`ಥೂ ಈ ಹಾಳಾದ ಕಾಮಗಾರಿ ಯಾವಾಗ ಮುಗಿಯುತ್ತೊ?~ ಎಂದು ಗೊಣಗುತ್ತಾ ಐವತ್ತೈದು ವರ್ಷದ ಕುಮಾರಣ್ಣ ಮೂಗಿನ ಮೇಲೆ ಕರವಸ್ತ್ರ ಇಟ್ಟುಕೊಂಡು ರಸ್ತೆ ದಾಟುತ್ತಿದ್ದದ್ದು ಸಿಎನ್ಆರ್.ರಾವ್ ವೃತ್ತದಲ್ಲಿ. ಇಲ್ಲಿ ನಡೆಯುತ್ತಿರುವ ಅಂಡರ್ಪಾಸ್ ಕಾಮಗಾರಿಯಿಂದ ಕುಮಾರಣ್ಣನಂತೆಯೇ ಬೇಸತ್ತವರು ಹಲವರು.

ಟಾಟಾ ಇನ್ಸ್ಟಿಟ್ಯೂಟ್ ದಾಟಿ ಯಶವಂತಪುರದ ಕಡೆಗೆ ಸಾಗಬೇಕಾದ ಬಸ್ಸುಗಳು ಪಥ ಬದಲಿಸಿದ್ದೇ ಮಲ್ಲೇಶ್ವರದ ಕೆಲವು ಗಲ್ಲಿಗಳಲ್ಲಿ ಟ್ರಾಫಿಕ್ ಜಾಮ್. ಆ ಹಾದಿಯಲ್ಲಿ ವರ್ಷಗಳಿಂದ ಫುಟ್ಪಾತ್ ಮೇಲೆಯೇ ಪಾನಿಪೂರಿ, ಹಣ್ಣಂಗಡಿ ಇಟ್ಟುಕೊಂಡವರು ಗ್ರಾಹಕರ ಸಂಖ್ಯೆ ಇಳಿಮುಖವಾದ ಬೇಸರದಲ್ಲಿದ್ದಾರೆ.

ಮೆಚ್ಚಿನ ನಾಯಿ ಹಿಡಿದುಕೊಂಡು ರಸ್ತೆಗಿಳಿದು ಸಂಜೆ ವಾಕಿಂಗ್ ಮಾಡುವವರೂ ಈಗ ಮನೆಯ ಹೊರಗೆ ಕಾಲಿಡಲು ಹಿಂದೇಟು ಹಾಕುತ್ತಿದ್ದಾರೆ. ಎರಡೂವರೆ ವರ್ಷದ ಹಿಂದೆ ಶುರುವಾದ ವಾಹನಗಳ ಗಿಜಿಗಿಜಿ ಇನ್ನೂ ತಗ್ಗಿಲ್ಲ. ಇಂದು ಸರಿಹೋದೀತು, ನಾಳೆ ಸರಿಹೋದೀತು ಎಂಬ ನಿರೀಕ್ಷೆ ಹಾಗೆಯೇ ಉಳಿದುಬಿಟ್ಟಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಈ ಕಾಮಗಾರಿ ಹತ್ತು ತಿಂಗಳಲ್ಲಿ ಮುಗಿಯಬೇಕಿತ್ತು. ಜನವರಿ 21, 2010ರಲ್ಲಿ ಆರಂಭವಾಗಿದ್ದ ಕಾಮಗಾರಿ ಇನ್ನೂ ಮುಗಿದಿಲ್ಲ. ಈ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರಿಗೆ ನಿತ್ಯ ನರಕಯಾತನೆ.

ವಾಹನಗಳ ದೂಳೂ ವಿಪರೀತವಾಗಿದೆ. ಸಿ.ಎನ್.ಆರ್. ರಾವ್ ಸರ್ಕಲ್ನಿಂದ ಶಿವಾಜಿನಗರ, ಮೆಜೆಸ್ಟಿಕ್ ಹಾಗೂ ನೆಲಮಂಗಲ ಕಡೆ ಹೋಗುವ ಪ್ರಯಾಣಿಕರು ಪಾಲಿಕೆಗೆ ಹಿಡಿಶಾಪ ಹಾಕುತ್ತಿದ್ದಾರೆ.

