ಮುಂಬೈ ಕಾಮಾಟಿಪುರದ ಕಿರಿದಾದ ಗಲ್ಲಿಗಳಲ್ಲಿ ಹಿಂದೆ ಗಿಜಿಗುಟ್ಟುವ ವಾತಾವರಣವಿತ್ತು. ಅಲ್ಲಿನ ವೇಶ್ಯಾಗೃಹಗಳ ಮಬ್ಬು ಬೆಳಕಿನಲ್ಲಿ ನಿತ್ಯವೂ ನೂರಾರು ಪುರುಷರ ಅಸ್ಪಷ್ಟ ಆಕೃತಿಗಳು ಕಾಣುತ್ತಿದ್ದವು. ಏನಿಲ್ಲವೆಂದರೂ ಸುಮಾರು 50,000 ಹೆಣ್ಣುಮಕ್ಕಳು ಅಲ್ಲಿ ವೇಶ್ಯಾವೃತ್ತಿಯಲ್ಲಿ ತೊಡಗಿದ್ದರು. ಇದು ತೊಂಬತ್ತರ ದಶಕದ ಚಿತ್ರಣ.

ಆದರೆ ಈಗ ಕಾಮಾಟಿಪುರದಲ್ಲಿರುವ ಲೈಂಗಿಕ ಕಾರ್ಯಕರ್ತೆಯರ ಸಂಖ್ಯೆ 5,000ಕ್ಕಿಂತಲೂ ಕಡಿಮೆ. ಓಣಿಯ ಕಿರುದಾರಿಯಿಂದ ಈಚೆ ಬಂದಿರುವ ಹಲವರು ಮಧ್ಯವರ್ತಿಗಳ ಹಂಗಿಲ್ಲದೆಯೇ ಸ್ವತಂತ್ರವಾಗಿ ಹಣ ಸಂಪಾದನೆಯಲ್ಲಿ ತೊಡಗಿದ್ದಾರೆ. ಈಗ ಇವರ ಕೈಗಳಲ್ಲಿ ಮೊಬೈಲ್ ರಿಂಗಣಿಸುತ್ತಿದೆ, ಸಂದೇಶಗಳು ಹರಿದಾಡುತ್ತಿವೆ. ವೃತ್ತಿಗೆ ಹೈಟೆಕ್ ಸ್ವರೂಪ ಬಂದಿದೆ.

ಹಿಂದೆ ಕಾಮಾಟಿಪುರದಂಥ ಕೆಲವೊಂದು ನಿರ್ದಿಷ್ಟ ಪ್ರದೇಶಗಳಲ್ಲಿ ಮಾತ್ರವೇ ವೇಶ್ಯಾವಾಟಿಕೆ ನಡೆಯುತ್ತಿತ್ತು. ಆದರೆ ಈಗ ಮೊಬೈಲ್ ಮಾಯೆಯಿಂದ ಈ ದಂಧೆ ಎಲ್ಲೆಡೆ ಗುಪ್ತವಾಗಿ ನಡೆಯುತ್ತಿದೆ. ಹಾಗಾಗಿಯೇ ಅನೇಕ ವೇಶ್ಯಾಗೃಹಗಳ ಬಾಗಿಲು ಮುಚ್ಚಿವೆ. ಸ್ವತಂತ್ರ ಗಳಿಕೆ ಆರ್ಥಿಕ ಸ್ವಾವಲಂಬನೆಗೆ ದಾರಿ ಮಾಡಿಕೊಟ್ಟಿದೆ. ವಿಷಯ ಇಷ್ಟೇ ಆಗಿದ್ದರೆ ಸಮಸ್ಯೆ ಇರುತ್ತಿರಲಿಲ್ಲ. ಆದರೆ ಈ ಬೆಳವಣಿಗೆಯು ಭಾರತದಲ್ಲಿ ದಶಕಗಳ ಏಡ್ಸ್ ನಿಯಂತ್ರಣ ಯಶೋಗಾಥೆಗಳಿಗೆ ದೊಡ್ಡ ಆತಂಕ ತಂದೊಡ್ಡಿದೆ ಎಂದು ಅಧ್ಯಯನಗಳು ಹೇಳುತ್ತವೆ.

