ಬೀರೂರು: ಪಟ್ಟಣದಲ್ಲಿ ನಡೆದಿರುವ ಯುಜಿಡಿ ಕಾಮಗಾರಿಯಲ್ಲಿ ಕಳಪೆ ಮರಳು ಬಳಸಿದ್ದು ಕಾಮಗಾರಿಯ ಗುಣ ಮಟ್ಟ ನಿಗದಿತ ಮಟ್ಟದಲ್ಲಿ ಇಲ್ಲ ಎಂದು ಆರೋಪಿಸಿ ಸಾರ್ವಜನಿಕರು ಮಂಗಳ ವಾರ ಕಾಮಗಾರಿಗೆ ತಡೆ ಒಡ್ಡಿದರು.

ಪಟ್ಟಣದ ಶ್ರೀರಾಮಪುರಂ ಬಡಾವಣೆಯ ಲಿಂಗ್ಲಾಪುರದ ಮಹದೇವಪ್ಪ ರಸ್ತೆ ಮತ್ತು ಅಂಜುಮನ್ ಮೊಹಲ್ಲಾ ಬಳಿ ಕಳಪೆ ಮರಳು ಬಳಸಿ ಕಾಮಗಾರಿ ನಡೆಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯರು ಸಂಬಂಧಿತ ಗುತ್ತಿಗೆದಾರ ಮತ್ತು ಎಂಜಿನಿಯರ್ ಬರುವವರೆಗೆ ಕೆಲಸ ನಿಲ್ಲಿಸುವಂತೆ ಸೂಚಿಸಿದರು.

ಬಳಿಕ ಸ್ಥಳಕ್ಕೆ ಭೇಟಿ ನೀಡಿದ ಪುರಸಭೆ ಮುಖ್ಯಾಧಿಕಾರಿ ಪರಿಶೀಲನೆ ನಡೆಸಿ ಸ್ಥಳದಿಂದ ತೆರಳಿದರು. ಸಂಬಂಧಿತ ಎಂಜಿನಿಯರ್ ಅವರನ್ನು ‘ಪ್ರಜಾವಾಣಿ’ ದೂರವಾಣಿ ಮೂಲಕ ಸಂಪರ್ಕಿಸಿದಾಗ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುವುದಾಗಿ ತಿಳಿಸಿದರು.

ಕಾಮಗಾರಿ ಕುರಿತು ಹಲವು ದೂರು ಹೇಳಿದ ಸ್ಥಳೀಯರು, ‘ಕ್ಯೂರಿಂಗ್ ಸರಿಯಾಗಿ ಮಾಡುತ್ತಿಲ್ಲ, ಒಂದೇ ದಿನದಲ್ಲಿ ಕಾಮಗಾರಿ ಮುಗಿಸಿ ಗುಂಡಿ ಮುಚ್ಚಿ ಹೋಗುತ್ತಿದ್ದಾರೆ. ಕಳಪೆ ಮರಳಿನಂತಹ ಕಳಪೆ ಸಾಮಗ್ರಿ ಬಳಸಬೇಡಿ ಎಂದರೆ ಅದನ್ನೇ ಬಳಸಿ ಕೆಲಸ ಮುಂದುವ ರಿಸುತ್ತಿದ್ದಾರೆ. ಸ್ಥಳೀಯ ವಾರ್ಡ್ ಪ್ರತಿನಿಧಿಗಳು ಕಾಮಗಾರಿಯತ್ತ ತಲೆಯೇ ಹಾಕುವುದಿಲ್ಲ, ಸಂಬಂಧಿಸಿದ ಎಂಜಿನಿಯರ್ ಇಲ್ಲಿ ಬರದೆ ಕೆಲಸದ ಗುಣಮಟ್ಟ ಕುರಿತು ಗಮನ ಹರಿಸುತ್ತಿಲ್ಲ. ಖಾಸಗಿಯವರಿಗೆ ಸಿಗುವ ಒಳ್ಳೆಯ ಮರಳು ಸರ್ಕಾರದ ಕೆಲಸಗಳಿಗೆ ಸಿಗುವು ದಿಲ್ಲವೇ, ಮುಂದಿನ ದಿನಗಳಲ್ಲಿ ಸರ್ಕಾರ ದ ಮೇಲಿನ ಹೊರೆ ಕಡಿಮೆ ಮಾಡುವ ನಿಟ್ಟಿನಲ್ಲಿ ಕೈಗೊಂಡಿರುವ ಶಾಶ್ವತ ಕಾಮಗಾರಿಯನ್ನು ಗುಣಮಟ್ಟದಲ್ಲಿ ನಿರ್ವಹಿಸಲಿ’ ಎನ್ನುವುದು ನಮ್ಮ ಒತ್ತಾಯ ಎಂದರು.

