ಬೆಂಗಳೂರು: ನಗರದ ರೆಸಿಡೆನ್ಸಿ ರಸ್ತೆಯ ಸೆವೆನ್ ಹಿಲ್ಸ್ ಸ್ನೂಕರ್ ಕ್ಲಬ್ನಲ್ಲಿ ಹುಕ್ಕಾ ಸೇವನೆಯಲ್ಲಿ ತೊಡಗಿದ್ದ 18 ವರ್ಷದೊಳಗಿನ ಶಾಲಾ ಮಕ್ಕಳ (ಬ್ಯಾಗ್ಗಳಿಂದ ಮುಖ ಮುಚ್ಚಿದ) ಚಿತ್ರಗಳನ್ನು ಮಾಧ್ಯಮಗಳಿಗೆ ನೀಡಿರುವ ವಿಷಯ ಇದೀಗ ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ. ಅಲ್ಲದೆ, ಇದು ಬಾಲಾಪರಾಧಿಗಳ ನ್ಯಾಯ ಕಾಯ್ದೆ- 2000ರ ಸ್ಪಷ್ಟ ಉಲ್ಲಂಘನೆಯಾಗಿದೆ.

ಸೆವೆನ್ ಹಿಲ್ಸ್ ಸ್ನೂಕರ್ ಕ್ಲಬ್ನ ಮೇಲೆ ದಾಳಿ ನಡೆಸಿರುವುದಕ್ಕೆ ಬಿಬಿಎಂಪಿಗೆ ಅಧಿಕಾರವಿದೆ ಎಂದು ಪಾಲಿಕೆಯ ಪೂರ್ವ ವಲಯದ ಆರೋಗ್ಯಾಧಿಕಾರಿಗಳು ಸಮರ್ಥಿಸಿಕೊಳ್ಳುತ್ತಿದ್ದಾರೆ. ಆದರೆ, ಹೇಗೆ ಈ 18 ವರ್ಷದೊಳಗಿನ ಶಾಲಾ ಮಕ್ಕಳ ಮಾಧ್ಯಮಗಳಲ್ಲಿ ಪ್ರಕಟಿಸಲು ಅವಕಾಶವಿದೆಯೇ ಎಂಬ ಪ್ರಶ್ನೆಗೆ ಅವರಲ್ಲಿ ಸ್ಪಷ್ಟ ಉತ್ತರವಿಲ್ಲ.

ಇಂತಹ ಬಹುತೇಕ ಪ್ರಕರಣಗಳಲ್ಲಿ ಸಣ್ಣ ಪುಟ್ಟ ಅಪರಾಧಗಳಿಗೆಲ್ಲ ಮಕ್ಕಳ ಚಿತ್ರಗಳನ್ನು ಮಾಧ್ಯಮಗಳಲ್ಲಿ ಪ್ರಕಟಿಸಲಾಗುತ್ತಿದೆ. ಇದರಿಂದ ಭವಿಷ್ಯದಲ್ಲಿ ಮಕ್ಕಳ ಮೇಲೆ ಪರಿಣಾಮ ಬೀರಲಿದೆ. ಸಮಾಜ ಕೂಡ ಇಂತಹ ಮಕ್ಕಳನ್ನು ಕೆಟ್ಟ ದೃಷ್ಟಿಯಿಂದ ನೋಡುವುದು ಸಹಜ. ಅದರಲ್ಲೂ ಹೆಣ್ಣು ಮಕ್ಕಳ ಭವಿಷ್ಯದಲ್ಲಿ ಮದುವೆಗೆ ಕೂಡ ಅಡ್ಡಿ.

ಈ ಕಾರಣಕ್ಕಾಗಿಯೇ ಬಾಲಪರಾಧಿಗಳ ಚಿತ್ರಗಳನ್ನು ಮುದ್ರಣ ಅಥವಾ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಕಟಿಸುವುದು ಕಾನೂನು ಬಾಹಿರ. ಸುಪ್ರೀಂಕೋರ್ಟ್ ಕೂಡ ಈ ಸಂಬಂಧ ಒಂದು ಆದೇಶ ಕೂಡ ಹೊರಡಿಸಿದೆ.

ಒಂದು ವೇಳೆ ಮಕ್ಕಳ ಕಲ್ಯಾಣ ಸಮಿತಿ ಎಚ್ಚರಿಕೆ ನೀಡಿದ ನಂತರವೂ ಇಂತಹ ಬಾಲಪರಾಧಿಗಳ ಚಿತ್ರಗಳನ್ನು ಪ್ರಕಟಿಸಿದಲ್ಲಿ ಸಂಬಂಧಪಟ್ಟವರ ವಿರುದ್ಧ 25 ಸಾವಿರ ರೂಪಾಯಿ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ. ಅಲ್ಲದೆ, ಪದೇ ಪದೇ ತಪ್ಪೆಸಗುವವರನ್ನು ಸೆರೆಮನೆಗೆ ಕಳಿಸಲು ಕೂಡ ಕಾನೂನಿನಲ್ಲಿ ಅವಕಾಶ ಕಲ್ಪಿಸಲಾಗಿದೆ.