`ವೇಶ್ಯಾಗೃಹಗಳಿದ್ದ ಸ್ಥಳಗಳು ಇಂದು ಎಚ್ಐವಿ ನಿಯಂತ್ರಣ ಕೇಂದ್ರಗಳಾಗಿ ಬದಲಾಗಿವೆ. ಆದರೆ ಆಧುನಿಕ ಸಂವಹನ ಸಾಧನವಾಗಿರುವ ಮೊಬೈಲ್ನಿಂದಾಗಿ ಈ ದಂಧೆ ಎಲ್ಲೆಂದರಲ್ಲಿ ನಡೆಯುತ್ತಿದೆ. ಪತ್ತೆ ಮಾಡುವುದೂ ಕಷ್ಟ. ಹೀಗಾಗಿ ಏಡ್ಸ್ ನಿಯಂತ್ರಣ ಕಾರ್ಯಕ್ಕೆ ಹಿನ್ನಡೆಯಾಗುತ್ತಿದೆ' ಎನ್ನುತ್ತಾರೆ ಜನಸಂಖ್ಯಾ ನಿಯಂತ್ರಣ ಮಂಡಳಿಯ ಸದಸ್ಯ ಸಗುರ್ತಿ ನಿರಂಜನ್.

`ಸರ್ಕಾರಕ್ಕೆ ಹಾಗೂ ಸುರಕ್ಷಿತ ಲೈಂಗಿಕತೆ ಕುರಿತು ಸಲಹೆ ನೀಡುವವರಿಗೆ ಎಲ್ಲಿ ದಂಧೆ ನಡೆಯುತ್ತಿದೆ ಎಂದು ಪತ್ತೆ ಹಚ್ಚುವುದು ಕಷ್ಟವಾಗಿದೆ. ಸುರಕ್ಷಿತ ಲೈಂಗಿಕತೆ ಕುರಿತು ಸರಿಯಾದ ತಿಳಿವಳಿಕೆಯ ಕೊರತೆಯಿಂದ ದಂಧೆ ನಡೆಸುವವರು ಹಾಗೂ ಗಿರಾಕಿಗಳು ಮುಂದೊಂದು ದಿನ ಭಾರಿ ಬೆಲೆ ತೆರಬೇಕಾದೀತು' ಎಂದೂ ಏಡ್ಸ್ ನಿಯಂತ್ರಣ ತಜ್ಞರು ಎಚ್ಚರಿಕೆ ನೀಡುತ್ತಾರೆ.

ವೇಶ್ಯಾಗೃಹಗಳಿಗೆ ಹೋಲಿಸಿದರೆ ಮೊಬೈಲ್ ಫೋನ್ ಮೂಲಕ ಸ್ವತಂತ್ರವಾಗಿ ವ್ಯವಹಾರ ಕುದುರಿಸುವ ಲೈಂಗಿಕ ಕಾರ್ಯಕರ್ತೆಯರು ಎಚ್ಐವಿ ಸೋಂಕಿಗೆ ತುತ್ತಾಗುವ ಅಪಾಯ ಹೆಚ್ಚು ಎಂದು ಅಧ್ಯಯನಗಳು ಹೇಳಿವೆ. ಕಾರಣ ಇಷ್ಟೆ. ಇವರಲ್ಲಿ ಸುರಕ್ಷಿತ ಲೈಂಗಿಕತೆಯ ಬಗ್ಗೆ ಅಷ್ಟಾಗಿ ಅರಿವು ಇರುವುದಿಲ್ಲ.