`ನನ್ನ ಮನೆ ದಿವಾನರಪಾಳ್ಯದಲ್ಲಿದೆ. ಮಲ್ಲೇಶ್ವರಂನಲ್ಲಿರುವ ಕಾಲೇಜಿಗೆ ಬೆಳಿಗ್ಗೆ ಎಂಟಕ್ಕೆ ಮನೆಯಿಂದ ಹೊರಡುತ್ತೇನೆ. ಆದರೆ ಸಿ.ಎನ್.ಆರ್. ರಾವ್ ಸರ್ಕಲ್ ಹತ್ತಿರ ಸಂಚಾರ ದಟ್ಟಣೆಯಿಂದ ಸುಮಾರು ಅರ್ಧ ಗಂಟೆಯಷ್ಟು ತಡವಾಗುತ್ತದೆ. ಕಾಲೇಜಿಗೂ ತಡವಾಗಿ ಹೋಗುವಂತಾಗಿದೆ. ಎಷ್ಟು ಬೇಗ ಕಾಮಗಾರಿ ಪೂರ್ಣಗೊಳ್ಳುತ್ತದೋ ಎಂದು ಕಾಯುತ್ತಿದ್ದೇವೆ~ ಎನ್ನುತ್ತಾನೆ ಪಿಯುಸಿ ವಿದ್ಯಾರ್ಥಿ ರಾಜೀವ್.

`ಕೆಲಸಕ್ಕೆಂದು ನಗರದ ಅನೇಕ ಬಡಾವಣೆಗಳಿಗೆ ಹೋಗುತ್ತೇನೆ. ನನ್ನ ಮನೆ ಇರುವುದು ಪೀಣ್ಯ 2ನೇ ಹಂತದಲ್ಲಿ, ಸಿಎನ್ಆರ್ ರಾವ್ ವೃತ್ತದ ಮೂಲಕ ಕೆ.ಆರ್. ಮಾರುಕಟ್ಟೆ, ಶಿವಾಜಿನಗರ ಸೇರಿದಂತೆ ಮತ್ತಿತರೆ ನಗರಗಳಿಗೆ ಹೋಗಬೇಕು.

ಅಂಡರ್ಪಾಸ್ ಕಾಮಗಾರಿ ವಿಳಂಬವಾಗಿರುವುದರಿಂದ ರಸ್ತೆ ಕಿರಿದಾಗಿದ್ದು, ಗಂಟೆಗಟ್ಟಲೆ ಸಂಚಾರ ದಟ್ಟಣೆಯಾಗುತ್ತದೆ. ಇದರಿಂದ ಎಷ್ಟೋ ಬಾರಿ ಕೆಲಸಕ್ಕೆ ತಡವಾಗಿ ಹೋಗಿದ್ದೇನೆ, ಮಾಲೀಕರ ಸಿಟ್ಟಿಗೆ ಗುರಿಯಾಗಬೇಕಾದ ಸನ್ನಿವೇಶಗಳು ನಡೆದಿವೆ ಎನ್ನುತ್ತಾರೆ ಎಲೆಕ್ಟ್ರೀಷಿಯನ್ ಗಿರಿಧರ್.

ಮಾಧವ ಹೈಟೆಕ್-ಇಸಿಸಿಐ ಸಂಸ್ಥೆಯು ಈ ಕಾಮಗಾರಿಯನ್ನು ಗುತ್ತಿಗೆ ಪಡೆದುಕೊಂಡಿದೆ. 30.14 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಅಂಡರ್ಪಾಸ್ ಕಾಮಗಾರಿ ವಿಳಂಬದಿಂದ ಸರ್ಕಲ್ ಬಳಿ ಬೆಳಿಗ್ಗೆ ಮತ್ತು ಸಂಜೆ ಗಂಟೆ ಗಟ್ಟಲೇ ಸಂಚಾರ ದಟ್ಟಣೆಯಾಗುತ್ತದೆ.

ಕೆಲ ಸಂದರ್ಭದಲ್ಲಿ ವಿಐಪಿ ವಾಹನಗಳು ಈ ಮಾರ್ಗದಲ್ಲಿ ಬಂದಾಗ ಸಾರ್ವಜನಿಕರ ವಾಹನಗಳನ್ನು ನಿಲ್ಲಿಸಿ, ಅವರಿಗೆ ಅನುವು ಮಾಡಿಕೊಡಬೇಕು, ಜೊತೆಗೆ ರಸ್ತೆ ಕಿರಿದಾಗಿರುವುದರಿಂದ ಎರಡು ಬದಿ ವಾಹನಗಳು ಒಟ್ಟಿಗೆ ಸಂಚರಿಸಲು ತೊಂದರೆಯಾಗುತ್ತದೆ. ಅಂಥ ಸಂದರ್ಭದಲ್ಲಿ ಸಂಚಾರ ದಟ್ಟಣೆ ಹೆಚ್ಚಾಗುತ್ತದೆ.