ನಂತರ ಸ್ಥಳಕ್ಕೆ ಭೇಟಿ ನೀಡಿದ ಎಂಜಿನಿಯರ್ ಮಾರುತಿ ಕಾಮಗಾರಿಗೆ ಬಳಸಿದ ಮರಳನ್ನು ಕಂಡು ಮಂಗಳ ವಾರ ನಿರ್ಮಿಸಿದ ಎರಡು ಮ್ಯಾನ್ ಹೋಲ್ಗಳನ್ನು ಬೇರೆ ಮರಳು ಬಳಸಿ ನಿರ್ಮಿಸುವಂತೆ ಮತ್ತು ಒಳ್ಳೆಯ ಮರಳು ಬಳಸುವವರೆಗೆ ಕಾಮಗಾರಿ ಸ್ಥಗಿತ ಗೊಳಿಸುವಂತೆ ಸೂಚಿಸಿದರು.

‘ಕಾಮಗಾರಿಯಲ್ಲಿ ಪೈಪ್ಗಳಿಂದ ಹಿಡಿದು ಎಲ್ಲ ಸಾಮಗ್ರಿಗಳಿಗೆ ಗುಣಮಟ್ಟ ಪರೀಕ್ಷೆ ನಡೆಸಿಯೇ ಬಳಸಲಾಗುತ್ತಿದೆ. ಇಂದಿನ ಘಟನೆ ನಿಜಕ್ಕೂ ತಲೆತಗ್ಗಿಸು ವಂತಹದು. ಕಾಮಗಾರಿಯ ಗುಣಮಟ್ಟ ಕ್ಕೆ ಆದ್ಯತೆ ನೀಡಿಯೇ ಮುಂದುವರಿ ಯುತ್ತೇವೆ. ಸಮಸ್ಯೆ ಎಂದರೆ ಗುಣ ಮಟ್ಟದ ಮರಳು ನಮ್ಮ ಕಾಮಗಾರಿಗೆ ದೊರೆಯುತ್ತಿಲ್ಲ.

ಮೂಡಿಗೆರೆಯಲ್ಲಿಯೂ ನಮಗೆ ಅಂದರೆ ಸರ್ಕಾರಿ ಕೆಲಸಗಳಿಗೆ ಮರಳು ಕೊಡುತ್ತಿಲ್ಲ, ಖಾಸಗಿಯವರು ಹೆಚ್ಚು ಹಣತೆತ್ತು ಮರಳು ತರುತ್ತಾರೆ. ನಮಗೆ ಮರಳು ಕೊಡಲು ಯಾರೂ ಮುಂದೆ ಬರುತ್ತಿಲ್ಲ. ಲೋಕೋಪಯೋಗಿ ಇಲಾಖೆಗೆ ನಮಗೆ ಅಗತ್ಯವಿರುವ ಮರಳು ಪಡೆಯಲು ಟೋಕನ್ ಕೊಡುವಂತೆ ಕೋರಿದರೂ ಪ್ರಯೋಜನವಾಗಿಲ್ಲ. ಇನ್ನು ಕಾಮಗಾರಿ ನಡೆಯುವಲ್ಲಿ ಸ್ಥಳೀಯರು ಬೇಗನೆ ಗುಂಡಿ ಮುಚ್ಚುವಂತೆ ಒತ್ತಾಯಿಸುವ ಸನ್ನಿವೇಶ ಇದೆ. ಕನಿಷ್ಠ 5ದಿನ ಕ್ಯೂರಿಂಗ್ ಆಗಬೇಕು. ಇಲ್ಲದಿದ್ದರೆ ಕೆಲಸ ನಿಲ್ಲುವುದು ಹೇಗೆ?, ಮ್ಯಾನ್ಹೋಲ್ಗಳ ಮೇಲೆ ಮುಚ್ಚಿದ ಗೋಣಿಚೀಲವನ್ನೂ ಒಯ್ಯುತ್ತಾರೆ. ಇದು ಸಮಜಾಯಿಷಿಯೇನೂ ಅಲ್ಲ, ಕಡೂರು–ಬೀರೂರು ಪಟ್ಟಣಗಳ ಭದ್ರಾ ಕುಡಿಯುವ ನೀರು ಪೂರೈಕೆ ಹೊಣೆಯೂ ಇದ್ದು ನಿತ್ಯ ಯುಜಿಡಿ ಕಾಮಗಾರಿ ಪರಿಶೀಲನೆ ಸಾಧ್ಯವಾಗುತ್ತಿಲ್ಲ.

ಅದಕ್ಕಾಗಿ ಕ್ವಾಲಿಟಿ ಇನ್ಸ್ಪೆಕ್ಟರ್ ನೇಮಿಸಲಾಗಿದೆ, ನಾನೂ ಪರಿಶೀಲನೆ ನಡೆಸಿ ಮುಂದಿನ ದಿನಗಳಲ್ಲಿ ದೂರು ಬಾರದಂತೆ ಕರ್ತವ್ಯ ನಿರ್ವಹಿಸುವುದಾಗಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.