ಭಾರತದಲ್ಲಿ ಏಡ್ಸ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಅಚ್ಚರಿಯ ಯಶೋಗಾಥೆಗಳಿವೆ. ಹಾಗೆ ನೋಡಿದರೆ 1986ರ ವರೆಗೂ ಇಲ್ಲಿ ಇದು ಕಾಣಿಸಿಕೊಂಡಿರಲಿಲ್ಲ. ಆದರೂ ಅನೇಕರು ` ದೇಶದಲ್ಲಿ ಶೀಘ್ರದಲ್ಲಿಯೇ ಈ ಸೋಂಕು ಹರಡಲಿದೆ' ಎಂದು ಎಚ್ಚರಿಕೆ ನೀಡಿದ್ದರು. `2010ರೊಳಗೆ ಭಾರತದಲ್ಲಿ ಸುಮಾರು 2.5 ಕೋಟಿ ಎಚ್ಐವಿ ಪ್ರಕರಣಗಳು ದಾಖಲಾಗುತ್ತವೆ' ಎಂದು ಕೆಂದ್ರ ಗುಪ್ತಚರ ಸಂಸ್ಥೆಯ ರಾಷ್ಟ್ರೀಯ ಗುಪ್ತಚರ ಮಂಡಳಿಯು ಸೂಚನೆ ನೀಡಿತ್ತು. ಆದರೆ ಹಾಗೇನೂ ಆಗಲಿಲ್ಲ. ಭಾರತದಲ್ಲಿ ಈಗ ಸುಮಾರು 15 ಲಕ್ಷ ಎಚ್ಐವಿ ಪ್ರಕರಣಗಳು ದಾಖಲಾಗಿವೆ.

ಇತರ ಅಭಿವೃದ್ಧಿಶೀಲ ದೇಶಗಳಿಗೆ ಹೋಲಿಸಿದರೆ ನಮ್ಮಲ್ಲಿ ಲೈಂಗಿಕ ಕಾರ್ಯಕರ್ತೆಯರು ಸೀಮಿತ ಸಂಗಾತಿಗಳನ್ನು ಹೊಂದಿದ್ದಾರೆ. ಹಾಗಾಗಿಯೇ ಎಚ್ಐವಿ ಸೋಂಕು ಇಲ್ಲಿ ಅತಿಯಾಗಿ ಹರಡಿಲ್ಲ. ಅದೂ ಅಲ್ಲದೇ, ಏಡ್ಸ್ ನಿಯಂತ್ರಣದಲ್ಲಿ ವಿಶ್ವ ಬ್ಯಾಂಕ್ ಹಾಗೂ ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಪ್ರತಿಷ್ಠಾನದ ಅವಿರತ ಪ್ರಯತ್ನ ಕೂಡ ಅಷ್ಟೇ ಗಮನಾರ್ಹವಾದುದು. `ವೇಶ್ಯಾವೃತ್ತಿ ಸಂಕೀರ್ಣ ಆಯಾಮ ಪಡೆದುಕೊಂಡಿರುವುದರಿಂದ ಅದನ್ನು ಪತ್ತೆ ಹಚ್ಚುವುದೇ ಕಷ್ಟವಾಗಿದೆ. ಆದ ಕಾರಣ ಎಚ್ಐವಿ ಸೋಂಕಿತರ ಸಂಖ್ಯೆ ಯಾವ ಮಟ್ಟದಲ್ಲಿ ಹೆಚ್ಚಬಹುದು ಎಂದು ಈಗಲೇ ಹೇಳಲಿಕ್ಕಾಗದು `ಎನ್ನುತ್ತಾರೆ ತಜ್ಞರು.

`ಈಗ ಲೈಂಗಿಕ ಕಾರ್ಯಕರ್ತೆಯರ ಜಾಲ ವ್ಯಾಪಕವಾಗಿದೆ. ಅವರನ್ನು ಸಂಪರ್ಕಿಸುವುದು ಕಷ್ಟವಾಗಿದೆ. ನಿಜಕ್ಕೂ ಇದೊಂದು ಹೊಸ ಸವಾಲು. ಹಾಗಾಗಿ ನಮ್ಮ ಕಾರ್ಯತಂತ್ರಗಳು ಕೂಡ ಬದಲಾಗಬೇಕಾಗುತ್ತವೆ' ಎನ್ನುತ್ತಾರೆ ಭಾರತದಲ್ಲಿ ಗೇಟ್ಸ್ ಪ್ರತಿಷ್ಠಾನದ ನಿರ್ದೇಶನಕರಾಗಿದ್ದ ಅಶೋಕ್ ಅಲೆಕ್ಸಾಂಡರ್.

