ಮಂಗಳೂರು: `ದೇವಸ್ಥಾನದೊಳಗೆ ಈಗಲೂ ನಮಗೆ ಮುಕ್ತ ಪ್ರವೇಶವಿಲ್ಲ. ನಮ್ಮ ಜನರನ್ನು ಈಗಲೂ ಎಲ್ಲ ಅನಿಷ್ಠಗಳನ್ನು ಧಾರೆ ಎರೆದುಕೊಳ್ಳಲೆಂದೇ ಹುಟ್ಟಿದವರಂತೆ ಕಾಣಲಾಗುತ್ತದೆ. ಎಂಜಲೆಲೆ ದಾನ ಮಾಡುವಂಥ ಅಜಲು ಪದ್ಧತಿಯ ಪಳೆಯುಳಿಕೆಗಳು ಕರಾವಳಿಯ ಗ್ರಾಮೀಣ ಭಾಗದಲ್ಲಿ ಧಾರಾಳವಾಗಿ ಕಾಣಸಿಗುತ್ತವೆ. ನಮ್ಮವರು ಎಲ್ಲರಂತೆ ಸ್ವಾಭಿಮಾನದಿಂದ ಬದುಕುವ ದಿನ ಯಾವಾಗ ಬರುತ್ತದೋ ತಿಳಿಯದು.....~

ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಅತಿಥಿ ಉಪನ್ಯಾಸಕ ರಾಗಿರುವ ದಿನಕರ್ ತಮ್ಮ ಸಮುದಾಯದವರನ್ನು ಸಮಾಜ ನಡೆಸಿಕೊಳ್ಳುತ್ತಿರುವ ಬಗ್ಗೆ ನೋವು ತೋಡಿಕೊಂಡಿದ್ದು ಹೀಗೆ.

ಸರ್ಕಾರ ರಚಿಸಿದ ಕಾಯಿದೆಯ ರಕ್ಷಣೆಯ ಹೊರತಾ ಗಿಯೂ ಶೈಕ್ಷಣಿಕವಾಗಿ ಮುಂದುವರಿದ ಕರಾವಳಿಯ ದಕ್ಷಿಣ ಕನ್ನಡ ಹಾಗೂ ಉಡುಪಿಯಂತಹ ಜಿಲ್ಲೆಗಳಲ್ಲಿ ಬುಡಕಟ್ಟು ಸಮುದಾಯದ ಜನರನ್ನು ಈಗಲೂ ಅಮಾನವೀಯವಾಗಿ ನಡೆಸಿಕೊಳ್ಳುವುದನ್ನು ಅವರು ಎಳೆ ಎಳೆಯಾಗಿ ವಿವರಿಸಿದರು.

`ಅನೇಕ ಕಟ್ಟುಕಟ್ಟಳೆಗಳನ್ನು ಆಚರಿಸುವ ಮೂಲಕ ಹಿಂದಿನಿಂದಲೂ ಕೊರಗರನ್ನು ಹೀನಾಯವಾಗಿ ನಡೆಸಿಕೊಂಡು ಬರಲಾಗುತ್ತಿದೆ. ಕೊರಗರ ಸ್ವಾಭಿಮಾನಕ್ಕೆ ಧಕ್ಕೆ ತರುವ ಈ ಎಲ್ಲ ಅಂಶಗಳನ್ನೇ ಅಜಲು ಪದ್ಧತಿ ಎಂದು ಕರೆಯಬಹುದು.

ಈ ಅನಿಷ್ಠ ಪದ್ಧತಿಯ ಪಳಿಯುಳಿಕೆಗಳು ಕರಾವಳಿಯ ಗ್ರಾಮೀಣ ಭಾಗದಲ್ಲಿ ಇನ್ನೂ ಜೀವಂತವಾಗಿವೆ. ಕರ್ನಾಟಕ ಕೊರಗರ ಅಜಲು ಪದ್ಧತಿ ನಿಷೇಧ ಕಾಯಿದೆ 2000 ಜಾರಿಗೆ ಬಂದು 12 ವರ್ಷ ಕಳೆದರೂ ಅದರ ಪರಿಣಾಮಕಾರಿ ಅನುಷ್ಠಾನದ ಬಗ್ಗೆ ಸರ್ಕಾರಿ ಇಲಾಖೆಗಳು, ಸಾಮಾಜಿಕ, ಧಾರ್ಮಿಕ ಮುಖಂಡರು ಎನಿಸಿಕೊಂಡವರು ಜಾಣಕುರುಡು ಪ್ರದರ್ಶಿಸುತ್ತಲೇ ಇದ್ದಾರೆ.