`ಸೆವೆನ್ ಹಿಲ್ಸ್ ಸ್ನೂಕರ್ ಕ್ಲಬ್ಗೆ ನಾವು ಸ್ನೂಕರ್ ಕ್ಲಬ್ ನಡೆಸಲು ಮಾತ್ರ ಪರವಾನಗಿ ನೀಡಿದ್ದೆವು. ಆದರೆ, ನಿಯಮ ಉಲ್ಲಂಘಿಸಿ ಹುಕ್ಕಾ ಸೇವನೆ ಮಾಡುವುದು ಕಾನೂನುಬಾಹಿರ. ಕೆಎಂಸಿ ಕಾಯ್ದೆ 10ರ ಪ್ರಕಾರ ಇಂತಹ ಕ್ಲಬ್ಗಳ ವಿರುದ್ಧ ದಾಳಿ ನಡೆಸಲು ಪಾಲಿಕೆಗೆ ಅವಕಾಶವಿದೆ. ಅಲ್ಲದೆ, ಸಿಗರೇಟ್ ಮತ್ತು ಇತರೆ ತಂಬಾಕು ಉತ್ಪನ್ನಗಳ ಕಾಯ್ದೆ 2003ರ ಸೆಕ್ಷನ್ 19 ಮತ್ತು 21ರ ಪ್ರಕಾರ ಕೂಡ ಪಾಲಿಕೆ ಕ್ರಮ ಜರುಗಿಸಬಹುದಾಗಿದೆ~ ಎಂದು ದಾಳಿಯ ನೇತೃತ್ವ ವಹಿಸಿದ್ದ ಬಿಬಿಎಂಪಿ ಪೂರ್ವ ವಲಯದ ಆರೋಗ್ಯಾಧಿಕಾರಿಯೊಬ್ಬರು ಸಮರ್ಥಿಸಿಕೊಂಡಿದ್ದಾರೆ.

`ಸೆವೆನ್ ಹಿಲ್ಸ್ ಸ್ನೂಕರ್ ಕ್ಲಬ್ನ ಬಗ್ಗೆ ದೂರುಗಳು ಬಂದಿದ್ದರಿಂದ ದಾಳಿ ನಡೆಸಿದೆವು. ಶಾಲಾ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಇದು ಅನಿವಾರ್ಯ~ ಎಂದು ಅವರು ಪ್ರತಿಕ್ರಿಯಿಸಿದರು. ಸಾರ್ವಜನಿಕ ತಾಣಗಳಲ್ಲಿ ಹುಕ್ಕಾ ಸೇವನೆ ಮಾಡುವಂತಹ ಕ್ಲಬ್ಗಳ ವಿರುದ್ಧ ದಾಳಿ ನಡೆಸಲು 2011ರ ಮಾರ್ಚ್ 29ರಂದು ನಡೆದ ಪಾಲಿಕೆ ಸಭೆಯಲ್ಲಿಯೂ ನಿರ್ಣಯ ಕೈಗೊಳ್ಳಲಾಗಿದೆ~ ಎಂದು ಸ್ಪಷ್ಟನೆ ನೀಡಿದ ಅವರು, ಹೆರಾಯಿನ್ ಸೇವನೆಯಂತಹ ಪ್ರಕರಣಗಳಲ್ಲಾದರೆ ಪೊಲೀಸರು ದಾಳಿ ನಡೆಸಬಹುದು ಎಂದರು.

ಸ್ಪಷ್ಟ ಉಲ್ಲಂಘನೆ: ಹುಕ್ಕಾ ಸೇವನೆಯಲ್ಲಿ ತೊಡಗಿದ್ದ ಶಾಲಾ ಮಕ್ಕಳ ಚಿತ್ರಗಳನ್ನು ಮಾಧ್ಯಮಗಳಿಗೆ ನೀಡಿರುವುದು ಬಾಲಪರಾಧಿ ನ್ಯಾಯ ಕಾಯ್ದೆ 2000ರ ಸ್ಪಷ್ಟ ಉಲ್ಲಂಘನೆ. ನಾವು ಈ ಪ್ರಕರಣದಲ್ಲಿ ಭಾಗಿಯಾದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸುತ್ತೇವೆ ಎಂದು ಮಕ್ಕಳ ಹಕ್ಕುಗಳ ಆಯೋಗದ ಸದಸ್ಯರೊಬ್ಬರು ತಿಳಿಸಿದ್ದಾರೆ.

`ಯಾವುದೇ ಪ್ರಕರಣದಲ್ಲಿ ಭಾಗಿಯಾಗಿರುವಂತಹ ಬಾಲಪರಾಧಿಗಳ ಚಿತ್ರ, ಹೆಸರು, ವಿವರಗಳನ್ನು ಮಾಧ್ಯಮಗಳಲ್ಲಿ ಪ್ರಕಟಿಸುವುದು ಬಾಲಪರಾಧಿ ನ್ಯಾಯ ಕಾಯ್ದೆಯ ನಿಯಮ 21ರ ಉಪ ಕಲಂ 1ರ ಸ್ಪಷ್ಟ ಉಲ್ಲಂಘನೆ. ಮಕ್ಕಳ ಚಿತ್ರ ಬಿಡಿ, ಶಾಲೆಯ ವಿವರ ಕೂಡ ನೀಡಲು ಅವಕಾಶವಿಲ್ಲ~ ಎಂದರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ.