ಕಡಿಮೆಯಾದ ಸೋಂಕು...
`ದೆಹಲಿಯ ಜಿ.ಬಿ ರಸ್ತೆಯಲ್ಲಿರುವ ಕೆಂಪು ದೀಪ ಪ್ರದೇಶದಲ್ಲಿ 2,000 ಲೈಂಗಿಕ ಕಾರ್ಯಕರ್ತೆಯರು ಇದ್ದಾರೆ. ನಿತ್ಯವೂ ಇಲ್ಲಿಗೆ ಸುಮಾರು 8,000 ಪುರುಷರು ಭೇಟಿ ನೀಡುತ್ತಾರೆ' ಎಂದು 2009ರ ಸರ್ಕಾರಿ ಸಮೀಕ್ಷೆಯಲ್ಲಿ ಹೇಳಲಾಗಿತ್ತು. `ಪ್ರತಿ ತಿಂಗಳೂ ಸುಮಾರು 3,20,000 ಕಾಂಡೋಮ್ಗಳನ್ನು ಉಚಿತವಾಗಿ ನೀಡಿ, ಲೈಂಗಿಕ ಕಾರ್ಯಕರ್ತೆಯರಿಗೆ ತಿಳಿವಳಿಕೆ ನೀಡಿದರೆ ಏಡ್ಸ್ ಸೋಂಕು ಗಣನೀಯವಾಗಿ ಕಡಿಮೆಯಾಗುತ್ತದೆ' ಎಂದೂ ಸರ್ಕಾರ ಹೇಳಿತ್ತು.

ಸುರಕ್ಷಿತ ಲೈಂಗಿಕತೆ ಬಗ್ಗೆ ಜಾಗೃತಿ ಮೂಡಿಸಲು ದುಬಾರಿಯಾದ ಹಾಗೂ ಪರಿಣಾಮಕಾರಿಯಲ್ಲದ ಕಾರ್ಯತಂತ್ರದ ಬದಲು ಕೆಲವೊಂದು ಸರಳ ಮಾರ್ಗ ಅನುಸರಿಸಬಹುದು. ದೆಹಲಿಯ ಜಿ.ಬಿ ಯಲ್ಲಿ ಇದಕ್ಕೆ ನಿದರ್ಶನಗಳು ಸಿಗುತ್ತವೆ. `ಅಪಾಯಕ್ಕೆ ಸಿಲುಕಬೇಡಿ, ಕಾಂಡೋಮ್ ಬಳಸಿ', `ಕಾಂಡೋಮ್ ಇದ್ದರೆ ಅಪಾಯ ಇಲ್ಲ' ಎಂಬ ಸಂದೇಶಗಳನ್ನು ಹೊತ್ತ ಗೋಡೆಚಿತ್ರಗಳು ಇಲ್ಲಿ ರಾರಾಜಿಸುತ್ತಿವೆ.

ಲೈಂಗಿಕ ಕಾರ್ಯಕರ್ತೆಯರ ಬಳಿಗೆ ಬರುವ ಪುರುಷರಲ್ಲಿ ಕಾಂಡೋಮ್ ಬಳಕೆ ಹೆಚ್ಚುತ್ತಿದೆ ಎನ್ನುತ್ತವೆ ಅಧ್ಯಯನಗಳು. `ಭಾರತದಂತೆ ಇತರ ದೇಶಗಳು ಕೂಡ ಈ ಕಾರ್ಯತಂತ್ರವನ್ನು ಅನುಸರಿಸಿ ಅಚ್ಚರಿಯ ಫಲಿತಾಂಶಗಳನ್ನು ಕಂಡಿವೆ' ಎಂದು ವಿಶ್ವಸಂಸ್ಥೆಯ ಇತ್ತೀಚಿನ ವರದಿಯಲ್ಲಿ ಹೇಳಲಾಗಿದೆ.