ಉದಾಹರಣೆಗೆ, ಕಂಬಳಕ್ಕೆ ಮುನ್ನಾ ದಿನ ಕಂಬಳ ಗದ್ದೆಯನ್ನು ಕೊರಗರು ರಾತ್ರಿ ಇಡೀ ಕಾಯುವ ಪದ್ಧತಿ ಇದೆ. ಇದಕ್ಕೆ ಹನಿ ಕಾಯುವುದು ಎನ್ನುತ್ತಾರೆ. ಈ ಪದ್ಧತಿ ಆಚರಣೆ ವೇಳೆ ಕೊರಗರು ಎಂದರೆ ಉಳಿದ ಎಲ್ಲ ಜಾತಿಯವರ ಚಾಕರಿಗೆ ಇರುವವರು ಎಂಬಂತೆ ನಡೆಸಿಕೊಳ್ಳಲಾಗುತ್ತದೆ. ಸರ್ಕಾರ ಇದನ್ನು ನಿಷೇಧಿಸಿದ್ದರೂ ಆಸೆ ಆಮಿಷ ಒಡ್ಡಿ ಬಡ ಕೊರಗರನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತದೆ. ಕೊರಗರು ಒಪ್ಪದಿದ್ದರೆ ದೈವ ಭೂತಗಳ ಶಾಪಕ್ಕೆ ಬಲಿ ಆಗಬೇಕಾಗುತ್ತದೆ ಎಂದು ಹೆದರಿಸುತ್ತಾರೆ. ಅಂತೆಯೇ ದೇವಸ್ಥಾನಗಳ ಜಾತ್ರೆ ವೇಳೆ ಕೊರಗರಿಗೆ ಎಂಜಲು ಎಲೆ ನೀಡುವ ಪದ್ಧತಿ ಈಗಲೂ ಜೀವಂತವಾಗಿದೆ~ ಎಂದು ಅವರು ವಿವರಿಸಿದರು.

`ಈ ಪದ್ಧತಿ ರಾಜಾರೋಷವಾಗಿ ನಡೆಯುತ್ತಿದ್ದರೂ ಅಧಿಕಾರಿಗಳು ಸೊಲ್ಲೆತ್ತುವುದಿಲ್ಲ. ಕೊರಗರ ಸಂಘಟನೆಗಳು ಈ ಬಗ್ಗೆ ಗಮನ ಸೆಳೆದರೂ ಇಂಥ ಅನಿಷ್ಠ ಪದ್ಧತಿ ಪೋಷಿಸುವವರ ವಿರುದ್ಧ ಯಾವ ಕ್ರಮವೂ ಆಗುವುದಿಲ್ಲ. ನಮ್ಮವರು ಬಡವರು. ಶಿಕ್ಷಣದಿಂದ ವಂಚಿತರು. ಪ್ರಪಂಚ ಎಷ್ಟೇ ಮುಂದುವರಿದಿ ರಬಹುದು; ಆದರೆ, ಇಂತಹ ಅನಿಷ್ಟ ಪದ್ಧತಿ ಮುಂದುವರಿ ಯುತ್ತಿರುವುದರಿಂದಾಗಿ ಕೊರಗರು ಮಾತ್ರ ಹಿಂದೆಯೇ ಉಳಿಯುವಂತಾಗಿದೆ~ ಎಂದು ಅವರು ನೋವು ತೋಡಿಕೊಂಡರು.

