ನಿಪ್ಪಾಣಿ: `ನ್ಯಾಯಾಲಯದ ಮೆಟ್ಟಿಲೆ ರುವ ವ್ಯಕ್ತಿ ಮಾನಸಿಕ ಅಸ್ವಸ್ಥನಾಗಿದ್ದರೆ ಆತನಿಗೆ ತಕ್ಕ ವೈದ್ಯಕೀಯ ಉಪಚಾರವನ್ನು ಒದಗಿಸಿ ಕೊಡುವುದು ನ್ಯಾಯಾಧೀಶರ ಕರ್ತವ್ಯ. ಅಂಥ ಮನೋರೋಗಿಗಳ ಬಗ್ಗೆ ಸಂವೇದನಾಶೀಲತೆಯನ್ನು ಹೊಂದು ವುದು ಅವಶ್ಯಕ~ ಎಂದು ಸ್ಥಳೀಯ ಸಿವಿಲ್ ನ್ಯಾಯಾಧೀಶ ಸುಬ್ರಹ್ಮಣ್ಯ ಎನ್. ಅಭಿಪ್ರಾಯಪಟ್ಟರು.

ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಅಂಗವಾಗಿ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಮತ್ತು ಆರೋಗ್ಯ ಇಲಾಖೆ ಆಶ್ರಯದಲ್ಲಿ ಬುಧವಾರ ಕೆ.ಎಲ್.ಇ ಸಂಸ್ಥೆಯ ಔಷಧೀಯ ಮಹಾವಿದ್ಯಾಲ ಯದಲ್ಲಿ ನಡೆದ `ಮಾನಸಿಕ ರೋಗದಿಂದ ನರಳುತ್ತಿರುವ ವ್ಯಕ್ತಿಗಳ ಹಕ್ಕುಗಳು~ ವಿಷಯದ ಬಗ್ಗೆ ಕಾನೂನು ಸಾಕ್ಷರತಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಡಾ.ಎಂ.ಐ. ನಾರಗಬೆಟ್ಟ ಮಾನಸಿಕ ಅಸ್ವಸ್ಥತೆಗೆ ಕಾರಣಗಳು, ನೀಡಬೇಕಾದ ಚಿಕಿತ್ಸೆಗಳ ಬಗ್ಗೆ ಮಾಹಿತಿ ನೀಡಿದರು. ಉಪನ್ಯಾಸಕಿ ಎಸ್.ಸಿ. ಶಿವಪೂರಕರ ಮಾನಸಿಕ ಆರೋಗ್ಯ ಕಾಯ್ದೆಯ ಕುರಿತು ಮಾಹಿತಿ ನೀಡಿದರು.
ಪ್ರಾಚಾರ್ಯ ಜೆ.ಕೆ. ಸಾಬೋಜಿ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಡಾ.ರಮೇಶ ಕುರ್ಲಿ, ವಕೀಲರ ಸಂಘದ ಅಧ್ಯಕ್ಷ ಎಂ.ಜಿ. ಖಡಖಡೆ, ಕಾರ್ಯದರ್ಶಿ ಬಿ.ಎ. ಬನ್ನೆ, ವಕೀಲರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಸಹಾಯಕ ಉಪನ್ಯಾಸಕ ಎಸ್.ಎಂ. ಪಾಟೀಲ ನಿರೂಪಿಸಿದರು. ಆರ್.ಎಸ್. ಬಗ್ಲಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.