ವೇಶ್ಯಾವಾಟಿಕೆಯಲ್ಲಿ ಮೊಬೈಲ್ ಪ್ರಭಾವ...
ಲೈಂಗಿಕ ಕಾರ್ಯಕರ್ತೆಯರು ವೇಶ್ಯಾಗೃಹಗಳಿಂದ ಬಿಡುಗಡೆ ಪಡೆದು ಸ್ವತಂತ್ರವಾಗಿ ವೃತ್ತಿ ನಡೆಸುತ್ತಿದ್ದಾರೆ. ಮೊಬೈಲ್ ಬಳಕೆಯಿಂದಾಗಿ ಈ ದಂಧೆಗೆ ಬೇಡಿಕೆ ಹೆಚ್ಚಾಗಿದೆ. ಅನೇಕ ಮಹಿಳೆಯರು ಇದನ್ನು ಉಪವೃತ್ತಿ ಮಾಡಿಕೊಂಡಿದ್ದಾರೆ. `ಈ ದಂಧೆ ಖಾಸಗಿಯಾಗಿ ನಡೆಯುತ್ತಿದೆ. ಹಾಗಾಗಿ ಹಲವರು ಬಹು ಸಲುಭವಾಗಿ ಇದರ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ' ಎನ್ನುತ್ತಾರೆ ನಾರ್ತ್ ಕೆರೊಲಿನಾದಲ್ಲಿ ಸೋಂಕುರೋಗ ತಜ್ಞೆಯಾಗಿರುವ ಸುನೀತಾ ಕೃಷ್ಣನ್.

ಮೊಬೈಲ್ ಪ್ರಭಾವದಿಂದಾಗಿ ದೆಹಲಿಯ ಜಿ.ಬಿ ಹಾಗೂ ಮುಂಬೈ ಕಾಮಾಟಿಪುರದಲ್ಲಿನ ಅನೇಕ ವೇಶ್ಯಾಗೃಹಗಳು ಬಾಗಿಲು ಮುಚ್ಚುವಂತೆ ಆಗಿದೆ. ಕಾಮಾಟಿಪುರದ ಕಿರು ಓಣಿಯಲ್ಲಿ ಚಂಪಾ ಎಂಬಾಕೆ ಸುಮಾರು 50 ವರ್ಷಗಳಿಂದ ವೇಶ್ಯಾವಾಟಿಕೆ ನಡೆಸುತ್ತ್ದ್ದಿದಾಳೆ. ಯಾವಾಗ ಮೊಬೈಲ್ ಕ್ರಾಂತಿ ಆಯಿತೋ ಆವಾಗಿನಿಂದ ಈಕೆಯ ವ್ಯವಹಾರ ನೆಲ ಕಚ್ಚಿದೆ. ` ಕಾಮಾಟಿಪುರದ ಕಥೆ ಮುಗಿಯುತು' ಎಂದು ತನ್ನ ಸುಕ್ಕುಗಟ್ಟಿದ ಕೈಗಳನ್ನು ಹಣೆಗೆ ಒತ್ತಿಕೊಂಡು ನಿಟ್ಟುಸಿರು ಬಿಡುತ್ತಾಳೆ ಚಂಪಾ.

ಹಿಂದೆ ಕಾಮಾಟಿಪುರದಲ್ಲಿ 75ಕ್ಕೂ ಹೆಚ್ಚು ವೇಶ್ಯಾಗೃಹಗಳು ಇದ್ದವು. ಇಂದು ಅವುಗಳ ಸಂಖ್ಯೆ ಕೇವಲ ಎಂಟು. ಕಾಮಾಟಿಪುರದಲ್ಲಾದ ಬದಲಾವಣೆಯು ನಗರ ಪುನರುಜ್ಜೀವನ ಪ್ರಕ್ರಿಯೆ ಭಾಗ. ದೇಶದಲ್ಲಿ ತ್ವರಿತ ಗತಿಯ ಅಭಿವೃದ್ಧಿಯಿಂದಾಗಿ ಕೊಳೆಗೇರಿಗಳಲ್ಲಿ ಮನೆಗಳು ಕಾಣುತ್ತಿವೆ. ಭೂಮಿಯ ಬೆಲೆ ಗಗನಕ್ಕೆ ಏರಿದ ಪರಿಣಾಮ ಅನೇಕ ವೇಶ್ಯಾಗೃಹಗಳು ಬಿಕರಿಯಾಗಿವೆ.