`ಹಳ್ಳಿಗಳಲ್ಲಿ ಪಂಚಮದಾನ, ಗರ್ಭಿಣಿಯರ ಸೀಮಂತದ ವೇಳೆ ಕೊರಗರಿಗೆ ಆಪತ್ತು ಕಳೆಯಲು ದಾನ ನೀಡುವ ಪದ್ಧತಿಗಳಿವೆ. ಪಂಚಮದಾನ ನೀಡುವಾಗ ಗ್ರಹಚಾರಕ್ಕೆ ತುತ್ತಾದ ವ್ಯಕ್ತಿಯ ತಲೆಗೆ ಆತ ಉಂಡ ಎಂಜಲೆಲೆ ನೀವಾಡಿಸಿ, ಅದಕ್ಕೆ ಮತ್ತೊಂದಿಷ್ಟು ಅನ್ನ ಬಡಿಸಿ, ಅದಕ್ಕೆ ಅವರ ತಲೆ ಕೂದಲು ಹಾಗೂ ಉಗುರುಗಳನ್ನು ಬೆರೆಸಿ ನೀಡಲಾಗುತ್ತದೆ. ದಾನ ಪಡೆದ ಕೊರಗತಿ ಅದನ್ನು ಉಣ್ಣಬೇಕು. ಈ ರೀತಿ ದಾನ ನೀಡುವುದರಿಂದ ದಾನಿಗಳ ಪಾಪ ಪರಿಹಾರವಾಗಿ ಅದು ಕೊರಗತಿಯನ್ನು ಸುತ್ತಿಕೊಳ್ಳುತ್ತದೆ ಎಂಬುದು ನಂಬಿಕೆ. ಹಸಿವಿನಿಂದ ಕಂಗೆಟ್ಟ ನಮ್ಮವರು ಗ್ರಹಾಚಾರ ಬಂದರೂ ಪರವಾಗಿಲ್ಲ, ಅನ್ನ ಸಿಗಲಿ ಎಂದು ದಾನ ಸ್ವೀಕರಿಸುತ್ತಾರೆ. ಈ ರೀತಿ ಮಾಡುವುದು ತಪ್ಪು ಎಂದು ದಾನ ಕೊಡುವವರಿಗೆ ಅನಿಸದಿರುವುದು ದುರದೃಷ್ಟ~ ಎಂದು ಅಜಲು ಪದ್ಧತಿಯ ಅನಿಷ್ಠದ ಕುರಿತು ಕೃತಿ ರಚಿಸಿರುವ ಪಾಂಗಾಳ ಬಾಬು ಕೊರಗ ವಿವರಿಸಿದ್ದಾರೆ.

ಪ್ರವೇಶ ಇಲ್ಲ:`ಡೋಲು ಬಡಿಯುವುದು ಕೊರಗರ ಕಲೆ. ಅದನ್ನು ಮುಂದುವರಿಸಲು ಯಾರ ಅಡ್ಡಿಯೂ ಇಲ್ಲ. ಆದರೆ ಆ ಕಲೆಯನ್ನೇ ನೆಪವಾಗಿಸಿಕೊಂಡು ಕೊರಗರನ್ನು ಕೀಳಾಗಿ ನಡೆಸಿಕೊಳ್ಳಲಾಗುತ್ತಿದೆ. ವಾದ್ಯದವರು ದೇವಳದ ಒಳಾಂಗಣದಲ್ಲಿ ವಾದ್ಯ ಊದಬಹುದು. ಆದರೆ ಡೋಲು ಹಿಡಿದ ಕೊರಗರಿಗೆ ದೇವಳದ ಒಳಾಂಗಣಕ್ಕೆ ಪ್ರವೇಶವಿಲ್ಲ. ಜತೆಗೆ ಅಸ್ಪೃಶ್ಯತೆಯ ಯಾತನೆ ಬೇರೆ~ ಎಂದು ನೋವಿನಿಂದ ಹೇಳುತ್ತಾರೆ ಬಾಬು.

