಗಳಿಗೆ ಚಿಕಿತ್ಸೆ ಕೊಡಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.