ಕಾಪಿರೈಟ್ ಕಾಯ್ದೆ ಶಿಬಿರ
ಕರ್ನಾಟಕ ಪ್ರಕಾಶಕರ ಸಂಘ: ಶನಿವಾರ ಕಾಪಿರೈಟ್ ಕಾಯ್ದೆ ಕುರಿತ ಶಿಬಿರ. ಕಾಪಿರೈಟ್ ಅಥವಾ ಗ್ರಂಥಸ್ವಾಮ್ಯ ಕಾಯ್ದೆ, ಪುಸ್ತಕ ರಚಿಸುವ ಲೇಖಕ ಮತ್ತ ಪ್ರಕಟಿಸುವ ಪ್ರಕಾಶಕ ಇಬ್ಬರಿಗೂ ಮಹತ್ವದ್ದು. ಈ ಕಾಯ್ದೆಗೆ ಆದ ತಿದ್ದುಪಡಿ, ಪುಸ್ತಕ ಪ್ರಕಟಿಸುವ ಮುನ್ನ, ಅನುವಾದಿಸುವ ಮುನ್ನ ಒಪ್ಪಂದಕ್ಕೆ ಸಹಿ ಹಾಕುವಾಗ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕುರಿತು ಅರಿವು ಮೂಡಿಸಲು ಕರ್ನಾಟಕ ಪ್ರಕಾಶಕರ ಸಂಘ, ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಸಹಯೋಗದಲ್ಲಿ ಈ ಕಾರ್ಯಾಗಾರ ಏರ್ಪಡಿಸಿದೆ.
ಬೆಳಿಗ್ಗೆ 10ಕ್ಕೆ ಸಚಿವ ಸುರೇಶ್ ಕುಮಾರ್ ಅವರಿಂದ ಉದ್ಘಾಟನೆ, ಫೆಡರೇಷನ್ ಆಫ್ ಇಂಡಿಯನ್ ಪಬ್ಲಿಷರ್ಸ್ ಅಧ್ಯಕ್ಷ ಆನಂದ ಭೂಷಣ್ ಅವರಿಂದ ಆಶಯ ಭಾಷಣ, ಅತಿಥಿಗಳು: ಗ್ರಂಥಾಲಯ ಇಲಾಖೆ ನಿರ್ದೇಶಕ ಎಸ್.ವಿ. ಹೊಂಡದಕೇರಿ, ಕರ್ನಾಟಕ ಪ್ರಕಾಶಕರ ಸಂಘದ ಅಧ್ಯಕ್ಷ ರಮಾಕಾಂತ್ ಜೋಶಿ. ಅಧ್ಯಕ್ಷತೆ: ಪ್ರೊ. ಎಚ್.ಆರ್. ದಾಸೇಗೌಡ. ಬೆಳಿಗ್ಗೆ 11.30ರಿಂದ ಮೊದಲ ಗೋಷ್ಠಿ:
ಭಾರತೀಯ ಕಾಪಿರೈಟ್ ಅಧಿನಿಯಮ 1957 ಕುರಿತು ವೈ.ಜಿ. ಮುರಳೀಧರ, ಕಾಪಿರೈಟ್ ಕಾಯ್ದೆ ಮತ್ತು ಪುಸ್ತಕೋದ್ಯಮ ಕುರಿತು ಎಚ್.ಶಿವಕುಮಾರ್, ಕಾಪಿರೈಟ್ ಕಾಯ್ದೆ ಮತ್ತು ಲೇಖಕ ಪ್ರಕಾಶಕರ ನಡುವಿನ ಒಪ್ಪಂದ ಕುರಿತು ವೆಂಕಟೇಶ ಕುಲಕರ್ಣಿ, ಕಾಪಿರೈಟ್ ಕಾಯ್ದೆ ಮತ್ತು ಗ್ರಂಥಾಲಯ ಇಲಾಖೆ ಕುರಿತು ಪಿ.ವೈ. ರಾಜೇಂದ್ರ ಕುಮಾರ್.
ಮಧ್ಯಾಹ್ನ 2.15ರಿಂದ ಎರಡನೇ ಗೋಷ್ಠಿ: ಕಾಪಿರೈಟ್ ಕಾಯ್ದೆ, ಕೆಲ ಕೇಸ್ಸ್ಟಡಿಗಳೊಂದಿಗೆ ವಕೀಲ ರವಿಪ್ರಕಾಶ್ ಅವರಿಂದ ವಿವರಣೆ,
ಮಧ್ಯಾಹ್ನ 3.15ರಿಂದ ಸಮಾರೋಪ ಸಮಾರಂಭ, ಅಧ್ಯಕ್ಷತೆ: ಪ್ರೊ. ಎಸ್.ಜಿ. ಸಿದ್ದರಾಮಯ್ಯ. ಸ್ಥಳ: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಿ.ಪಿ. ವಾಡಿಯಾ ರಸ್ತೆ, ಬಸವನಗುಡಿ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.