`ಪರೀಕ್ಷೆ ಸಮಯದಲ್ಲಿ ಇಂತಹ ಘಟನೆ ನಡೆದಿರುವುದು ದುರದೃಷ್ಟಕರ. ಶಾಲಾ ಆಡಳಿತ ಮಂಡಳಿಯು ಮೊದಲು ಮಕ್ಕಳು ಹಾಗೂ ಪೋಷಕರಿಗೆ ಸೂಕ್ತ ಸಲಹೆ-ಮಾರ್ಗದರ್ಶನ ನೀಡಬೇಕು. ಒಂದು ವೇಳೆ ಮಕ್ಕಳು ಇಂತಹ ಕೆಟ್ಟ ಹವ್ಯಾಸ ಬೆಳೆಸಿಕೊಂಡಿದ್ದಲ್ಲಿ ಸೂಕ್ತ ಚಿಕಿತ್ಸೆ ಕೊಡಿಸಲು ಮುಂದಾಗಬೇಕು. ಯಾವುದೇ ಕಾರಣಕ್ಕೂ ಶಾಲಾ ಆಡಳಿತ ಮಂಡಳಿ ಮಕ್ಕಳನ್ನು ಶಾಲೆಯಿಂದ ಹೊರ ಹಾಕಬಾರದು~ ಎನ್ನುತ್ತಾರೆ ಮಕ್ಕಳ ಹಕ್ಕುಗಳ ಕಾರ್ಯಕರ್ತರೊಬ್ಬರು.

ಪರಿಶೀಲಿಸಿ ಕ್ರಮ ಜರುಗಿಸುತ್ತೇವೆ: `ಕಾಣೆಯಾದ ಸಂದರ್ಭಗಳಲ್ಲಿ ಹೊರತುಪಡಿಸಿ, ಬೇರೆ ಪ್ರಕರಣಗಳಲ್ಲಿ ಈ ರೀತಿ ಬಾಲಾಪರಾಧಿ ಮಕ್ಕಳ ಚಿತ್ರಗಳನ್ನು ಮಾಧ್ಯಮಗಳಲ್ಲಿ ಪ್ರಕಟಿಸುವುದು ತಪ್ಪು. ಈ ಪ್ರಕರಣದಲ್ಲಿ ಯಾವ ರೀತಿಯ ಕ್ರಮ ಜರುಗಿಸಬಹುದು ಎನ್ನುವ ಬಗ್ಗೆ ಮೊದಲು ಪರಿಶೀಲಿಸಿ ನಂತರ ಸೂಕ್ತ ತೀರ್ಮಾನ ಕೈಗೊಳ್ಳುತ್ತೇವೆ~ ಎನ್ನುತ್ತಾರೆ ಸರ್ಕಾರಿ ಬಾಲಕರ ಮಂದಿರದ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷೆ ರಾಧಾ ಎಸ್. ಮೂರ್ತಿ.

ಪಾಲಿಕೆ ಆಯುಕ್ತರು ಏನಂತಾರೆ?
`ನಿಯಮ ಉಲ್ಲಂಘಿಸುವಂತಹ ಸ್ನೂಕರ್ ಕ್ಲಬ್ ಮೇಲೆ ದಾಳಿ ನಡೆಸಲು ಪಾಲಿಕೆಗೆ ಅಧಿಕಾರವಿದೆ. ಆದರೆ, ಬಾಲಾಪರಾಧಿಗಳ ವಿರುದ್ಧ ಕ್ರಮ ಜರುಗಿಸುವ ಅಧಿಕಾರ ಇಲ್ಲ~ ಎಂದು ಬಿಬಿಎಂಪಿ ಆಯುಕ್ತ ಎಂ.ಕೆ. ಶಂಕರಲಿಂಗೇಗೌಡ ಅವರು ಪ್ರತಿಕ್ರಿಯಿಸಿದರು.

ಇಂತಹ ಪ್ರಕರಣಗಳಲ್ಲಿ ಬಾಲಪರಾಧಿಗಳು ತಪ್ಪು ಮಾಡಿರುವುದು ಕಂಡು ಬಂದಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಬೆಂಗಳೂರು ವೆುಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಅಧಿಕಾರ ಹೊಂದಿರುವ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರ ಮುಂದೆ ಹಾಜರುಪಡಿಸಬಹುದು. ಬಾಲಪರಾಧಿಗಳು ತಪ್ಪಿತಸ್ಥರು ಎಂದು ಸಾಬೀತಾದಲ್ಲಿ ಮಾತ್ರ ಸರ್ಕಾರಿ ಬಾಲಕರ ಬಾಲಮಂದಿರಕ್ಕೆ ಸೇರಿಸಬಹುದು ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.