`ಬೆಳಿಗ್ಗೆಯಿಂದ ರಾತ್ರಿವರೆಗೆ ದೂಳನ್ನು ಕುಡಿಯಬೇಕಾದ ಸ್ಥಿತಿ ನಮ್ಮದು~ ನಾಲ್ಕು ಮಂದಿ ಸಂಚಾರಿ ಪೊಲೀಸರು ಟ್ರಾಫಿಕ್ ನಿಬಾಯಿಸಬೇಕು ಎನ್ನುತ್ತಾರೆ ಸಹಾಯಕ ಸಬ್ಇನ್ಸ್ಪೆಕ್ಟರ್ ಮಧು (ಹೆಸರು ಬದಲಿಸಲಾಗಿದೆ).

ಈಗಾಗಲೇ ನಗರದಲ್ಲಿ ಮೆಟ್ರೊ ಕಾಮಗಾರಿ ನಡೆಯುತ್ತಿದ್ದು, ಅಭಿವೃದ್ಧಿ ಹೆಸರಿನಲ್ಲಿ ಪಾಲಿಕೆಯ ಅನೇಕ ಕಾಮಗಾರಿಗಳು ನಡೆಯುತ್ತಿವೆ. ಒಂದು ಕಾಮಗಾರಿ ಮುಗಿದ ನಂತರ ಮತ್ತೊಂದು ಕಾಮಗಾರಿ ಆರಂಭವಾಗುತ್ತವೆ. ಸಕಾಲದಲ್ಲಿ ಕಾಮಗಾರಿ ಪೂರ್ಣಗೊಳ್ಳದೆ ಅನೇಕ ಸಮಸ್ಯೆಗಳಿಗೂ ದಾರಿಮಾಡಿಕೊಡುತ್ತವೆ. ತೊಂದರೆಗೆ ಒಳಗಾಗುವುದು ಮಾತ್ರ ಅಸಹಾಯಕ ಸಾರ್ವಜನಿಕರು.

ಭಕ್ತರ ಸಂಖ್ಯೆ ಕ್ಷೀಣ
ಕಾಮಗಾರಿ ಬಿಸಿ ಇಲ್ಲಿನ ಸರ್ಕಲ್ ಮಾರಮ್ಮ ದೇವಸ್ಥಾನದ ಭಕ್ತರಿಗೂ ತಟ್ಟಿದೆ. ಕಾಮಗಾರಿ ಆರಂಭವಾದಾಗಿನಿಂದ ಸರ್ಕಲ್ ಮಾರಮ್ಮ ವೃತ್ತದ ರಸ್ತೆಯನ್ನು ಮುಚ್ಚಲಾಗಿತ್ತು. ಹಾಗಾಗಿ ಮಹಾಲಕ್ಷ್ಮಿ ಬಡಾವಣೆ, ಗೊರಗುಂಟೆಪಾಳ್ಯ ಹಾಗೂ ನೆಲಮಂಗಲದಿಂದ ಬರುವ ಭಕ್ತರ ಸಂಖ್ಯೆ ಕಡಿಮೆಯಾಗಿದೆ.

ಈಗ ಒನ್ವೇ ಮಾಡಿರುವುದರಿಂದ ಬರುವ ಭಕ್ತರು ಮೇಲಿನ ನಗರಗಳಿಗೆ ಹೋಗಲು ಮಲ್ಲೇಶ್ವರ 8ನೇ ಮುಖ್ಯ ರಸ್ತೆ ಸುತ್ತಿಕೊಂಡು ಹೋಗಬೇಕಾದ ಅನಿವಾರ್ಯತೆ ಇದೆ. ಕಾಮಗಾರಿ ಕಾರ್ಯ ಶೀಘ್ರಗೊಳಿಸಿ ಸಮಸ್ಯೆ ಬಗೆಹರಿಸಬೇಕು ಎನ್ನುತ್ತಾರೆ ಮಾರಮ್ಮ ದೇವಸ್ಥಾನದ ಅರ್ಚಕ ರಾಮಮೂರ್ತಿ.

ಆರು ತಿಂಗಳಲ್ಲಿ ಪೂರ್ಣ

ಹತ್ತು ತಿಂಗಳಲ್ಲಿ ಮುಗಿಯಬೇಕಿದ್ದ ಅಂಡರ್ಪಾಸ್ ಕಾಮಗಾರಿ ನಿಧಾನಗತಿಯಲ್ಲಿ ಸಾಗಲು ಹಲವು ಕಾರಣಗಳಿವೆ. ಜನವರಿ 2011ರಲ್ಲಿ ಟ್ರಾಫಿಕ್ ಡೈವರ್ಷನ್ಗೆ ಅವಕಾಶ ಸಿಕ್ಕಿತು ಹಾಗೂ ರಸ್ತೆ ಪಕ್ಕದ ಜಾಗವನ್ನು ವಶಪಡಿಸಿಕೊಳ್ಳುವುದು ತಡವಾಯಿತು. ಹಾಗಾಗಿ ಆರಂಭದಲ್ಲಿ ಕಾಮಗಾರಿ ವಿಳಂಬವಾಯಿತು ಎಂದು ಪ್ರತಿಕ್ರಿಯಿಸುತ್ತಾರೆ ಬಿಬಿಎಂಪಿ ಮೂಲ ಸೌಕರ್ಯ ವಿಭಾಗದ ಮುಖ್ಯ ಎಂಜಿನಿಯರ್ ಎಸ್. ಸೋಮಶೇಖರ್.