ಈ ಆಚರಣೆಗಳನ್ನು ತಡೆಯುವುದು ಸುಲಭದ ಕೆಲಸವಲ್ಲ. ಅಜಲು ಪದ್ಧತಿಯಿಂದ ಕೊರಗ ಸಮುದಾಯ ಅನುಭವಿಸುವ ಅವಮಾನದ ಯಾತನೆ ಬಗ್ಗೆ ಅಧಿಕಾರಿಗಳಿಗೆ ತಿಳಿಯಪಡಿಸಬೇಕು. ಕಂಬಳಕ್ಕೆ ಹನಿ ಕಾಯಲು ಹೋಗುವವರ ಕುಟುಂಬಗಳು ಮಕ್ಕಳನ್ನೂ ಜತೆಯಲ್ಲೇ ಕರೆದೊಯ್ಯುತ್ತಾರೆ. ಆಗ ಮಕ್ಕಳ ಶಿಕ್ಷಣಕ್ಕೂ ಅಡ್ಡಿಯಾಗುತ್ತದೆ. ಮೋಜಿಗೆ ಬಲಿ ಬೀಳುವ ಮಕ್ಕಳು ಸಣ್ಣ ಪ್ರಾಯದಲ್ಲೇ ದಾರಿ ತಪ್ಪುತ್ತಾರೆ. ಅವರಿಗೆ ಸ್ವಾಭಿಮಾನದ ಪಾಠ ಹೇಳಿ ಕೊಡುವುದು ಬಹಳ ಕಷ್ಟ. ಇದು ಈ ಕೀಳು ಪದ್ಧತಿಯನ್ನು ಬುಡಸಮೇತ ಕೀಳುವ ಯತ್ನವನ್ನೇ ಬುಡಮೇಲು ಮಾಡುತ್ತದೆ. ಹಾಗಾಗಿ ಕೊರಗ ಸಂಘಟನೆಗಳು ಎಷ್ಟೇ ಜಾಗೃತಿ ಮೂಡಿಸಿದರೂ ಗ್ರಾಮೀಣ ಕೊರಗರು ಮತ್ತೆ ಮತ್ತೆ ಅಜ್ಜ ನೆಟ್ಟ ಆಲದ ಮರಕ್ಕೆ ಜೋತು ಬೀಳುತ್ತಿದ್ದಾರೆ~ ಎಂದು ದಿನಕರ್ ಬೇಸರ ವ್ಯಕ್ತಪಡಿಸುತ್ತಾರೆ.

`ಅಜಲು ಪದ್ಧತಿ ಸಂಪೂರ್ಣ ನಿರ್ಮೂಲನೆ ಮಾಡಲು ಸರ್ಕಾರ ಸಮಗ್ರ ಕಾರ್ಯಕ್ರಮ ಹಾಕಿಕೊಳ್ಳಬೇಕು. ಕೇವಲ ಕಾಯಿದೆ ರೂಪಿಸಿದರೆ ಸಾಲದು; ಅದರ ಅನುಷ್ಠಾನಕ್ಕೂ ಇಚ್ಛಾಶಕ್ತಿ ಪ್ರದರ್ಶಿಸಬೇಕು. ಇತ್ತೀಚೆಗೆ ಅಧಿಕಾರಿಗಳಿಗೆ ಗ್ರಾಮ ಪಂಚಾಯಿತಿ ಸದಸ್ಯರಿಗೆ ಈ ಬಗ್ಗೆ ತರಬೇತಿ ನೀಡುವ ಪ್ರಯತ್ನಗಳು ಅಲ್ಲಲ್ಲಿ ನಡೆಯುತ್ತಿವೆ. ನಮ್ಮಂತೆಯೇ ಇರುವ ಇನ್ನೊಬ್ಬ ವ್ಯಕ್ತಿಯನ್ನು, ಜನಾಂಗವನ್ನು ಹೇಯವಾಗಿ ನಡೆಸಿಕೊಳ್ಳುವುದು ನನ್ನ ಆತ್ಮಗೌರವಕ್ಕೆ ಕುಂದು ತಂದುಕೊಂಡಂತೆ ಎಂಬ ಪ್ರಜ್ಞೆ ಎಲ್ಲರಲ್ಲಿ ಜಾಗೃತವಾದರೆ ಮಾತ್ರ ಕೊರಗ ಸಮುದಾಯದಂತಹ ಶೋಷಿತ ಸಮಾಜ ತಲೆಯೆತ್ತಿ ಬದುಕು ಕಟ್ಟಿಕೊಳ್ಳಬಹುದು~ ಎನ್ನುತ್ತಾರೆ ಅವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.