ಈಗ ನಮ್ಮ ದೇಶದಲ್ಲಿ ನಾಲ್ವರಲ್ಲಿ ಮೂವರ ಬಳಿ ಮೊಬೈಲ್ಫೋನ್ಗಳು ಕಾಣುತ್ತವೆ. ಐದು ವರ್ಷಗಳ ಹಿಂದೆ ಮಧ್ಯಮ ವರ್ಗದವರ ಕೈಯಲ್ಲಿ ರಿಂಗಣಿಸುತ್ತಿದ್ದ ಮೊಬೈಲ್ಗಳು ಇಂದು ಎಲ್ಲರ ಕೈಯಲ್ಲಿಯೂ ಓಡಾಡುತ್ತಿವೆ. ತಂತ್ರಜ್ಞಾನ ಕ್ರಾಂತಿಯಿಂದ ಎಲ್ಲವೂ ಬದಲಾಗಿಲ್ಲ. ವೇಶ್ಯಾವಾಟಿಕೆ ಈಗಲೂ ನಡೆಯುತ್ತಿದೆ. ಮಾನವ ಕಳ್ಳಸಾಗಣೆ ನಿರಂತರವಾಗಿ ಮುಂದುವರಿಯುತ್ತಿದೆ. ಹಳ್ಳಿಗಾಡಿನ ಅಮಾಯಕ ಹೆಣ್ಣುಮಕ್ಕಳು ಪಾಪಕೂಪಕ್ಕೆ ಬೀಳುತ್ತಿದ್ದಾರೆ. ಲೈಂಗಿಕ ಕಾರ್ಯಕರ್ತೆಯರಲ್ಲಿ ಹೆಚ್ಚಿನವರು ಅನಕ್ಷರಸ್ಥರು, ಕೆಳವರ್ಗದಿಂದ ಬಂದವರು, ಬಡವರು. ಆದರೆ ಮೊಬೈಲ್ಫೋನ್ ಬಳಕೆಯು ಅವರಿಗೆ ಹಿಂದಿಗಿಂತಲೂ ಹೆಚ್ಚಿನ ಸ್ವಾತಂತ್ರ್ಯವನ್ನು ತಂದುಕೊಟ್ಟಿದೆ.

`ಮೊಬೈಲ್ಫೋನ್ ಎಷ್ಟೊಂದು ಜನಪ್ರಿಯವಾಗಿದೆ ನೋಡಿ, ನನಗೆ ತುಂಬಾ ಸಂತೋಷ ಆಗುತ್ತಿದೆ' ಎನ್ನುತ್ತಾರೆ ಕುಡುಕ ಗಂಡನಿಂದ ಪರಿತ್ಯಕ್ತಳಾಗಿ, ಗುಟ್ಟಾಗಿ ವೇಶ್ಯಾವಾಟಿಕೆಗೆ ಇಳಿದಿರುವ ಖುಷಿ (ಹೆಸರು ಬದಲಾಯಿಸಲಾಗಿದೆ) ಎಂಬ ಮಹಿಳೆ. ಈಕೆಯ ಬಳಿ ವಾರದಲ್ಲಿ ಮೂರರಿಂದ ನಾಲ್ಕು ಗಿರಾಕಿಗಳು ಬರುತ್ತಾರೆ. `ವೇಶ್ಯಾಗೃಹಗಳಲ್ಲಿ ಚಿಕ್ಕಾಸಿಗೆ ಪರದಾಡುವುದಕ್ಕಿಂತ ಸ್ವತಂತ್ರವಾಗಿ ದಂಧೆ ನಡೆಸುವುದು ಎಷ್ಟೋ ಮೇಲು' ಎನ್ನುತ್ತಾರೆ ಅವರು.

`ಸೆಲ್ಫೋನ್ಗಳಿಂದ ಲೈಂಗಿಕ ಕಾರ್ಯಕರ್ತೆಯರು ಹೆಚ್ಚಿನ ಹಣ ಸಂಪಾದಿಸುತ್ತಿದ್ದಾರೆ. ಇದೇ ವೇಳೆ ಈ ಬೆಳವಣಿಗೆಯು ಏಡ್ಸ್ ನಿಯಂತ್ರಣ ಕಾರ್ಯಕ್ರಮಕ್ಕೆ ದೊಡ್ಡ ತೊಡಕಾಗಿದೆ' ಎಂಬುದು ನಿರಂಜನ್ ಅವರ ಕಳವಳ.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.