ಜೊತೆಗೆ ಗುತ್ತಿಗೆದಾರರಿಂದ ಕಾಮಗಾರಿ ತಡವಾಯಿತು. ಈಗಾಗಲೇ ಅವರಿಗೆ ನೋಟೀಸ್ ಜಾರಿ ಮಾಡಿದ್ದು, ಕ್ರಮವನ್ನೂ ಕೈಗೊಳ್ಳಲಾಗಿದೆ. ಇನ್ನು ಆರು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವ ಭರವಸೆಯನ್ನು ಇಸಿಸಿಐ ಸಂಸ್ಥೆ ನೀಡಿದೆ. ಉತ್ತರ ದಿಕ್ಕಿನಲ್ಲಿ ಗೋಡೆಗಳ (ರಿಟೈನಿಂಗ್ ವಾಲ್) ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿ ವೇಗವಾಗಿ ಆಗುತ್ತಿದೆ ಎನ್ನುತ್ತಾರೆ ಸೋಮಶೇಖರ್.

ಪೋಸ್ಟ್ ಆಫೀಸ್ ಸ್ಥಿತಿ

ದಿನನಿತ್ಯ ಕೆಲಸ ಮಾಡಲಾಗದಷ್ಟು ದೂಳು ಟೇಬಲ್ ಮೇಲಿರುತ್ತದೆ. ಗ್ರಾಹಕರ ವಾಹನಗಳ ನಿಲುಗಡೆಗೆ ಜಾಗವಿಲ್ಲ, `ದೂಳಿನ ಅಲರ್ಜಿಯಿಂದ ಆರೋಗ್ಯ ಹದಗೆಟ್ಟು ವಾರಗಟ್ಟಲೆ ರಜೆ ಹಾಕಿ ಸುಧಾರಿಸಿಕೊಂಡೆ~ ಎಂದು ಹೇಳುವ ಸಿಎನ್ಆರ್.ರಾವ್ ವೃತ್ತದಲ್ಲಿರುವ ಫೋಸ್ಟ್ ಆಫೀಸ್ ಸಿಬ್ಬಂದಿ ಮಾತಿನಲ್ಲಿ ಅರ್ಥವಿತ್ತು.

ಜನವರಿ 2010ರಿಂದ ಆರಂಭವಾಗಿರುವ ಕಾಮಗಾರಿ ವರ್ಷಗಟ್ಟಲೆ ಸಮಯ ತೆಗೆದುಕೊಂಡಿದೆ. ಇಲ್ಲಿರುವ ಅಂಚೆ ಕಚೇರಿಗೆ ನಿತ್ಯ ನೂರಾರು ಮಂದಿ ಬರುತ್ತಾರೆ. ಅವರಲ್ಲಿ ಬಹುತೇಕರು ವಯಸ್ಸಾದವರು. ನಿವೃತ್ತ ನೌಕರರು. ಅವರಿಗೆ ಸರಿಯಾದ ಪಾದಾಚಾರಿ ಮಾರ್ಗವಿಲ್ಲ, ಜೊತೆಗೆ ಡಾಂಬರು ರಸ್ತೆಯೂ ಇಲ್ಲ. ಇದರಿಂದಾಗಿ ಅನೇಕ ತೊಂದರೆ ಅನುಭವಿಸುವಂತಾಗಿದೆ ಎಂದು ಹೇಳುತ್ತಾರೆ ಇಲ್ಲಿನ ಸಿಬ್ಬಂದಿ.

ಕಾಮಗಾರಿ ಮಾಲಿನ್ಯದಿಂದ ಅಂಚೆ ಕಚೇರಿ ಮುಂದಿನ ಉದ್ಯಾನವೂ ಹಾಳಾಯಿತು. ಒನ್ ವೇ ಆಗಿರುವುದರಿಂದ ಮಲ್ಲೇಶ್ವರಂ ಮಾರ್ಗವಾಗಿ ಬರುವ ಸಿಬ್ಬಂದಿ ಸ್ಯಾಂಕಿ ರಸ್ತೆಯಿಂದ ಬರಬೇಕು, ಮಳೆಗಾಲದಲ್ಲಂತೂ ವಿಪರೀತ ತೊಂದರೆ. ಹೀಗೆ ಸಮಸ್ಯೆಗಳ ಮೂಟೆಯನ್ನೇ ಎದುರಿಗಿಡುತ್ತಾರೆ ಅವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.